Kiccha Sudeep: ಕಾಂಗ್ರೆಸ್ಸೂ ಅಲ್ಲಾ ಬಿಜೆಪಿನೂ ಅಲ್ಲ ಕಿಚ್ಚ ಸೇರ್ತಿರೋದು ಮೂರನೇ ಪಕ್ಷಕ್ಕೆ. ಪಕ್ಷದ ಹೆಸರು ಕೇಳಿದ್ರೆ ನೀವೂ ಕೂಡ ಸುಸ್ತಾಗ್ತೀರ.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದಾರೆ. ನಟನೆ ಸಿಂಗರ್ ನಿರ್ಮಾಪಕ ನಿರ್ದೇಶಕ ಬಿಗ್ ಬಾಸ್ ಹೋಸ್ಟ್ ಮತ್ತು ಕ್ರಿಕೆಟರ್ ಕುಕ್ ಆಗಿ ಕೂಡ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಕಿಚ್ಚ ಸುದೀಪ್(Kiccha Sudeep) ಅವರು ನಿರ್ವಹಿಸಿದ ಜವಾಬ್ದಾರಿ ಇಲ್ಲ ಎಂಬುದನ್ನು ಈ ಮೂಲಕ ನಾವು ಹೇಳಬಹುದು.

ಹೌದು ಗೆಳೆಯರೇ, ಆದರೆ ಕಿಚ್ಚ ಸುದೀಪ್ ಅವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಅಭಿಮಾನಿಗಳಿಗೆ ಅಹಿತ ಎನಿಸುವಂತಹ ಸುದ್ದಿಗಳು ಓಡಾಡುತ್ತಿದ್ದು ಅದಕ್ಕೆ ಸ್ವತಹ ಕಿಚ್ಚ ಸುದೀಪ್ ಅವರೇ ಸ್ಪಷ್ಟನೆಯನ್ನು ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಕೂಡ ತೆರೆ ಎಳೆದಿದ್ದಾರೆ. ಈಗಾಗಲೇ ಟೈಟಲ್ ನೋಡಿದ ಮೇಲೆ ವಿಚಾರ ನಿಮಗೆ ಅರಿವಾಗಿರಬಹುದು. ಹೌದು ನಾವು ಮಾತನಾಡೋಕೆ ಹೊರಟಿರೋದು ರಾಜಕೀಯದ ಬಗ್ಗೆ.

kiccha Sudeep On Politics

ನಿಮಗೆ ಗೊತ್ತಿರಬಹುದು ಕಿಚ್ಚ ಸುದೀಪ್ ಅವರು ರಾಜ್ಯದ ಮುಖ್ಯಮಂತ್ರಿಗಳು ಆಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಸೇರಿದಂತೆ ಬಿಜೆಪಿ ಪಕ್ಷದ ಜೊತೆಗೆ ಕೂಡ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ಕಾಂಗ್ರೆಸ್ ನಾಯಕ ಆಗಿರುವ ಡಿಕೆ ಶಿವಕುಮಾರ್(Dk Shivakumar) ಅವರು ಕೂಡ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದರು ಈ ಮೂಲಕ ಕಾಂಗ್ರೆಸ್ಸಿಗರ ಜೊತೆಗೆ ಕೂಡ ಕಿಚ್ಚ ಸುದೀಪ್ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಅವರು ಈ ಬಾರಿ ಚುನಾವಣೆಗೆ ಯಾವ ಪಕ್ಷವನ್ನು ಸೇರಬಹುದು ಎನ್ನುವ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಹಳಷ್ಟು ದಿನದಿಂದ ಸದ್ದು ಮಾಡುತ್ತಿದ್ದವು.

ಈಗ ಕೊನೆಗೂ ಕಿಚ್ಚ ಸುದೀಪ್ ಅವರೇ ಈ ವಿಚಾರವಾಗಿ ಮಾತನಾಡಿದ್ದು ನಾನು ಕಾಂಗ್ರೆಸ್ ಪಕ್ಷವನ್ನು ಕೂಡ ಸೇರುವುದಿಲ್ಲ ಬಿಜೆಪಿ ಪಕ್ಷವನ್ನು ಕೂಡ ಸೇರುವುದಿಲ್ಲ ಮೂರನೇ ಪಕ್ಷವೇ ನನ್ನ ಪಕ್ಷವೆಂಬುದಾಗಿ ಹೇಳಿದ್ದಾರೆ. ಈ ಮಾತನ್ನು ಕೇಳಿ ಎಲ್ಲರೂ ಜೆಡಿಎಸ್ ಪಕ್ಷಾನಾ ಎಂಬುದಾಗಿ ಕೇಳಿದ್ದಾರೆ ಅದಕ್ಕೆ ಕಿಚ್ಚ ಸುದೀಪ್(Kiccha Sudeep) ಅಲ್ಲ ಎಂಬುದಾಗಿ ಹೇಳಿ ಮೂರನೇ ಪಕ್ಷ ಎಂದರೆ ನನ್ನ ಪ್ರೀತಿಯ ಜನರ ಪಕ್ಷ ಅವರ ಪ್ರೀತಿಗಷ್ಟೇ ನಾನು ಅಭ್ಯರ್ಥಿಯೆಂಬುದಾಗಿ ಹೇಳುವ ಮೂಲಕ ಕಿಚ್ಚ ಸುದೀಪ್ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಈ ಮೂಲಕ ಸದ್ಯಕ್ಕಂತೂ ರಾಜಕೀಯ ಪ್ರವೇಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Leave a Comment

error: Content is protected !!