ಡುಬ್ಲಿಕೇಟ್ ಸಿಮ್ ಅನ್ನು ಖರೀದಿಸಲು ಹೋಗಿದ್ದ ನಟಿಗೆ ಶಟರ್ ಎಳೆದು ಅಂಗಡಿಯ ಉದ್ಯೋಗಿ ಮಾಡಿದ್ದೇನು ಗೊತ್ತಾ?

ಕೇರಳದ ಮೂಲದ ನಟಿ ಆಗಿರುವ ಅನ್ನಾ ರೇಷ್ಮಾ ರಾಜನ್ ಅವರು ಇತ್ತೀಚಿಗಷ್ಟೇ ಕೇರಳದ ಅಲುವಾದಲ್ಲಿರುವ ಟೆಲಿಕಾಂ ಸಂಸ್ಥೆಯ ಶೋರೂಂಗೆ ಹೋಗಿದ್ದಾಗ ಅಲ್ಲಿಯ ಉದ್ಯೋಗಿ ಅವರೊಂದಿಗೆ ನಡೆದುಕೊಂಡ ಅನುಚಿತ ವರ್ತನೆಯ ಕುರಿತಂತೆ ಈಗ ನಟಿ ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಆತನ ವಿರುದ್ಧ ಪೊಲೀಸ್ ಪ್ರಕರಣವನ್ನು ಕೂಡ ದಾಖಲಿಸಿದ್ದರಂತೆ.

ಡುಬ್ಲಿಕೇಟ್ ಸಿಮ್ ಅನ್ನೋ ತರಲು ಹೋಗಿದ್ದ ಸಂದರ್ಭದಲ್ಲಿ ರೇಷ್ಮಾ ರಾಜನ್ ಅವರನ್ನು ಆ ಖಾಸಗಿ ಟೆಲಿಕಾಂ ಸಂಸ್ಥೆಯ ಉದ್ಯೋಗಿ ಶೋರೂಮ್ನಲ್ಲಿ ಕೂಡಿ ಹಾಕಿರುವ ಬಗ್ಗೆ ಈಗ ಅವರು ಹಂಚಿಕೊಂಡಿದ್ದಾರೆ. ಶೋರೂಮ್ನಲ್ಲಿ ಶಟರ್ ಎಳೆದು ಆ ಉದ್ಯೋಗಿ ನನ್ನನ್ನು ಕೂಡಿಹಾಕಿ ಬೆದರಿಕೆಯನ್ನು ಹಾಕಿದ್ದರು ಎಂಬುದಾಗಿ ನಟಿ ರೇಷ್ಮರಾಜನ್ ಹೇಳಿದ್ದಾರೆ. ಪೊಲೀಸ್ ಠಾಣೆಗೆ ಹೋಗಿ ಆತನ ವಿರುದ್ಧ ದೂರನ್ನು ಕೂಡ ದಾಖಲಿಸಲಾಗಿತ್ತು ಎಂಬುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ಬಂದ ಆತ ನನ್ನ ಬಳಿ ಕ್ಷಮೆಯಾಸಿ ಸಿದ್ದ ಹಿನ್ನೆಲೆಯಲ್ಲಿ ಆತನ ಭವಿಷ್ಯಕ್ಕೆ ಏನು ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಅಲ್ಲಿಗೆ ನಾನು ಸುಮ್ಮನೆ ಬಿಟ್ಟೆ ಎಂಬುದಾಗಿ ಕೂಡ ಹೇಳಿದ್ದಾರೆ. ಈ ಸುದ್ದಿ ಈಗ ಕೇರಳದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದು ಸೆಲೆಬ್ರಿಟಿಗಳಿಗೆ ಕೂಡ ಹೀಗೆ ಆಗುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂಬುದಾಗಿ ಜನರು ಮಾತನಾಡಿಕೊಳ್ಳುವ ಪರಿಸ್ಥಿತಿ ಮೂಡುವಂತೆ ಮಾಡಿದೆ.

ಮಲಯಾಳಂ ಚಿತ್ರರಂಗದಲ್ಲಿ ಪ್ರಸಿದ್ಧ ನಟಿಯಾಗಿರುವ ರೇಷ್ಮಾ ರಾಜನ್ ಅವರು ಈಗಾಗಲೇ ಸೂಪರ್ ಹಿಟ್ ಸಿನಿಮಾಗಳಾಗಿರುವ ಮಧುರ ರಾಜ, ಅಯ್ಯಪ್ಪನುಂ ಕೋಶಿಯುಂ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಒಬ್ಬರ ಜೊತೆ ಹೀಗೆ ಆಗಿರುವ ಹಿನ್ನೆಲೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!