ನವರಸ ನಾಯಕ ಜಗ್ಗೇಶ್ ಅವರಿಗೆ 10ನೇ ತರಗತಿಯಲ್ಲಿ ಸಿಕ್ಕ ಅಂಕವೇಷ್ಟು ಗೊತ್ತಾ? ಇವರ ಮಾರ್ಕ್ಸ್ ನೋಡಿ ಅಪ್ಪ ಏನು ಮಾಡಿದರು ಗೊತ್ತಾ?

ನವರಸ ನಾಯಕ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಶಕಗಳಿಂದ ನಾಯಕನಾಗಿ ಪೋಷಕ ನಟನಾಗಿ ಹಾಗೂ ಹಾಸ್ಯ ಕಲಾವಿದ ಮತ್ತು ಪ್ರಾರಂಭದಲ್ಲಿ ಖಳನಾಯಕನಾಗಿ ಕೂಡ ಕಾಣಿಸಿಕೊಂಡವರು. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ ನೂರು ಪ್ರತಿಶತ ನ್ಯಾಯವನ್ನು ಸಲ್ಲಿಸುವಂತಹ ಅದ್ಭುತ ಕಲಾವಿದ ಎಂದೇ ಹೇಳಬಹುದಾಗಿದೆ. ಆರಂಭದಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವಮಾನಗಳನ್ನು ಎದುರಿಸಿ ಮೆಟ್ಟಿ ನಿಂತವರು.

ಇಂದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿರುವಂತಹ ಸ್ಟಾರ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ನವರಸ ನಾಯಕ ಜಗ್ಗೇಶ್. ನಮ್ಮ ಜಗ್ಗಣ್ಣ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಸಾಧನೆಗಳನ್ನು ಮಾಡಿದವರು ಹಾಗೂ ಇಂದಿಗೂ ಕೂಡ ಮಾಡುತ್ತಿದ್ದಾರೆ ಎನ್ನಬಹುದು. ಒಟ್ಟಾರೆಯಾಗಿ ಚಿತ್ರರಂಗ ಹಾಗೂ ಸಮಾಜದಲ್ಲಿ ಉತ್ತಮ ಬದಲಾವಣೆಯನ್ನು ನಿರೀಕ್ಷಿಸುವವರಲ್ಲಿ ಅವರು ಕೂಡ ಒಬ್ಬರು.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಅನ್ನು ಹಂಚಿಕೊಂಡಿರುವ ನವರಸ ನಾಯಕ ಜಗ್ಗೇಶ್ ಅವರು ತಮಗೆ ಸಿಕ್ಕಿರುವಂತಹ ಮಾರ್ಕ್ಸ್ ಕುರಿತಂತೆ ಮಾತನಾಡಿದ್ದಾರೆ. ಹೌದು ಮಿತ್ರರೇ ಜಗ್ಗೇಶ್ ಅವರಿಗೆ ಹತ್ತನೇ ತರಗತಿಯಲ್ಲಿ 600 ಅಂಕದಲ್ಲಿ ಸಿಕ್ಕಿರುವುದು 342 ಮಾರ್ಕ್ಸ್. ಅಂದರೆ ಸ್ವಲ್ಪದಲ್ಲಿಯೇ ಪಾಸ್ ಆಗಿದ್ದರೂ ಎಂಬುದಾಗಿ ಹೇಳುತ್ತಾರೆ ಜಗ್ಗೇಶ್ ಅವರು.

ಈ ಮಾರ್ಕ್ಸ್ ಅನ್ನು ನೋಡಿ ಅವರ ತಂದೆ ನಡುರೋಡಿನಲ್ಲಿಯೇ ಬೂಟಿನಲ್ಲಿ ಹೊಡೆದಿದ್ದರೂ ಎಂಬುದಾಗಿ ಕೂಡ ನೆನಪಿಸಿಕೊಳ್ಳುತ್ತಾರೆ ಜಗ್ಗೇಶ್. ಇದಕ್ಕಾಗಿ ಅವಮಾನವನ್ನು ತಾಳಲಾರದೆ ಜಗ್ಗೇಶ್ ಅವರು ತಮ್ಮ ಜೀವನವನ್ನೇ ಮುಗಿಸಿಕೊಳ್ಳುವ ನಿರ್ಧಾರವನ್ನು ಕೂಡ ಮಾಡಿದ್ದರಂತೆ ಆದರೆ ಅದನ್ನೆಲ್ಲಾ ಎದುರಿಸಿ ಹಾಗೂ ಮನದಲ್ಲಿಯೇ ಧೈರ್ಯವನ್ನು ತುಂಬಿಸಿಕೊಂಡು ಇಂದಿಗೂ ಕೂಡ ನಮ್ಮ ಮುಂದೆ ಒಬ್ಬ ಸ್ಪೂರ್ತಿಯ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಪೋಷಕರಿಗೂ ಕೂಡ ಜಗ್ಗೇಶ್ ಅವರು ಅಂಕವನ್ನು ನೋಡಿ ನಿಮ್ಮ ಮಕ್ಕಳ ಭವಿಷ್ಯವನ್ನು ನಿರ್ಧಾರ ಮಾಡಬೇಡಿ ಎಂಬುದಾಗಿ ಸಂದೇಶವನ್ನು ನೀಡುತ್ತಾರೆ.

Leave a Comment

error: Content is protected !!