Dboss: ಡಿ ಬಾಸ್ ರವರ ಈ ವಿಡಿಯೋ ನೋಡಿದ್ರೆ ನೀವು ಕೂಡ ಅಂತೀರಾ ಸರಳತೆಯ ಸರದಾರ ಅಂತ!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಟಾಪ್ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಿಜಕ್ಕೂ ಕೂಡ ಅವರಿಗಿರುವಂತಹ ಅಭಿಮಾನಿ ಬಳಗವನ್ನು ಇಂದಿನ ಜನರೇಶನ್ ನ ಯಾವುದೇ ನಾಯಕ ನಟರು ಹೊಂದಿಲ್ಲ ಎನ್ನುವುದನ್ನು ಹೇಳಬಹುದಾಗಿದೆ.

ಒಬ್ಬ ಜನ ಪ್ರತಿನಿಧಿ ಮಾಡುವಂತ ಸಾಮಾಜಿಕ ಸೇವೆಗಳಿಗಿಂತ ಹೆಚ್ಚಾಗಿ ಒಬ್ಬ ನಾಯಕ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಮಾಡುವಂತಹ ಕೆಲಸಗಳು ಕೂಡ ಅದಕ್ಕಿಂತ ಉತ್ತಮವಾದುದು ಹಾಗೂ ಜನರಿಗೆ ಉಪಯೋಗಕರವಾದದ್ದು ಎನ್ನುವುದನ್ನು ನೆನಪಿನಲ್ಲಿ ಹೇಳಬೇಕಾಗಿದೆ. ಅದಕ್ಕಾಗಿ ಅಭಿಮಾನಿಗಳು ಅವರನ್ನು ಆರಾಧ್ಯ ದೈವದಂತೆ ಪೂಜಿಸುತ್ತಾರೆ.

ಇನ್ನು ಅವರ ಬಳಿ ಕೋಟಿ ಕೋಟಿ ಬೆರೆಬಾಳುವಂತಹ ಲ್ಯಾಂಬೋರ್ಗಿನಿ ಸೇರಿದಂತೆ ಹಲವಾರು ದುಬಾರಿ ಕಾರುಗಳು ಇರಬಹುದು ಆದರೆ ಅವರು ಎಷ್ಟು ಸಿಂಪಲ್ ಎನ್ನುವುದನ್ನು ಹಲವಾರು ವಿಡಿಯೋಗಳು ಹಾಗೂ ಫೋಟೋಗಳು ಕೂಡ ನಮಗೆ ಸಾಬೀತುಪಡಿಸಿ ತೋರಿಸುತ್ತವೆ. ಇನ್ನು ಅದಕ್ಕೆ ಉದಾಹರಣೆ ಎನ್ನುವಂತೆ ಒಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅದನ್ನು ಕೂಡ ನೀವು ನೋಡಬಹುದು.

ಹೌದು ಫೈವ್ ಸ್ಟಾರ್ ಹೋಟೆಲ್ ಅನ್ನು ಖರೀದಿಸುವ ಹಣ ಇದ್ದರೂ ಕೂಡ ತಮ್ಮ ಸ್ನೇಹಿತರ ಜೊತೆಗೆ ಸಾಮಾನ್ಯ ಹೋಟೆಲ್ಗೆ ಹೋಗಿ ಅವರು ತಮಗೆ ಇಷ್ಟ ಆಗಿರುವಂತಹ ನಾನ್ ವೆಜ್ ಖಾದ್ಯಗಳನ್ನು ತಿಂದು ಸರಳತೆಯ ಸರದಾರನಾಗಿ ಅವರು ಕಂಡುಬಂದ ರೀತಿ ನಿಜಕ್ಕೂ ಕೂಡ ಆಶ್ಚರ್ಯಕರವಾಗಿದ್ದು ವಿಡಿಯೋವನ್ನು ನೀವು ಕೂಡ ನೋಡಬಹುದಾಗಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!