KCC: ಕೆಸಿಸಿ ಮೈದಾನದಲ್ಲಿ ಕೂಡ ಡಿಬಾಸ್ ಅಭಿಮಾನಿಗಳ ಹಾವಳಿ. ಇದು ಎಷ್ಟು ಮಟ್ಟಿಗೆ ಸರಿ?

Darshan Thoogudeepa ಕನ್ನಡ ಚಲನಚಿತ್ರ ಕಪ್(kannada chalanachitra cup) ಎನ್ನುವುದು ಈಗಾಗಲೇ ಎರಡು ಆವೃತ್ತಿಯನ್ನು ಪೂರೈಸಿದ್ದು ಈ ಬಾರಿ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಜಗತ್ತಿನ ಹಾಗೂ ಸಿನಿಮಾ ಜಗತ್ತಿನ ತಾರೆಗಳ ನಡುವಣ ಮೂರನೇ ಆವೃತ್ತಿಯಲ್ಲಿ ಸಮಾಗಮದ ಸಂಭ್ರಮವಾಗಿದೆ ಎಂದರು ತಪ್ಪಾಗಲಾರದು. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಸ್ಟಾರ್ ನಟರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಪ್ರತಿಯೊಬ್ಬರು ಎಂದಾಗ ಖಂಡಿತವಾಗಿ ನೀವು ಕೂಡ ಯಾಕೆ ಸರ್ ಸುಳ್ಳು ಹೇಳ್ತಿದ್ದೀರಾ ಎನ್ನುವುದಾಗಿ ಪ್ರಶ್ನೆ ಕೇಳುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಪ್ರತಿಯೊಬ್ಬರೂ ಎಂದ ಮಾತ್ರಕ್ಕೆ ಎಲ್ಲರೂ ಕೂಡ ಬಂದಿದ್ದಾರೆ ಎಂಬುದಾಗಿ ಅರ್ಥವಲ್ಲ. ಅದರಲ್ಲೂ ಪ್ರಮುಖವಾಗಿ ಒಬ್ಬ ಸ್ಟಾರ್ ನಟನ(Star Actor) ಕುರಿತಂತೆ ಇಂದು ಮಾತನಾಡಲೇಬೇಕಾಗಿದೆ.

ಹೌದು ನಾವು ಹೇಳುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಬಗ್ಗೆ. ಕಿಚ್ಚ ಸುದೀಪ್(Kiccha Sudeep) ಅವರ ನಡುವೆ ಇರುವಂತಹ ಭಿನ್ನಾಭಿಪ್ರಾಯದ ಕಾರಣದಿಂದಲೂ ಅಥವಾ ವೈಯಕ್ತಿಕ ಕಾರಣದಿಂದಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೆಸಿಸಿ(Kcc) ಕಾರ್ಯಕ್ರಮಕ್ಕೆ ಬಂದಿಲ್ಲ. ಆದರೆ ಅವರ ಪ್ರತಿನಿಧಿಯಾಗಿ ಅವರ ಸಹೋದರ ಆಗಿರುವ ದಿನಕರ್ ತೂಗುದೀಪ್ ಅವರು ಕೆಸಿಸಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹೀಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಮಾಡುತ್ತಿರುವ ಕಾರ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು ಕ್ರೀಡಾಂಗಣದ ಒಳಭಾಗಕ್ಕೆ ಬಂದಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್ ಡಿ ಬಾಸ್(Dboss) ಎಂದು ಕಿರುಚಾಡುವ ಮೂಲಕ ನಮ್ಮ ನಟ ಇಲ್ಲದೆ ಇರುವುದಕ್ಕೆ ಬೇರೆಯವರಿಗೆ ರೇಗಿಸುತ್ತೇವೆ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಕೂಗಿದಂತೆ ಕಂಡು ಬರುತ್ತಿತ್ತು. ಇದು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವುದನ್ನು ನೀವೇ ನಿಮ್ಮ ಮಾತುಗಳಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!