ಅಭಿಮಾನಿಗಳ ದೇವರು ಎನಿಸಿ ಕೊಂಡಿದ್ದ ಅಪ್ಪು ಗೆ ಸ್ಮಗ್ಲರ್ ಪಟ್ಟ ಕಟ್ಟಿದ್ದು ಏಕೆ! ಗ್ರಾನೈಟ್ ಬಿಸಿನೆಸ್ ನಲ್ಲಿ ಅಪ್ಪು ಗೆ ಆಗಿದ್ದು ಏನು

ಪುನೀತ್ ರಾಜಕುಮಾರ್ ಅವರು ಶಿಶುವಿದ್ದಾಗಲೇ ಪರದೆಯ ಮೇಲೆ ಕಾಣಿಸಿಕೊಂಡು ಚಿತ್ರರಂಗದಲ್ಲೇ ಬದುಕು ಕಂಡವರು. ನಾಲ್ಕು ದಶಕಗಳಿಗಿಂತಲೂ ಅಧಿಕ ಕಾಲದ ಪ್ರಯಾಣ ಅವರದು. ಬಾಲ್ಯ ನಟರಾಗಿ, ಹಾಡುಗಾರರಾಗಿ, ನಿರ್ಮಾಪಕರಾಗಿ, ನಾಯಕ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಸೇವೆಗೈದು ಜನತೆಯ ಮನದಲ್ಲಿ ಪ್ರೀತಿ, ಗೌರವ ಪಡೆದಿದ್ದಾರೆ. ಒಮ್ಮೆ ಒಡನಾಡಿದರೆ ಚಿಕ್ಕ ಮಗುವಿಗೂ ಇವರು ಸರಳಜೀವಿ ಎಂದು ತಿಳಿಯುತ್ತದೆ.

ಬಿಡುವಿನ ಸಮಯದಲ್ಲಿ ಇವರೇನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಅಣ್ಣ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಇವರು ಚಿತ್ರರಂಗದಲ್ಲಿಯೇ ದುಡಿಯುತ್ತಿದ್ದು, ತಾನು ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನಸು ಕಂಡು ಪುನೀತ್ ಅವರು ಆಪ್ತರಲ್ಲಿ ಹೇಳಿಕೊಂಡರು. ಚಿತ್ರೀಕರಣದ ನಂತರ ಉಳಿದ ವೇಳೆಯಲ್ಲಿ ಸ್ನೇಹಿತರ ಸಲಹೆಯಂತೆ, ಗ್ರಾನೈಟ್ ಬಿಸಿನೆಸ್ ಅನ್ನು ಪ್ರಾರಂಭಿಸಿರುವ ವಿಷಯವು ಎಲ್ಲೆಡೆ ತಿಳಿದಿತ್ತು.

ಆದರೆ ಹೇಗೆ ಶುರುವಾಯಿತು? ನಂತರದಲ್ಲಿ ಏನಾಯ್ತು? ಎಂಬುದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಕೆಲವರ ಮನಸ್ಸಿನಲ್ಲಿ ಸಂಶಯಗಳ ಕಥೆಯು ರೂಪುಗೊಂಡು ಹರಡುತ್ತಿತ್ತು. ಪುನೀತ್ ಅವರು ತಮ್ಮ ಸ್ನೇಹಿತರಲ್ಲಿ ‘ನನಗೆ ಚಿತ್ರರಂಗವನ್ನು ಹೊರತುಪಡಿಸಿ ಇನ್ನೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕೆಂಬ ಆಸೆಯಿದೆ’ ಎಂದು ಹೇಳಿಕೊಂಡರು. ಇದನ್ನು ಕೇಳಿದ ಸ್ನೇಹಿತರು ಮಾರ್ಬಲ್ಸ್ ಗ್ರಾನೈಟ್ ಬಗ್ಗೆ ಸಲಹೆಯನ್ನು ನೀಡುತ್ತಾರೆ.

‘ನೀವು ಬಂಡವಾಳವೊಂದನ್ನು ಹಾಕಿ; ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ. ಗ್ರಾನೈಟ್ ನ ಈ ಹೊಸ ಬ್ಯುಸಿನೆಸ್ ಅಲ್ಲಿ ನಾವು ಪಾಲುದಾರರಾಗಿ ಕಾರ್ಯನಿರ್ವಹಿಸೋಣ. ನೀವು ಹೆಚ್ಚೇನು ಮಾಡಬೇಕಾಗಿಲ್ಲ; ಪ್ರಾರಂಭದಲ್ಲೊಮ್ಮೆ ಹಣ ನೀಡಿದರೆ, ಬಂದ ಲಾಭವನ್ನು ನಿಮಗೂ ನೀಡುತ್ತೇವೆ’ ಎಂದು ಸ್ನೇಹಿತರು ಹೇಳುತ್ತಾರೆ. ಇದಕ್ಕೆ ಒಪ್ಪಿ ಪುನೀತವರು ಹಣವನ್ನು ನೀಡುತ್ತಾರೆ. ಶುರುವಾದ ಬಿಸಿನೆಸ್, ಹೋಗುತ್ತಾ ಹೋಗುತ್ತಾ ಇಲ್ಲಿಗಲ್ ಹಂತವನ್ನು ತಲುಪುತ್ತದೆ. ಪುನೀತ್ ಅವರ ಹೆಸರು ಹೇಳಿಕೊಂಡು ಸ್ವಲ್ಪವು ತೊಂದರೆಯಾಗದಂತೆ ಬಿಸಿನೆಸ್ ನಡೆಸುತ್ತಿರುತ್ತಾರೆ.

ಇದಾವುದೂ ಪುನೀತ್ ಅವರಿಗೆ ತಿಳಿದಿರುವುದಿಲ್ಲ. ಆದರೆ ಅವ್ಯವಹಾರಗಳಿಂದಾದ ಅಪಪ್ರಚಾರದಲ್ಲಿ, ಪುನೀತ್ ಅವರ ಹೆಸರು ಸ್ನೇಹಿತರ ಹೆಸರೊಂದಿಗೆ ತಗಲು ಹಾಕಿಕೊಂಡಿರುತ್ತದೆ. ಅದೇ ಸಮಯದಲ್ಲಿ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆಂಪಯ್ಯ ಅವರು ಪುನೀತ್ ಅವರ ಬೆನ್ನ ಹಿಂದೆ ನಡೆದ ಎಲ್ಲಾ ಘಟನೆಗಳ ವಿವರ ನೀಡಿ, ‘ನಿಮಗಿದೆಲ್ಲ ಯಾಕೆ ಬೇಕು? ಸಿನಿಮಾ ರಂಗದ ಕಡೆಗೆ ಆಸಕ್ತಿ ತೋರಿಸಿ, ನಿಮ್ಮ ಸಂಪೂರ್ಣ ಶ್ರಮವನ್ನು ಅಲ್ಲಿಯೇ ಬಳಸಿ’ ಎಂದು ಕಿವಿಮಾತೊಂದ ಹೇಳುತ್ತಾರೆ. ಅಸಲಿ ವಿಷಯ ತಿಳಿದ ಪುನೀತ್ ಅವರು ಬಂಡವಾಳವನ್ನು ಅಲ್ಲಿಯೇ ಬಿಟ್ಟು, ಪಾಲಿಗೂ ಆಸೆ ಪಡದೆ ಗ್ರಾನೈಟ್ ಬಿಸಿನೆಸ್ ನಿಂದ ಹೊರ ಬರುತ್ತಾರೆ.

Leave a Comment

error: Content is protected !!