Chanakya Neethi: ಈ ರೀತಿಯ ಮಹಿಳೆಯರನ್ನು ಮದುವೆ ಆಗಲೇಬಾರದಂತೆ ಚಾಣಕ್ಯರು ಹೇಳಿರುವ ಮಾತಿದು!

Chanakya Neethi ಯಶಸ್ವಿ ಜೀವನಕ್ಕಾಗಿ ಪ್ರತಿಯೊಬ್ಬರೂ ಕೂಡ ಚಾಣಕ್ಯನ ಗ್ರಂಥದ ನೀತಿಗಳನ್ನು ಅನುಸರಿಸಲೇಬೇಕು ಎನ್ನುವುದಾಗಿ ನಮ್ಮ ಹಿರಿಯರು ನಮಗೆ ಹೇಳುತ್ತಾರೆ. ಜೀವನದ ಹಲವಾರು ಘಟಕಗಳನ್ನು ಚಾಣಕ್ಯರ ಗ್ರಂಥವನ್ನು(Chanakya) ಅನುಸರಿಸಿ ನಾವು ಗೆಲ್ಲಬಹುದು. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ದಾಂಪತ್ಯ ಜೀವನದ ಕುರಿತಂತೆ.

ಯಾವ ರೀತಿಯ ಮಹಿಳೆಯರನ್ನು ಮದುವೆ ಆಗಬೇಕು ಹಾಗೂ ಯಾವ ರೀತಿಯ ಮಹಿಳೆಯರನ್ನು ಮದುವೆ ಆಗಬಾರದು ಎನ್ನುವ ಕುರಿತಂತೆ ಕೂಡ ಬುದ್ಧಿವಂತ ಆಚಾರ್ಯ ಚಾಣಕ್ಯರು(Acharya Chanakya) ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಹಾಗಿದ್ದರೆ ಬನ್ನಿ ಇಂದಿನ ಲೇಖನಿಯಲ್ಲಿ ಯಾವ ರೀತಿಯ ಮಹಿಳೆಯರನ್ನು ಮದುವೆ ಆಗಬಾರದು ಎನ್ನುವ ವಿಚಾರವನ್ನು ತಿಳಿದುಕೊಳ್ಳೋಣ.

ಮೊದಲಿಗೆ ಚಾಣಕ್ಯರು(Chanakya) ಹೇಳುವ ಪ್ರಕಾರ ಹಿರಿಯರಿಗೆ ಹಾಗೂ ಕುಟುಂಬದ ಸದಸ್ಯರಿಗೆ ಪ್ರೀತಿ ಹಾಗೂ ಗೌರವಗಳನ್ನು ನೀಡಿದಂತಹ ಮತ್ತು ಕುಟುಂಬದ ಮೌಲ್ಯಗಳು ತಿಳಿಯದಂತಹ ಹೆಣ್ಣನ್ನು ಯಾವತ್ತೂ ಕೂಡ ಮದುವೆಯಾಗಲು ಹೋಗಬೇಡಿ ಎಂಬುದಾಗಿ ಹೇಳಿದ್ದಾರೆ. ಹಾಗೆ ಮದುವೆಯಾದ ನಂತರ ಕುಟುಂಬವನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಾಳೆ ಎಂಬುದು ಅವರ ಗ್ರಂಥದಲ್ಲಿ ಇರುವಂತಹ ಅಭಿಪ್ರಾಯವಾಗಿದೆ.

ಸದಾಕಾಲ ಗಂಡನ ಹಣ ಹಾಗೂ ಗಂಡನಿಂದ ಉಡುಗೊರೆಗಳನ್ನು ಅಪೇಕ್ಷಿಸುವಂತಹ ಹೆಣ್ಣನ್ನು ಕೂಡ ಮದುವೆ ಆಗಬಾರದು ಎಂಬುದಾಗಿ ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಯಾವುದೇ ಸಂದರ್ಭದಲ್ಲಿ ಕಷ್ಟ ಎದುರಾದರೆ ಆಕೆ ನಿಮ್ಮ ಪರವಾಗಿ ನಿಲ್ಲಲು ಸಾಧ್ಯವೇ ಇಲ್ಲ ಎಂಬುದು ಚಾಣಕ್ಯರ ಅಭಿಪ್ರಾಯವಾಗಿದೆ. ಇಂತಹ ಮನೋಭಾವನೆ ಹಾಗೂ ಗುಣಲಕ್ಷಣಗಳನ್ನು ಹೊಂದಿರುವ ಹೆಣ್ಣನ್ನು ಮದುವೆಯಾಗುವುದಕ್ಕೆ ಹೋಗಬೇಡಿ.

Leave a Comment

error: Content is protected !!