Jr Ntr: ವೇದಿಕೆ ಮೇಲೆ ಹೋಗುತ್ತಿದ್ದ ಜೂ NTR ಅವರನ್ನು ಬಿಗಿದಪ್ಪಿದ ಅಭಿಮಾನಿ! ನಂತರ ನಡೆದಿದ್ದೆ ಬೇರೆ ವಿಡಿಯೋ ವೈರಲ್!

Jr Ntr ತೆಲುಗು ಚಿತ್ರರಂಗದಲ್ಲಿ ನಟ ಜೂನಿಯರ್ ಎನ್ಟಿಆರ್(Jr Ntr) ಅವರು ಅತ್ಯಂತ ಹೆಚ್ಚು ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಹೊಂದಿರುವಂತಹ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಅಭಿಮಾನಿ ಹಾಗೂ ಬೇಡಿಕೆಯನ್ನು ಹೊಂದಿರುವಂತಹ ಭಾರತೀಯ ಚಿತ್ರರಂಗದ ನಟರಲ್ಲಿ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಅವರ ಕಷ್ಟ ಹಾಗೂ ಪರಿಶ್ರಮಕ್ಕೆ ಜನರ ಬೆಂಬಲ ಇಂದಿಗೂ ಕೂಡ ಹಾಗೆ ಇದೆ.

ಇನ್ನು ಇತ್ತೀಚಿಗಷ್ಟೇ ಅವರು ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ RRR ಸಿನಿಮಾ ಜಾಗತಿಕವಾಗಿ ಆಸ್ಕರ್(Oscars ) ಸೇರಿದಂತೆ ಹಲವಾರು ಪ್ರತಿಷ್ಠಿತ ಅವಾರ್ಡ್ ಗಳನ್ನು ಪಡೆದುಕೊಂಡಿದೆ. ಕೋಮುರಾಮ್ ಭೀಮ್(Komuram Bheem) ಪಾತ್ರದಲ್ಲಿ ಎನ್ ಟಿ ಆರ್ ಅವರ ಪರ್ಫಾರ್ಮೆನ್ಸ್ ಕೂಡ ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶಿಯರು ಕೂಡ ಮೆಚ್ಚುವ ಹಾಗಿದೆ. ಇದಕ್ಕಾಗಿ ಪ್ರಶಂಸೆಯ ಸುರಿಮಳೆಯೇ ಅವರನ್ನು ಹುಡುಕಿಕೊಂಡು ಬಂದಿದೆ.

ಇನ್ನು ನಟ ಜೂನಿಯರ್ ಎನ್ಟಿಆರ್ ಅವರ ಮುಂದಿನ ಸಿನಿಮಾ ಆಗಿರುವಂತಹ #Ntr30 ಸಿನಿಮಾದ ಮುಹೂರ್ತ ಕೂಡ ಈಗಾಗಲೇ ನಡೆದಿದ್ದು ಚಿತ್ರಕ್ಕೆ ಜಾಹ್ನವಿ ಕಪೂರ್(Jahnavi Kapoor) ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಲಿದೆ.

ಇನ್ನು ಇತ್ತೀಚಿಗಷ್ಟೇ ಸಿನಿಮಾ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಜೂನಿಯರ್ ಎನ್ಟಿಆರ್ ಅವರನ್ನು ಜನರ ನಡುವಿನಿಂದ ಬಂದ ಅಭಿಮಾನಿ ಬಿಗಿದಪ್ಪಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಅವರು ಆ ಅಭಿಮಾನಿಯನ್ನು ಅವರ ಬಾಡಿಗಾರ್ಡ್ ಗಳಿಂದ ರಕ್ಷಿಸಿ ಸೆಲ್ಫಿಗೆ ಪೋಸ್ ಕೊಟ್ಟು ಆದರದಿಂದಲೇ ಕಳುಹಿಸಿ ಕೊಡುತ್ತಾರೆ. ಜೂನಿಯರ್ ಎನ್ಟಿಆರ್(Jr Ntr) ಅವರ ಈ ಗುಣ ಎನ್ನುವುದು ಪ್ರತಿಯೊಬ್ಬರ ಮೆಚ್ಚುಗೆಗೆ ಕಾರಣವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ವಿಡಿಯೋ ವೈರಲ್ ಆಗಿದೆ.

Leave a Comment

error: Content is protected !!