Darshan Thoogudeepa: ಇಡೀ ಕರ್ನಾಟಕವೇ ಪ್ರೀತಿಸುವ ಡಿ ಬಾಸ್ ಹಾಗೂ ವಿಜಯಲಕ್ಷ್ಮಿ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?

Darshan Thoogudeepa ದರ್ಶನ್(Darshan) ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಸಾಕಷ್ಟು ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಅವರ ನೇರ ನುಡಿ ಹಾಗೂ ವ್ಯಕ್ತಿತ್ವ ಮತ್ತು ಅಭಿಮಾನಿಗಳನ್ನು ಆಧರಿಸುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೆ ಸ್ಪೂರ್ತಿ. ಅದಕ್ಕಾಗಿಯೇ ಕೋಟ್ಯಾನು ಕೋಟಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಡಿ ಬಾಸ್(Dboss) ಎಂಬುದಾಗಿ ಕರೆಯುತ್ತಾರೆ. ಅವರು ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಇಲ್ಲಿಯವರೆಗೆ ಬಂದಂತಹ ಹಾದಿ ಕೂಡ ಪ್ರತಿಯೊಬ್ಬರಿಗೆ ಸ್ಪೂರ್ತಿದಾಯಕ.

ಇನ್ನು ಅವರ ದಾಂಪತ್ಯ ಜೀವನ ಕೂಡ ಇನ್ನೊಮ್ಮೆ ಸಾಕಷ್ಟು ವಿಚಾರಗಳಿಗಾಗಿ ನಕಾರಾತ್ಮಕವಾಗಿ ಸುದ್ದಿ ಆಗಿದ್ದರೂ ಕೂಡ ಈಗ ತಮ್ಮ ಮಗನಿಗಾಗಿ ದಂಪತಿಗಳಿಬ್ಬರೂ ಕೂಡ ಒಂದಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಹಲವಾರು ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕೆಲಸಗಳಿಗೆ ವಿಜಯಲಕ್ಷ್ಮಿ(Vijayalakshmi Darshan) ಅವರು ಸ್ಪೂರ್ತಿಯಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ಇವರಿಬ್ಬರೂ ಕಾರ್ಯಕ್ರಮ ಒಂದರಲ್ಲಿ ಪರಿಚಿತರಾಗಿ ನಂತರ ಪ್ರೀತಿಯಲ್ಲಿ ಬಿದ್ದು ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗುತ್ತಾರೆ.

Darshan With wife

ದರ್ಶನ್ ಅವರ ಲವ್ ಸ್ಟೋರಿಯ ಈ ವಿಚಾರದ ಬಗ್ಗೆ ಬಹುತೇಕರಿಗೆ ಗೊತ್ತಿರುವುದು ಕಡಿಮೆಯೇ ಎಂದು ಹೇಳಬಹುದಾಗಿದೆ. ಈಗ ದರ್ಶನ್(Darshan) ಹಾಗೂ ವಿಜಯಲಕ್ಷ್ಮಿ ಇಬ್ಬರೂ ಕೂಡ ಪರಸ್ಪರ ಒಬ್ಬರಿಗೊಬ್ಬರು ದಾಂಪತ್ಯ ಜೀವನದಲ್ಲಿ ಸರಿಯಾದ ಬಾಳ ಸಂಗಾತಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಬನ್ನಿ ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಸುತ್ತೇವೆ.

ಇಬ್ಬರ ಜನ್ಮದಿನದ ಲೆಕ್ಕಾಚಾರದ ಪ್ರಕಾರ ವಿಜಯಲಕ್ಷ್ಮಿ ಅವರಿಗಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್(Dboss) ಅವರು ವಯಸ್ಸಿನಲ್ಲಿ ಎಂಟು ವರ್ಷದ ಹೆಚ್ಚಳವನ್ನು ಹೊಂದಿದ್ದಾರೆ. ಇಷ್ಟೊಂದು ವಯಸ್ಸಿನ ಅಂತರ ಇದ್ದರೂ ಕೂಡ ಇವರಿಬ್ಬರ ಪ್ರೀತಿ ಹಾಗೂ ದಾಂಪತ್ಯ ಜೀವನಕ್ಕೆ ಅದು ಅಡ್ಡಿಯಾಗಿರಲಿಲ್ಲ. ಇದೇ ರೀತಿ ಈ ದಂಪತಿಗಳು ನೂರು ಕಾಲ ಸುಖವಾಗಿ ಬಾಳಲಿ ಎಂಬುದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಾರೈಸೋಣ.

Leave a Comment

error: Content is protected !!