Darshan Thoogudeepa: ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಓಟಿಟಿಗೆ ಬಂದೇ ಬಿಡ್ತು ಕ್ರಾಂತಿ. ಯಾವಾಗ ಗೊತ್ತಾ?

Kranti ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಈಗಾಗಲೇ ಕಳೆದ ಜನವರಿ 26ರಂದು ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಮಾಡಿ ದಾಖಲೆ ನಿರ್ಮಿಸಿತ್ತು. ಸಾಕಷ್ಟು ವರ್ಷಗಳ ನಂತರ ಕ್ರಾಂತಿ(Kranti) ಸಿನಿಮಾದ ಮೂಲಕ ಡಿ ಬಾಸ್(Dboss) ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದರು.

ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೂಡ ಭರ್ಜರಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿ ಚಿತ್ರತಂಡ ಅಧಿಕೃತವಾಗಿ ಸಿನಿಮಾದ ಗೆಲುವಿನ ಸಂಭ್ರಮಾಚರಣೆಯನ್ನು ಮಾಡಿಕೊಂಡಿದ್ದರು. ಸಿನಿಮಾ ಯಾವಾಗ ಟಿವಿ ಹಾಗೂ ಓಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಬರುತ್ತದೆ ಎಂಬುದಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದರು. ಕೊನೆಗೂ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ಹೊರಬಂದಿದೆ.

ಹೌದು ಮಿತ್ರರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕ್ರೇಜಿಸ್ಟಾರ್ ರವಿಚಂದ್ರನ್ ಸುಮಲತಾ ಅಂಬರೀಶ್ ಸೇರಿದಂತೆ ಅದ್ಭುತ ತಾರಾ ಗಣವೇ ಹೊಂದಿರುವಂತಹ ಕ್ರಾಂತಿ ಸಿನಿಮಾ ಇದೇ ಫೆಬ್ರವರಿ 23ರಂದು ಕನ್ನಡ ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರ ಕಾಣಲಿದೆ ಎಂಬುದಾಗಿ ತಿಳಿದು ಬಂದಿದೆ.

ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕ್ರಾಂತಿ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತಿದ್ದು ಪರಭಾಷೆಯಲ್ಲಿ ಇರುವಂತಹ ದರ್ಶನ್ ಅವರ ಅಭಿಮಾನಿಗಳಿಗೂ ಕೂಡ ಸಂತೋಷದ ಸುದ್ದಿ ಎಂದು ಹೇಳಬಹುದಾಗಿದೆ. ಇನ್ನು ಕ್ರಾಂತಿ ಸಿನಿಮಾದ ಹಿಂದಿ ವರ್ಷನ್ ಕುರಿತಂತೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಹೀಗಾಗಿ ಹಿಂದಿಯಲ್ಲಿ ಕ್ರಾಂತಿ(Kranti) ಯಾವಾಗ ಬಿಡುಗಡೆ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Comment

error: Content is protected !!