Ramya Actress: ಚಿತ್ರರಂಗಕ್ಕೆ ಹಲವಾರು ವರ್ಷಗಳ ನಂತರ ರಾಜಕಾರಣದಿಂದ ಕಂಬ್ಯಾಕ್ ಮಾಡಿರುವ ನಟಿ ರಮ್ಯಾ ಈಗ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Ramya ಸ್ಯಾಂಡಲ್ ವುಡ್ ಕ್ವೀನ್(Sandalwood Queen) ಎಂಬುದಾಗಿ ರಮ್ಯಾ ಅವರನ್ನು ಕರೆಯುತ್ತೇವೆ. ಅವರು ಚಿತ್ರರಂಗದಿಂದ ದೂರವಾಗಿ ಸಾಕಷ್ಟು ವರ್ಷಗಳು ಕಳೆದಿದ್ದರು ಕೂಡ ಇಂದಿಗೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ ಹಾಗೂ ಅವರಿಗೆ ಇರುವಂತಹ ಜನಪ್ರಿಯತೆ ಕನ್ನಡ ಚಿತ್ರರಂಗದಲ್ಲಿ ಕಿಂಚಿತ್ತು ಕೂಡ ಕಡಿಮೆಯಾಗಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಪ್ರಭಾವವನ್ನು ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯ(ramya) ಬೀರಿದ್ದಾರೆ.

ಸಿನಿಮಾ ರಂಗದ ತಮ್ಮ ಆರಂಭಿಕ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಯಶಸ್ಸನ್ನು ಪಡೆದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕೂಡ ಕೆಲವೊಂದು ಸಿನಿಮಾಗಳಲ್ಲಿ ನಟಿ ರಮ್ಯಾ ಕಾಣಿಸಿಕೊಂಡಿದ್ದರು. ಅದಾದ ನಂತರ ಕನ್ನಡದಲ್ಲಿ ಸಿನಿಮಾದಲ್ಲಿ ನಟಿಸಿದ ನಂತರ ಸಂಪೂರ್ಣವಾಗಿ ವಿರಾಮವನ್ನು ಪಡೆದುಕೊಂಡು ನೇರವಾಗಿ ರಾಷ್ಟ್ರ ರಾಜಕಾರಣದಲ್ಲಿ(National Politics) ಧುಮುಕುತ್ತಾರೆ.

ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ರಾಜಕೀಯ ಕಾರ್ಯಗಳಿಗಾಗಿ ರಮ್ಯಾ(Ramya Divyaspandana) ಅವರು ತಮ್ಮನ್ನು ತೊಡಗಿಸಿಕೊಂಡು ಕನ್ನಡ ಚಿತ್ರರಂಗವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಈಗ ರಾಜಕೀಯ ರಂಗದಿಂದ ದೂರ ಸರಿದಿರುವ ರಮ್ಯ ಮತ್ತೆ ಕನ್ನಡ ಚಿತ್ರರಂಗಕ್ಕೆ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಲು ಕಂಬ್ಯಾಕ್ ಮಾಡುತ್ತಿದ್ದಾರೆ. ಪದ್ಯಕ್ಕೆ ಮೊದಲ ಸಿನಿಮಾ ಆಗಿ ಡಾಲಿ ಧನಂಜಯ್(Daali Dhananjay) ನಟನೆಯ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ವಾಪಸಾತಿ ಮಾಡಿರುವ ರಮ್ಯಾ(Ramya Kannada Actress) ಅವರು ಈಗ ಪಡೆದುಕೊಳ್ಳುತ್ತಿರುವ ಸಂಭವನ ಕೇಳಿದರೆ ಇನ್ನೂ ಕೂಡ ಅವರ ಬೇಡಿಕೆ ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಕಿಂಚಿತ್ತು ಕೂಡ ಕಡಿಮೆ ಆಗಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಗೆಳೆಯರೇ ರಮ್ಯಾ ಅವರು ಈಗ ಪ್ರತಿ ಸಿನಿಮಾಗಳಿಗೆ ಪಡೆಯುತ್ತಿರುವ ಸಂಭಾವನೆ ಏನಿಲ್ಲವೆಂದರು 40 ರಿಂದ 60 ಲಕ್ಷ ರೂಪಾಯಿ ಇದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾದರೂ ಕೂಡ ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ.

Leave a Comment

error: Content is protected !!