ಡಿ ಬಾಸ್ ದರ್ಶನ್ ಪ್ರತಿದಿನ ಬೆಳಿಗ್ಗೆ ಎದ್ದು ಎಷ್ಟು ಸಿ-ಗರೇಟ್ ಸೇದುತ್ತಾರೆ ಗೊತ್ತಾ?

Dboss darshan morning routine : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ಇನ್ನೇನು ತೆರೆಗೆ ಅಪ್ಪಳಿಸಲಿದೆ. ಕ್ರಾಂತಿ ಸಿನಿಮಾದ ಪ್ರಚಾರದ ಜವಾಬ್ದಾರಿ ಅವರ ಅಭಿಮಾನಿಗಳೇ ಹೋಗ್ತಿದ್ದಾರೆ ಹಾಗಾಗಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ ಅವರ ಸಿನಿಮಾಕ್ಕಾಗಿ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಕಾದಿರಿಸುತ್ತಾರೆ.

ಹೌದು ಸಾಕಷ್ಟು ಬಾರಿ ಅನ್ನಿಸುತ್ತದೆ ದರ್ಶನ್ ಅಂದ್ರೆ ಜನರಿಗೆ ಯಾಕಷ್ಟು ಪ್ರೀತಿ ಯಾಕಷ್ಟು ಅಭಿಮಾನ? ಇದಕ್ಕೆ ಮುಖ್ಯ ಕಾರಣವೇ ಅವರ ಸರಳತೆ. ದರ್ಶನ್ ಇದುವರಿಗೆ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ ನಿಜ ಜೀವನದಲ್ಲಿಯೂ ಒಬ್ಬ ನಾಯಕ ಇವರು ಆದರೆ ಎಲ್ಲಿಯೂ ತಾನು ಸಹಾಯ ಮಾಡಿರುವುದಾಗಿ ಹೇಳಿಕೊಳ್ಳುವುದಿಲ್ಲ ಪುನೀತ್ ರಾಜಕುಮಾರ್ ಅವರ ಹಾಗೆ ದರ್ಶನ್ ಕೂಡ ಸಹಾಯ ಮಾಡಿದ್ದು ಯಾರಿಗೂ ತಿಳಿಯಬಾರದು ಎನ್ನುವ ಆಟಿಟ್ಯೂಡ್ ಹೊಂದಿದ್ದಾರೆ. ಇತ್ತೀಚಿಗೆ ಕ್ರಾಂತಿ ಸಿನಿಮಾದ ಬಗ್ಗೆ ಸಂದರ್ಶನ ಒಂದರಲ್ಲಿ ದರ್ಶನ್ ಅವರನ್ನು ಮಾತನಾಡಿಸಲಾಗಿದ್ದು ಆಗ ಸಾಕಷ್ಟು ವಿಚಾರಗಳನ್ನ ದರ್ಶನ್ ಮಾತನಾಡಿದ್ದಾರೆ.

Dboss darshan morning routine
Dboss darshan morning routine

ಇದನ್ನೂ ಓದಿ : 22 ವರ್ಷಗಳ ನಂತರ ಮತ್ತೆ ವೈರಲ್ ಆಯ್ತು ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ಕಾರ್ಡ್. ಹೇಗಿತ್ತು ಗೊತ್ತಾ ಮದುವೆ ಕಾರ್ಡ್?

Dboss darshan morning routine

ದರ್ಶನ್ ಅವರನ್ನು ನೋಡಿದರೆ ಈಗಲೂ ಕೇವಲ 30 ರಿಂದ 35 ವರ್ಷ ವಯಸ್ಸಾಗಿರಬಹುದು ಎಂದು ಹೇಳಬಹುದು ಅವರ ಮೊದಲ ಚಿತ್ರದಿಂದ ಇಲ್ಲಿಯವರೆಗೆ ಒಂದೇ ರೀತಿ ಕಾಣಿಸುತ್ತಾರೆ. ಅದೇ ಫಿಟ್ನೆಸ್ ಅದೇ ಚಾರ್ಮ್. ಹಾಗಾದ್ರೆ ಇದಕ್ಕೆ ಕಾರಣ ಏನು ಅಷ್ಟರಮಟ್ಟಿಗೆ ಡಯಟ್ ಮಾಡ್ತಾರ ಅಂತ ನಿಮಗೆ ಅನ್ನಿಸಬಹುದು ಆದರೆ ಅವರು ಹೇಳುವ ಪ್ರಕಾರ, ದರ್ಶನ್ ಆಹಾರದಲ್ಲಿ ಯಾವ ಡಯಟ್ ಅಭ್ಯಾಸವನ್ನು ಇಟ್ಟುಕೊಂಡಿಲ್ಲ ಚಪಾತಿ, ಓಟ್ಸ್ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿಲ್ಲ ನಾನು ಅನ್ನವನ್ನೇ ತಿಂತೇನೆ ಅನ್ನ ಬಿಟ್ರೆ ನನಗೆ ಆಗಲ್ಲ ಜೊತೆಗೆ ಚಿಕನ್ ಸೇವನೆ ಮಾಡ್ತೇನೆ ಸ್ವಲ್ಪ ಕಾರ ಕಡಿಮೆ ಇರುತ್ತೆ ವೋಟ್ಸ್ ಎಲ್ಲ ನಾನು ಕುದುರಿಗೆ ಹಾಕ್ತೇನೆ ಹೊರತು ನಾನು ತಿನ್ನುವುದಿಲ್ಲ ಎಂದು ದರ್ಶನ್ ಹೇಳುತ್ತಾರೆ. ಇನ್ನು ದಿನದಲ್ಲಿ ದರ್ಶನ್ ಅವರ ಚಟುವಟಿಕೆ ಹೇಗಿರುತ್ತೆ ಅಂದ್ರೆ, ನಟ ದರ್ಶನ ಅವರು ಮಲಗುವ ಸಮಯ ಬಹಳ ಕಡಿಮೆಯಂತೆ ಅವರು ರಾತ್ರಿ ಒಂದು ಗಂಟೆಗೆ ಮಲಗಿದ್ರು ಬೆಳಗಿನ ಜಾವ 4:30ಗೆ ಏಳುತ್ತಾರೆ. ಎದ್ದ ಕೂಡಲೇ ಎರಡು ಸಿ-ಗರೇಟ್ ಸೇದುತ್ತಾರೆ. ಜಿಮ್ ಟ್ರೈನರ್ ಬಂದಾಗ ಮತ್ತೆ ಟೀ ಕುಡಿದು ಸಿ-ಗರೇಟ್ ಸೇದಿ ಜಿಮ್ ಗೆ ಹೋಗುತ್ತಾರೆ. ಅಲ್ಲಿ ಸುಮಾರು ಒಂದರಿಂದ ಒಂದುವರೆ ಗಂಟೆಗಳ ಕಾಲ ನಿರಂತರ ವರ್ಕೌಟ್ ಮಾಡುತ್ತಾರೆ. ಬಳಿಕ ತಮ್ಮ ಕೆಲಸಕ್ಕೆ ಹೋಗುತ್ತಾರೆ. ವಾರದಲ್ಲಿ ಒಂದು ದಿನ ಜಿಮ್ ಗೆ ರಜೆ.

ಇನ್ನು ಯಾವುದೇ ಸಿನಿಮಾ ಮಾಡೋದಕ್ಕೆ ಹೋದ್ರು ಪ್ರೊಡ್ಯೂಸರ್ ಬಳಿ ದರ್ಶನ್ ಅವರ ಒಂದೇ ಒಂದು ಬೇಡಿಕೆ ಇರುತ್ತೆ ಅದೇನು ಗೊತ್ತಾ? ನೀವು ನನ್ನನ್ನು ಫೂಟ್ ಬಾತ್ ಮೇಲೆ ಆದ್ರೂ ಮಲಗಿಸಿ ನನಗೆ ಯೋಚನೆ ಇಲ್ಲ ಆದರೆ ಟಾಯ್ಲೆಟ್ ಸರಿಯಾಗಿ ಇರಬೇಕು. ಜೊತೆಗೆ ಸರಿಯಾದ ಜಿಮ್ ಇರಬೇಕು ಇದಿಷ್ಟೇ ದರ್ಶನ್ ಅವರ ಬೇಡಿಕೆ. ಒಬ್ಬ ಸ್ಟಾರ್ ನಟ ಅಂದಮೇಲೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಳ್ಳಬೇಕು ಐಷಾರಾಮಿ ಕಾರು ಬೇಕು ಹೀಗೆಲ್ಲ ಬೇಡಿಕೆಗಳು ಇರುತ್ತವೆ ಆದರೆ ದರ್ಶನ್ ಅವರ ಸರಳತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಇಷ್ಟು ದೊಡ್ಡ ಸೆಲೆಬ್ರಿಟಿ ಆಗಿದ್ದರು ಸಿನಿಮಾದ ಸಮಯದಲ್ಲಿ ಯಾವುದೇ ಸಣ್ಣಪುಟ್ಟ ಅಡಚಣೆಗಳನ್ನ ಅವರು ನಿಭಾಯಿಸಿಕೊಂಡು ಹೋಗುತ್ತಾರೆ. ಇಂತಹ ಕಾರಣಗಳಿಗೆ ದರ್ಶನ್ ಅವರಿಗೆ ಇಂದು ಲಕ್ಷಗಟ್ಟಲೆ ಅಭಿಮಾನಿಗಳಿದ್ದಾರೆ, ಅವರನ್ನ ಪ್ರೀತಿಸುವ ಜನರಿದ್ದಾರೆ.

Leave A Reply

Your email address will not be published.

error: Content is protected !!