Dhanush: ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಅವರ ವಿರುದ್ಧ ಬ್ಯಾನ್?

Dhanush ತಮಿಳು ಚಿತ್ರರಂಗದಲ್ಲಿ ಅತ್ಯಂತ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವುದು ನಮ್ಮೆಲ್ಲರ ನೆಚ್ಚಿನ ಧನುಶ್ ರವರು. ಧನುಷ್(Dhanush) ತಮಿಳ್ ಚಿತ್ರರಂಗದಲ್ಲಿ ಅವರ ತಂದೆ ಆಗಿರುವಂತಹ ಕೆ ರಾಜ ಅವರ ಶಿಫಾರಸ್ಸಿನ ಮೇಲೆ ಬಂದಿದ್ದರು ಕೂಡ ಜನರು ಅವರನ್ನು ಮೆಚ್ಚಿಕೊಂಡಿರುವುದು.

ಯಾವುದೇ ಪಾತ್ರಗಳನ್ನು ನೀಡಿದರು ಕೂಡ ತಮಿಳು ಚಿತ್ರರಂಗದಲ್ಲಿ(Kollywood) ಅದಕ್ಕೆ ತಕ್ಕಂತೆ ಸಂಪೂರ್ಣ ನ್ಯಾಯವನ್ನು ಸಲ್ಲಿಸುವಂತಹ ನಟನೆಯನ್ನು ಮಾಡಬಲ್ಲ ಚಾಣಾಕ್ಷತೆ ಹಾಗೂ ಸಾಮರ್ಥ್ಯ ಇರುವುದು ಕೇವಲ ಧನುಷ್ ಅವರಿಗೆ ಮಾತ್ರ ಎಂಬುದನ್ನು ಯಾವುದೇ ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳಬಹುದಾಗಿದೆ. ಆದರೆ ಅವರನ್ನೇ ತಮಿಳು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬುದಾಗಿ ಪ್ರಯತ್ನಗಳು ನಡೆಯುತ್ತಿವೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಸಿನಿಮಾಗಳು ನೀಡಿ ತಮಿಳು ಚಿತ್ರರಂಗದ ಬೆಳವಣಿಗೆಗೆ ಕೊಡುಗೆ ನೀಡಿದ ಊರಲ್ಲಿ ಒಬ್ಬರಾಗಿರುವ ಧನುಷ್ ಅವರನ್ನು ಯಾಕೆ ಬ್ಯಾನ್ ಮಾಡಲು ನಿರ್ಮಾಪಕರು ಓಡಾಡುತ್ತಿರಬಹುದೆಂಬುದಾಗಿ ನೀವು ಯೋಚಿಸುತ್ತಿರುವುದು. ಅದಕ್ಕೆ ಕಾರಣ ಕೂಡ ಇದೆ.

ಒಂದು ಸಿನಿಮಾಗೆ ನಿರ್ಮಾಪಕರ ಬಳಿ ಅಡ್ವಾನ್ಸ್ ಹಣವನ್ನು ಪಡೆದುಕೊಂಡಿರುವಂತಹ ಧನುಷ್ ಇದುವರೆಗೂ ಕೂಡ ಅವರಿಗೆ ಆ ಸಿನಿಮಾವನ್ನು ಮಾಡಿಕೊಟ್ಟಿಲ್ಲ ಎನ್ನುವುದು ಅಪರಾಧವಾಗಿದೆ. ಹೀಗಾಗಿ ನಿರ್ಮಾಪಕರ ಸಂಘದಿಂದ ಧನುಷ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತಹ ತಯಾರಿಗಳು ನಡೆಯುತ್ತಿವೆ.

Leave a Comment

error: Content is protected !!