Dboss: ಕನ್ನಡ ಚಿತ್ರರಂಗ ಒಂದು ಕುಟುಂಬ ಎಂಬುದನ್ನು ಸಾಬೀತು ಮಾಡೇಬಿಟ್ರು ಡಿ ಬಾಸ್.

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕನಟರಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಅದರಲ್ಲಿ ವಿಶೇಷವಾಗಿ ಡಿ ಬಾಸ್ ರವರ ಮಹಾಸ್ ಅಭಿಮಾನಿಗಳ ವಿಚಾರಕ್ಕೆ ಬಂದರೆ ಯಾವ ನಟರ ಅಭಿಮಾನಿಗಳು ಕೂಡ ಸರಿಸಾಟ ಇಲ್ಲ.

ಡಿ ಬಾಸ್(Dboss) ರವರು ಕೆಲವೊಂದು ಸಿನಿಮಾರಂಗದ ವ್ಯಕ್ತಿಗಳನ್ನು ಕುಟುಂಬಂಕ್ಕಿಂತ ಹೆಚ್ಚಾಗಿ ನೋಡುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕುಟುಂಬಕ್ಕಿಂತ ಹೆಚ್ಚಾಗಿ ತಮ್ಮ ಹತ್ತಿರಕ್ಕೆ ಕರೆದುಕೊಳ್ಳುವುದು ತಮ್ಮ ಸ್ನೇಹಿತರನ್ನು ಅದು ಕೂಡ ನಂಬಿಕಸ್ತ ಸ್ನೇಹಿತರನ್ನು ಮಾತ್ರ. ಇನ್ನು ಅಭಿಮಾನಿಗಳು ಎಂದರೆ ಕೂಡ ಅವರಿಗೆ ಎಲ್ಲಿಲ್ಲದ ಪ್ರೀತಿ ಎನ್ನುವುದನ್ನು ನಾವು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ.

ತಮ್ಮ ಕಷ್ಟದ ಸಂದರ್ಭದಲ್ಲಿ ಅಭಿಮಾನಿಗಳು ಮಾಡಿದ್ದ ಸಹಾಯದಿಂದಾಗಿ ಇಂದು ದರ್ಶನ್(Darshan) ರವರು ಈ ಹಂತವನ್ನು ತಲುಪಿದ್ದಾರೆ ಇದೇ ಕಾರಣಕ್ಕಾಗಿ ಕುಟುಂಬಕ್ಕಿಂತ ಹೆಚ್ಚಾಗಿ ಅಭಿಮಾನಿಗಳನ್ನು ನಾನು ಪ್ರೀತಿಸುತ್ತೇನೆ ಎಂಬುದಾಗಿ ಹೇಳಿ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂಬುದಾಗಿ ಕರೆಯಲು ಪ್ರಾರಂಭಿಸಿದ್ದಾರೆ.

ಇತ್ತೀಚಿಗಷ್ಟೇ ನಡೆದಿರುವ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಂದಿರ್ಲಿಲ್ಲ ಎನ್ನುವುದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆದರೆ ನಂತರ ದರ್ಶನ್ ರವರು ರಿಸೆಪ್ಶನ್ ಹಾಗೂ ಬೀಗರ ಊಟ ಕಾರ್ಯಕ್ರಮಕ್ಕೆ ಬಂದು ಎಲ್ಲರ ಮನಸ್ಸನ್ನು ಗೆಲ್ಲುವ ಮೂಲಕ ಚಿತ್ರರಂಗ ಕುಟುಂಬ ಎಂಬುದನ್ನು ಮತ್ತು ಸಾಬೀತು ಪಡಿಸಿದ್ದಾರೆ.

ಇನ್ನು ವೇದಿಕೆಯ ಮೇಲೆ ರಾಕಿಂಗ್ ಸ್ಟಾರ್ ಯಶ್(Rocking Star Yash) ಅಭಿಷೇಕ್ ಅಂಬರೀಶ್ ಹಾಗೂ ಡಿ ಬಾಸ್ ಎಲ್ಲರೂ ಕೂಡ ಒಟ್ಟಾಗಿ ಕುಣಿದಾಡಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇವರೆಲ್ಲರೂ ಎಷ್ಟು ಕ್ಲೋಸ್ ಆಗಿದ್ದಾರೆ ಎಂಬುದು ಈ ಮೂಲಕ ಸಾಬೀತು ಪಡಿಸುತ್ತದೆ. ಇವರು ಇಷ್ಟೊಂದು ಕ್ಲೋಸ್ ಆಗಿರಬೇಕಾದರೆ ನೀವೆಲ್ಲ ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ನಟರಿಗಾಗಿ ಬೇರೆ ನಟರನ್ನು ತೆಗಳಬೇಕು ಅಲ್ಲವೇ.

Leave a Comment

error: Content is protected !!