ಬೀದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕನ ಅಸಲಿ ಕಥೆ ಗೊತ್ತಾದಾಗ ಶಾಕ್ ಆಗಿ ಸೆಲ್ಯೂಟ್ ಹೊಡೆದ ಪೊಲೀಸರು

ಮಧ್ಯಪ್ರದೇಶದ ಗ್ವಾಲಿಯರ್ ಎಂಬಲ್ಲಿ ನಡೆದಿರುವ ನೈಜ ಘಟನೆ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ರಾತ್ರಿಯ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಚಳಿಯಲ್ಲಿ ನಡುಗುತ್ತಿದ್ದ ವೃದ್ಧ ವ್ಯಕ್ತಿ ಸಿಗುತ್ತಾರೆ. ಅವರಿಗೆ ಪಾಪ ಎಂದು ಅನಿಸಿ ಒಬ್ಬ ಪೊಲೀಸ್ ಅಧಿಕಾರಿ ಜರ್ಕಿನ್ ಬಿಚ್ಚಿಕೊಟ್ಟರೆ ಇನ್ನೊಬ್ಬ ಅಧಿಕಾರಿ ಬೂಟ್ಸ್ ಅನ್ನು ಬಿಚ್ಚಿ ಆ ವೃದ್ಧ ವ್ಯಕ್ತಿಗೆ ನೀಡುತ್ತಾರೆ. ಇನ್ನೇನು ಹೊರಡಬೇಕು ಎಂದು ಹೊರಡುವಾಗ ಅವರಿಬ್ಬರ ನಿಜವಾದ ಹೆಸರನ್ನು ಯಾರೂ ಕೂಗಿದಂತಾಗುತ್ತದೆ. ಹಿಂದೆ ನೋಡಿದರೆ ಮುದುಕನನ್ನು ಬಿಟ್ಟರೆ ಬೇರೆ ಯಾರು ಕೂಡ ಇರಲಿಲ್ಲ.

ಹೀಗಾಗಿ ತಮ್ಮನ್ನು ಕರೆದಿದ್ದು ಆ ಮುದುಕನ ಎಂಬುದಾಗಿ ಗೊತ್ತಾಗಿ ಆತನ ಬಳಿ ಹೋಗಿ ನಮ್ಮ ಹೆಸರು ನಿಮಗೆ ಹೇಗೆ ತಿಳಿಯಿತು ಎಂಬುದಾಗಿ ಕೇಳುತ್ತಾರೆ. ಆದರೆ ಆ ಮುದುಕನನ್ನು ಸರಿಯಾಗಿ ಗಮನಿಸಿ ನೋಡಿದಾಗ ಅವರ ಬ್ಯಾಚ್ ನಲ್ಲಿ ಕೆಲಸ ಮಾಡಿದ ಮನೀಶ್ ಮಿಶ್ರಾ ಎಂಬುದಾಗಿ ತಿಳಿಯು. ನೀವು ನಮ್ಮ ಜೊತೆಗೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದವರು ಯಾಕೆ ಈಗ ನೀವು ಈ ಪರಿಸ್ಥಿತಿಗೆ ಬಂದಿದ್ದೀರಿ ಎಂಬುದಾಗಿ ಆ ಮುದುಕನನ್ನು ಕೇಳುತ್ತಾರೆ. 2005 ವರೆಗೂ ಕೂಡ ಚೆನ್ನಾಗಿದ್ದ ಮನಿಷ್ ಮಿಶ್ರಾಗೆ ಮಾನಸಿಕ ಕಾಯಿಲೆ ಕಂಡುಬರುತ್ತದೆ.

ಮೊದಲಿಗೆ ಮನೆಯವರೇ ಕೆಲಸದಿಂದ ಬಿಡಿಸಿ ಮನೆಯಲ್ಲಿ ನೋಡಿಕೊಳ್ಳುತ್ತಾರೆ. ನಂತರ ಮನಿ ಮಿಶ್ರ ಮಾನಸಿಕ ಕಾಯಿಲೆಯಿಂದಾಗಿ ಎಲ್ಲೆಂದರಲ್ಲಿ ಹೋಗುವ ಕೆಲಸವನ್ನು ಮಾಡಿದಾಗ ಆತನನ್ನು ಮನೆಯವರು ಬಿಟ್ಟುಬಿಡುತ್ತಾರೆ. ಮನೆಯಿಂದ ಹೊರ ಬಂದ ನಂತರ ಈಗ ಯಾರೂ ಗತಿ ಇಲ್ಲದೆ ಮನೀಶ್ ಮಿಶ್ರಾ ಭಿಕ್ಷೆ ಬೇಡಿ ಫುಟ್ಪಾತ್ ಗಳಲ್ಲಿ ಮಲಗುವ ಭಿಕ್ಷುಕನಾಗಿ ಇದ್ದಾರೆ. ಬರೋಬ್ಬರಿ ಹತ್ತು ವರ್ಷಗಳಿಗಿಂತಲೂ ಅಧಿಕಕಾಲ ಇದೇ ರೀತಿ ಜೀವನ ನಡೆಸುತ್ತಿರುವ ಮನೀಷ್ ಮಿಶ್ರ ಅವರ ಕಥೆ ಕೇಳಿ ಆ ಇಬ್ಬರು ಪೊಲೀಸರು ಕೂಡ ಕಣ್ಣೀರು ಹಾಕುತ್ತಾರೆ.

ನಂತರ ಆತನನ್ನು ಕರೆದುಕೊಂಡು ಸ್ವರ್ಗಧಾಮ ಎನ್ನುವ ಆಶ್ರಮಕ್ಕೆ ಕರೆದುಕೊಂಡು ಹೋಗಿ ಆತನ ಗಡ್ಡ ಮೀಸೆಯನ್ನು ಶೇವಿಂಗ್ ಮಾಡಿಸಿ ಚೆನ್ನಾಗಿ ಕಾಣುವಂತೆ ಮಾಡುತ್ತಾರೆ. ಪೋಲಿಸ್ ಹಿರಿಯ ಅಧಿಕಾರಿಗಳು ಕೂಡ ಆತನ ಯೋಗ ಕ್ಷೇಮವನ್ನು ವಿಚಾರಿಸಲು ಆಗಾಗ ಬಂದು ಹೋಗುತ್ತಾರೆ. ನಂತರ ಆಕೆಯ ತಂಗಿಗೆ ವಿಚಾರ ತಿಳಿಸಿದ ನಂತರ ಚೀನಾದಲ್ಲಿರುವ ಆತನ ತಂಗಿ ಆತನನ್ನು ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿ ಹೇಳಿ ಪ್ರತಿ ತಿಂಗಳು ಖರ್ಚಿಗೆ ಈಗ ಹಣವನ್ನು ಕಳಿಸುತ್ತಿದ್ದಾರೆ.

Leave a Comment

error: Content is protected !!