Darshan Thoogudeepa: ಡಿಬಾಸ್ ಬರ್ತಡೇ ದಿನ ಡಿಬಾಸ್ ರನ್ನು ತಬ್ಬಿಕೊಂಡ ಅಪ್ಪು. ವೈರಲ್ ಆಯ್ತು ಫೋಟೋ!

Darshan Thoogudeepa ಅಂತೂ ಇಂತೂ ಹಲವಾರು ವರ್ಷಗಳ ಕಾಲ ಲಾಕ್ ಡೌನ್ ಹಾಗೂ ಅಪ್ಪು ಅವರ ಮರಣದ ವಿಚಾರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್( challenging Star Darshan) ಅವರ ಬರ್ತಡೇ ನಿಂತಿತ್ತು ಈಗ ಈ ವರ್ಷ ಅದು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಂಪೂರ್ಣಗೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಡಿ ಬಾಸ್(Dboss) ಮನೆಯ ಮುಂದೆ ಅಭಿಮಾನಿಗಳು ನೆರೆದಿದ್ದು ತಮ್ಮ ನೆಚ್ಚಿನ ನಟನಿಗೆ ಬರ್ತಡೆ ವಿಶ್ ಮಾಡಿದ್ದಾರೆ.

ಹಿಂದಿಯ ಟಿವಿ ಚಾನಲ್ ಗಳು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದು ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದ ಮೂಲಕ ಹಲವಾರು ಸೆಲೆಬ್ರಿಟಿಗಳು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪು ಅವರ ಬಗ್ಗೆ ಇರುವಂತಹ ಒಂದು ಫೋಟೋ ಆಗಿದೆ.

Dacchu With Appu

ನಿಮಗೆ ತಿಳಿದಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ನಡುವೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದ್ದು ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು. ಈ ನಡುವೆ ಕೂಡ ಅಪ್ಪು ಅಭಿಮಾನಿಗಳು ಒಂದು ಫೋಟೋವನ್ನು ಎಡಿಟ್ ಮಾಡಿ ಡಿ ಬಾಸ್ ಗೆ ಜನ್ಮದಿನದ ಶುಭಾಶಯಗಳನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಕೋರಿದ್ದಾರೆ.

ಎಡಿಟ್ ಮಾಡಲಾಗಿರುವ ಫೋಟೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಪ್ಪು(Appu) ಅಪ್ಪಿಕೊಂಡಂತೆ ಎಡಿಟ್ ಮಾಡಲಾಗಿದ್ದು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ಮೂಡುವಂತೆ ಮಾಡಿದೆ. ನಿಮಗೂ ಕೂಡ ಈ ಫೋಟೋ ಇಷ್ಟವಾಗಿದ್ದರೆ ತಪ್ಪದೇ ಶೇರ್ ಮಾಡಿ.

Leave a Comment

error: Content is protected !!