ನಟಿ ಅಮೂಲ್ಯ ಅವರ ಅವಳಿ ಮಕ್ಕಳಿಗೆ ಗುರೂಜಿ ಸೂಚಿಸಿದ ಹೆಸರು ಏನು ಗೊತ್ತಾ

ಚಿಕ್ಕವಳಿರುವಾಗಲೇ ಬಾಲ್ಯ ನಟಿಯಾಗಿ ಲಾಲಿಹಾಡು ಚಿತ್ರದಲ್ಲಿ ಕಾಣಿಸಿಕೊಂಡು, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಅಮೂಲ್ಯ ಅವರು. 2005ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ತೆರೆ ಹಂಚಿಕೊಂಡು ನಟಿಸಿದ ಚಿತ್ರ ಚೆಲುವಿನ ಚಿತ್ತಾರ. ಲಾಂಗ್ ಗ್ಯಾಪ್ ನಂತರ ಮತ್ತೊಮ್ಮೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅಮೂಲ್ಯ ಅವರ ವಯಸ್ಸು 16 ವರ್ಷ. ಆದರೂ ತಮ್ಮ ಮುದ್ದಾದ ಮಾತು, ಸುಂದರ ಹೂ ನಗೆಯ ಮೂಲಕ ಕನ್ನಡಿಗರ ಮನ ಗೆದ್ದರು.

ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಶ್ರಾವಣಿ ಮತ್ತು ಸುಬ್ರಹ್ಮಣ್ಯ, ರಾಕಿಂಗ್ ಸ್ಟಾರ್ ಯಶ್ ಜೊತೆ ಗಜಕೇಸರಿ, ದುನಿಯಾ ವಿಜಯ್ ಜೊತೆ ಮಾಸ್ತಿಗುಡಿ, ಲವ್ಲಿ ಸ್ಟಾರ್ ಪ್ರೇಮ್ ಜೊತೆ ಮಳೆ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಬಹು ಬೇಡಿಕೆ ಬರುತ್ತಿರುವಾಗಲೇ ರಾಜಕೀಯ ರಂಗದಲ್ಲಿ ಹೆಸರು ಮಾಡಿದ ಒಂದು ಕುಟುಂಬದ ಮಗ ಜಗದೀಶ್ ಅವರನ್ನು ವಿವಾಹವಾಗುತ್ತಾರೆ. ಈ ದಂಪತಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮದೇ ಮನೆಯಲ್ಲಿ ನೆಲೆಸಿದ್ದಾರೆ.

ಮದುವೆಯಾಗಿ ಎರಡು ವರ್ಷಗಳ ನಂತರ ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿ, ಅವರ ಶ್ರೀಮಂತ ಕುಟುಂಬಕ್ಕೆ ಸಂತಸ ತಂದರು. ಇವರ ಅವಳಿ ಮಕ್ಕಳಿಗೆ ಈಗಾಗಲೇ ಮೂರು ತಿಂಗಳು ತುಂಬಿದ್ದು, ಕುಟುಂಬಸ್ಥರು ಮಕ್ಕಳಿಗೆ ನಾಮಕರಣ ಮಾಡುವ ಎಲ್ಲಾ ಸಿದ್ದತೆಯನ್ನು ನಡೆಸಿದ್ದಾರೆ. ಸಾಂಪ್ರದಾಯಿಕ ಪದ್ಧತಿಗಳನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದ ಈ ಕುಟುಂಬದವರು ತಮ್ಮ ಮನೆಯ ಪುಟಾಣಿಗಳಿಗೆ ಹೆಸರಿಡಲು ಸೂಕ್ತವಾದ ದಿನವನ್ನು ತಿಳಿದು, ಆಶೀರ್ವಾದ ಪಡೆದುಕೊಂಡು ಬರಲು ಗುರುಗಳ ದರ್ಶನಕ್ಕೆಂದು ಬಂದಿದ್ದರು.

ಗುರುಗಳಿಗೆ ವಂದಿಸಿ, ನಟಿ ಅಮೂಲ್ಯ ತಮ್ಮ ಮಕ್ಕಳಿಗೆ ನಾಮಕರಣ ಶಾಸ್ತ್ರ ಮಾಡಲು ಒಳ್ಳೆಯ ದಿನವನ್ನು ಸೂಚಿಸುವಂತೆ ಗುರುಗಳಲ್ಲಿ ಕೋರಿದ್ದಾಳೆ. ಅಲ್ಲದೆ ಮಕ್ಕಳಿಗೆ ಯಾವ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನಿಡಬೇಕೆಂಬ ವಿಚಾರವಾಗಿಯೂ ಕೇಳಿ ತಿಳಿದು ಬಂದಿದ್ದಾರೆ. ಕುಟುಂಬದಲ್ಲಿ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದ್ದರೂ, ಯಾವ ದಿನದಂದು ಅವಳಿ ಕಂದಮ್ಮಗಳು ಅಂಕಿತಗೊಳ್ಳುತ್ತವೆ ಎಂಬುದು ಗೌಪ್ಯವಾಗಿದೆ. ನಟಿ ಅಮೂಲ್ಯ ಅವರ ಅಭಿಮಾನಿಗಳು ಕಾತುರದಿಂದಿದ್ದಾರಂತೆ. ಯಾವ ದಿನದಂದು ತಮ್ಮ ಮಕ್ಕಳಿಗೆ ನಾಮಕರಣ ಮಾಡಲಿದ್ದೇವೆ ಎಂಬುದನ್ನು ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರು ಅಧಿಕೃತವಾಗಿ ತಿಳಿಸಬೇಕಿದೆ.

Leave a Comment

error: Content is protected !!