Puneeth Rajkumar: ಅಪ್ಪು ಬರ್ತಡೆಗೆ ಒಂದೇ ಸಿನಿಮಾದಲ್ಲಿ ಬರ್ತಿದ್ದಾರೆ ಉಪ್ಪಿ ಕಿಚ್ಚ ಹಾಗೂ ಶಿವಣ್ಣ. ಶಾ’ಕ್ ನಲ್ಲಿ ಅಭಿಮಾನಿಗಳು.

Karnataka Ratna Dr Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಕಂಡಂತಹ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬದುಕಿದ್ದು ಕೇವಲ 46 ವರ್ಷ ಆಗಿದ್ದರೂ ಕೂಡ ಇಡೀ ಮನುಕುಲಕ್ಕೆ ಮಾನವತವಾದವನ್ನು ತಮ್ಮ ಬದುಕಿನ ಮೂಲಕವೇ ಸಾರಿದಂತಹ ಮಹಾನ್ ಚೇತನ ಅವರು.

ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ರಿಯಲ್ ಸ್ಟಾರ್ ಉಪೇಂದ್ರ(Upendra), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರ ಬಗ್ಗೆ. ಕನ್ನಡ ಚಿತ್ರರಂಗದ ಸದ್ಯದ ತ್ರಿಮೂರ್ತಿಗಳು ಎಂದರೂ ಕೂಡ ತಪ್ಪಾಗಲಾರದು.

Kiccha Sudeep Shivanna And Upendra

ಈಗ ಕೇಳಿಬರುತ್ತಿರೋ ಸುದ್ಧಿಯ ಪ್ರಕಾರ ಈ ಮೂವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ರವರ ಬರ್ತಡೇ ಆಗಿರೋ ಮಾರ್ಚ್ 17 ರಂದು ಒಂದಾಗಿ ಬರಲು ಸಜ್ಜಾಗಿ ನಿಂತಿದ್ದಾರೆ. ಇದೇನಪ್ಪಾ ವಿಶೇಷ ವಿಚಿತ್ರ ಎನ್ನುವುದಾಗಿ ಅಭಿಮಾನಿಗಳು ಗೊಂದಲ ಮಾಡಿಕೊಳ್ಳಬಹುದು. ಆದರೆ ವಿಚಾರ ನಿಜಾನೇ ಅದೂ ಕೂಡ ಸಿನಿಮಾ ಮುಖಾಂತರವೇ. ಆ ಸಿನಿಮಾ ಯಾವುದು ಎಂದು ಹುಡುಕುತ್ತಾ ಹೋದರೆ ನಮಗೆ ಸಿಗುವಂತಹ ಉತ್ತರ ಪ್ಯಾನ್ ಇಂಡಿಯನ್ ಫಿಲ್ಮ್ ಕಬ್ಜಾ(Kabzaa).

ಹೌದು ಗೆಳೆಯರೇ ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ನಟಿಸಿರುವ ಕಬ್ಜಾ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರು ಕೂಡ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಸಿನಿಮಾದಲ್ಲಿ ಶಿವಣ್ಣ(Shivanna) ಕೂಡ ನಟಿಸಲಿದ್ದಾರೆ ಎನ್ನುವುದು ಹೊಸ ವಿಚಾರ. ಮೂವರು ಒಟ್ಟಾಗಿ ನಟಿಸುತ್ತಿರುವ ಈ ಸಿನಿಮಾ ಅಪ್ಪು ಬರ್ತಡೇ ದಿನಾನೇ.ಬಿಡುಗಡೆ ಕಾಣುತ್ತಿರುವುದು ಅಭಿಮಾನಿಗಳಲ್ಲಿ ಕೂಡ ಸಂತೋಷವನ್ನು ತರಿಸಿದೆ.

Leave a Comment

error: Content is protected !!