Ramya: ದಿವ್ಯ ಸ್ಪಂದನ ರಮ್ಯಾ ಆಗಿದ್ದು ಹೇಗೆ? ಹೆಸರು ಇಟ್ಟಿದ್ದು ಯಾರು ಗೊತ್ತಾ?

Actress Ramya ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ವುಡ್ ಕ್ವೀನ್(Sandalwood Queen) ಆಗಿ ಮಿಂಚಿ ಮೆರೆದ ನಟಿ ಎಂದರೆ ಅದು ರಮ್ಯಾ(Ramya). ಸಾಕಷ್ಟು ವರ್ಷಗಳ ಕಾಲ ಚಿತ್ರರಂಗವನ್ನು ತೊರೆದು ರಾಜಕೀಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿ ವರ್ಷಗಳ ನಂತರ ವಾಪಾಸು ಬಂದ ಮೇಲೂ ಕೂಡ ಅವರ ಬೇಡಿಕೆ ಎನ್ನುವುದು ಹೆಚ್ಚಾಗಿದೆಯೇ ಹೊರತು ಇನ್ನು ಕೂಡ ಕಡಿಮೆಯಾಗಿಲ್ಲ. ನಿಜಕ್ಕೂ ಕೂಡ ಇದು ನಾವೆಲ್ಲರೂ ಮೆಚ್ಚು ಬೇಕಾಗಿರುವಂತಹ ವಿಚಾರವೇ ಸರಿ.

ನಾವೆಲ್ಲರೂ ನಟಿ ರಮ್ಯಾ(Actress Ramya) ಅವರನ್ನು ರಮ್ಯಾ ಎನ್ನುವುದಾಗಿ ಕರೆಯುತ್ತೇವೆ ಆದರೆ ಅವರ ನಿಜವಾದ ಹೆಸರು ದಿವ್ಯ ಸ್ಪಂದನ(Divya Spandana) ಎನ್ನುವುದು ಎಷ್ಟೋ ಜನರಿಗೆ ತಿಳಿದಿಲ್ಲ. ಇನ್ನು ಜನರಿಗೆ ಅವರ ಹೆಸರು ದಿವ್ಯ ಸ್ಪಂದನ ಎಂದು ತಿಳಿದಿದ್ದರೂ ಕೂಡ ಅದು ಅವರ ನೆನಪಿಗೆ ಬರುವುದಲ್ಲ ಯಾಕೆಂದರೆ ಪ್ರತಿಯೊಬ್ಬರೂ ಕೂಡ ರಮ್ಯಾ ಎಂದು ಕರೆಯೋದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ.

ಹೀಗಾಗಿ ಇಂದಿನ ಲೇಖನಿಯಲಿ ನಾವು ನಟಿ ರಮ್ಯಾ(Actress Ramya) ಅವರ ಹೆಸರು ದಿವ್ಯಸ್ಪಂದನದಿಂದ ರಮ್ಯಾ ಆಗಿದ್ದು ಹೇಗೆ ಹಾಗೂ ಆ ಹೆಸರನ್ನು ಇಟ್ಟಿದ್ದು ಯಾರು ಎಂಬುದನ್ನು ತಿಳಿಯೋಣ ಬನ್ನಿ. ಚಿತ್ರರಂಗಕ್ಕೆ ಬಂದ ಮೇಲೆನೇ ನಟಿ ರಮ್ಯಾ ಅವರು ತಮ್ಮ ಹೆಸರನ್ನು ದಿವ್ಯ ಸ್ಪಂದನದಿಂದ ರಮ್ಯಾ ಎಂಬುದಾಗಿ ಬದಲಾಯಿಸಿಕೊಳ್ಳುತ್ತಾರೆ ಎಂಬುದಾಗಿ ಸುದ್ದಿ ಇದ್ದು ಇದರ ಕುರಿತಂತೆ ವೀಕೆಂಡ್ ವಿತ್ ರಮೇಶ್(Weekend With Rameeh) ಕಾರ್ಯಕ್ರಮದಲ್ಲಿ ಕೂಡ ಹೇಳಿಕೊಂಡಿದ್ದಾರೆ.

ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ನಟನೆಯ ಅಭಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ರಮ್ಯಾ ಎನ್ನುವುದಾಗಿ ಪಾರ್ವತಮ್ಮ ರಾಜಕುಮಾರ್(Parvathamma Rajkumar) ರವರೆ ನಾಮಕರಣ ಮಾಡುತ್ತಾರೆ. ಅಲ್ಲಿನಿಂದ ಇಂದಿನವರೆಗೂ ಎಲ್ಲರಿಗೂ ಅವರು ಮೋಹಕ ತಾರೆ ರಮ್ಯಾ ನೇ ಆಗಿದ್ದಾರೆ.

Leave A Reply

Your email address will not be published.

error: Content is protected !!