Kannada Cinema News: ಕನ್ನಡದಲ್ಲಿ ಅತ್ಯಂತ ಹೆಚ್ಚು ರಿಮೇಕ್ ಸಿನಿಮಾಗಳನ್ನು ಮಾಡಿರುವ ನಟರು ಯಾರು ಗೊತ್ತಾ? ಟಾಪ್ 2 ನಟರು ಯಾರು ಅಂತ ಕೇಳಿದ್ರೆ ಶಾ’ ಕ್ ಆಗ್ತೀರಾ!

Sandalwood ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ರೀಮೇಕ್ ಸಿನಿಮಾಗಳು( Remake Films) ಎನ್ನುವುದು ಸಂಪೂರ್ಣವಾಗಿ ನಿಂತು ಹೋಗಿದ್ದು ನಮ್ಮ ಕನ್ನಡದ ಸಿನಿಮಾಗಳನ್ನು ಬೇರೆಯವರು ರಿಮೇಕ್ ಮಾಡುವಂತಹ ಸಾಧನೆಯನ್ನು ನಮ್ಮ ಕನ್ನಡದ ಫಿಲಂ ಮೇಕರ್ಸ್ಗಳು ಮಾಡುತ್ತಿದ್ದಾರೆ. ಆದರೆ ನಮ್ಮ ಕನ್ನಡದ ಸಿನಿಮಾರಂಗದ ಇತಿಹಾಸವನ್ನು ತಿರುಚಿ ನೋಡಿದರೆ ನಮ್ಮ ಕನ್ನಡದ ಕೆಲವು ಸ್ಟಾರ್ಗಳು ಕೂಡ ಅತ್ಯಂತ ಹೆಚ್ಚು ರಿಮೇಕ್ ಸಿನಿಮಾಗಳನ್ನು ಮಾಡಿದ್ದಾರೆ.

ಅವುಗಳಲ್ಲಿ ಟಾಪ್ 2 ಸ್ಥಾನಗಳಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಹಾಗೂ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಅವರು ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಓಂ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ದಾಖಲೆಯನ್ನು ನಿರ್ಮಿಸಿ ಬೇರೆ ಭಾಷೆಗಳಲ್ಲಿ ಕೂಡ ರೀಮೇಕ್ ಆಗಿತ್ತು. ಆದರೆ ರೀಮೇಕ್ ವಿಚಾರಕ್ಕೆ ಬಂದರೆ ಇವರು ಕೂಡ ಕಡಿಮೆ ಇಲ್ಲ.

ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರು ತಮ್ಮ ಸಿನಿಮಾ ಜೀವನದಲ್ಲಿ ಈಗಾಗಲೇ 37 ವರ್ಷಕ್ಕೂ ಅಧಿಕ ಕರಿಯರ್ ನಲ್ಲಿ 125ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದು ಅದರಲ್ಲಿ 28ಕ್ಕೂ ಅಧಿಕ ಸಿನಿಮಾಗಳು ರಿಮೇಕ್ ಸಿನಿಮಾಗಳು ಆಗಿವೆ. ಅವುಗಳಲ್ಲಿ ಹಲವಾರು ಸಿನಿಮಾಗಳು ಗೆದ್ದಿವೆ ಇನ್ನು ಕೆಲವು ಸಿನಿಮಾಗಳು ನೆಲಕಚ್ಚಿವೆ. ಆದರೆ ಈಗಲೂ ಕೂಡ ಮಾರುಕಟ್ಟೆಯಲ್ಲಿ ಶಿವಣ್ಣನ ಹವಾ ಕಡಿಮೆಯಾಗಿಲ್ಲ ಎಂದು ಹೇಳಬಹುದಾಗಿದೆ.

ಇನ್ನು ಎರಡನೇ ಸ್ಥಾನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Upendra) ಅವರು ಕಾಣಿಸಿಕೊಳ್ಳುತ್ತಾರೆ. ಇದುವರೆಗೂ ಒಟ್ಟಾರೆ ಉಪ್ಪಿ 27 ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ರಿಮೇಕ್ ಸಿನಿಮಾಗಳು ಅದೇನೇ ಇರಲಿ ಆದರೆ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿ ಬೆಳೆಸುವಂತಹ ಕೆಲಸದಲ್ಲಿ ಇವರಿಬ್ಬರ ಕೊಡುಗೆ ಕೂಡ ಸಾಕಷ್ಟಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಶಿವಣ್ಣ ಹಾಗೂ ಒಪ್ಪಿ ಕಾಂಬಿನೇಷನ್ ಮತ್ತು ಕಿಚ್ಚ ಸುದೀಪ್(Kiccha Sudeep) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಬ್ಜಾ(Kabzaa) ಸಿನಿಮಾ ಇದೇ ಮಾರ್ಚ್ 17ಕ್ಕೆ ಬಿಡುಗಡೆ ಆಗುತ್ತಿದೆ.

Leave a Comment

error: Content is protected !!