ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಷ್ ಖ್ಯಾತಿಯ ನಟಿ ಪೂರ್ಣ ಮದುವೆಯಾದ ಹುಡುಗ ಸಾಮಾನ್ಯದವನಲ್ಲ ಈತನ ಆಸ್ತಿ ಎಷ್ಟು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮದುವೆ ಸುದ್ದಿ ನಮಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಈಗ ಈ ಸಾಲಿಗೆ ಜೋಶ್ ಸಿನಿಮಾ ಖ್ಯಾತಿಯ ನಟಿ ಪೂರ್ಣ ಅಲಿಯಾಸ್ ಶಮ್ನ ಕಾಸಿಂ ಸೇರ್ಪಡೆಯಾಗಿದ್ದಾರೆ. ನಟಿ ಪೂರ್ಣ ಅವರ ಹೆಸರು ಶಮ್ನ ಖಾಸಿಂ ಎನ್ನುವುದು ಹಲವಾರು ಜನರಿಗೆ ತಿಳಿದಿಲ್ಲ ಎಂಬುದು ಖಚಿತವಾಗಿರುವ ವಿಚಾರ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಮದುವೆ ಆಗುವ ವಿಚಾರದ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಪೂರ್ಣ ತಿಳಿಸಿದರು ಆದರೆ ಯಾರನ್ನು ಮದುವೆಯಾಗುತ್ತೇನೆ ಎಂಬುದಾಗಿ ಹೇಳಿರಲಿಲ್ಲ.

ಕೊನೆಗೂ ಈಗ ದಾಂಪತ್ಯ ಜೀವನಕ್ಕೆ ಮದುವೆಯಾಗುವ ಮೂಲಕ ಕಾಲಿಟ್ಟಿದ್ದು ತಮ್ಮ ಮದುವೆ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಂತೋಷದಿಂದ ಹಂಚಿಕೊಂಡಿದ್ದಾರೆ. ಮಲಯಾಳಂ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದ್ದು ಮಾತ್ರ ರಾಕೇಶ್ ಅಡಿಗ ಸೇರಿದಂತೆ ಹಲವಾರು ಯುವನಟರು ಒಟ್ಟಾಗಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ಜೋಶ್ ಸಿನಿಮಾದ ಮೂಲಕ. ಈ ಸಿನಿಮಾದ ಯಶಸ್ಸಿನ ನಂತರ ಮತ್ತೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದು.

ಇನ್ನೂ ಪೂರ್ಣ ಅಲಿಯಾಸ್ ಶಮ್ನ ಖಾಸಿಂ ದುಬೈ ಮೂಲದ ಉದ್ಯಮಿ ಆಗಿರುವ ಶಾನಿದ್ ಆಸಿಫ್ ಅಲಿ ಅವರನ್ನು ಅಕ್ಟೋಬರ್ 24ರ ರಾತ್ರಿ ಎಂದು ದುಬೈನಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಗೋಲ್ಡನ್ ಹಾಗೂ ಬಿಳಿ ಮತ್ತು ಕೆಂಪು ಬಣ್ಣದ ಕಾಂಬಿನೇಷನ್ನಲ್ಲಿ ಶ್ರೀಮಂತವಾಗಿರುವ ಸೀರೆಯಲ್ಲಿ ದೇವಲೋಕದಿಂದ ಇಳಿದು ಬಂದಂತಹ ದೇವತೆಯ ಹಾಗೆ ಕಾಣಿಸಿಕೊಂಡಿರುವ ಪೂರ್ಣ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಆಗುತ್ತಿದ್ದಾರೆ.

ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ಪೂರ್ಣ ಅಲಿಯಾಸ್ ಶಮ್ನ ಖಾಸಿಂ ರವರಿಗೆ ವಿವಾಹ ಮಹೋತ್ಸವದ ಶುಭಾಶಯಗಳನ್ನು ಕೋರಿದ್ದು ಅಭಿಮಾನಿಗಳಿಗೆ ಕೂಡ ಈ ಸುದ್ದಿ ಖುಷಿಯನ್ನು ತರಿಸಿದೆ. ಪೂರ್ಣ ಮದುವೆ ಆಗಿರುವ ಹುಡುಗ ದುಬೈ ನಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್. ವರ್ಷಕ್ಕೆ 100 ರಿಂದ 150 ಕೋಟಿ ರೂಪಾಯಿ ಅಷ್ಟು ಆಸ್ತಿ ಇವನ ಪಾಲು ಸೇರುತ್ತದೆ. ನಟಿ ಪೂರ್ಣ ಅವರು ಏನು ಕಡಿಮೆ ಇಲ್ಲ ಸಿನೆಮಾ ಗಳಲ್ಲಿ ಹೀರೋ ಇನ್ಇ ಆಗಿ ಈಗಲೂ ಕೂಡ ಮಿಂಚುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Leave a Comment

error: Content is protected !!