ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆಯ ಬಗ್ಗೆ ಕೆಜಿಎಫ್ ತಾತ ಹೊರ ಹಾಕಿದ ಶಾಕಿಂಗ್ ಸತ್ಯಾಂಶ

ಕನ್ನಡ ಚಿತ್ರರಂಗದ ಚಕ್ರವರ್ತಿ ಎನಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ, ಶ್ರೀನಿವಾಸ್ ಅವರು ತಮ್ಮ ತೂಗುದೀಪ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಮೇಯರ್ ಮುತ್ತಣ್ಣ, ಬಂಗಾರದ ಪಂಜರ, ಗಂಧದಗುಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..

ಹೆಚ್ಚಿನದಾಗಿ ಖಳನಾಯಕನ ಪಾತ್ರವನ್ನು ಮಾಡುತ್ತಿದ್ದ ಇವರನ್ನು ಎದುರಲ್ಲಿ ಕಂಡಾಗ ಒಂದಿಷ್ಟು ಜನರು ಕೋಪಗೊಳ್ಳುತ್ತಿದ್ದರಂತೆ; ಇದರಿಂದಲೇ ತಿಳಿಯುತ್ತದೆ ಶ್ರೀನಿವಾಸ್ ಅವರು ಪಾತ್ರಕ್ಕೆ ತಕ್ಕನಾದ ಅಭಿನಯವನ್ನು ಮಾಡುತ್ತಿದ್ದರೆಂಬುದು. ಆದರೆ ನಿಜ ಜೀವನದಲ್ಲಿ ನಾಯಕನಾಗಿ ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ.

ತಂದೆಯಂತೆ ಮಗ ದರ್ಶನ್ ಅವರು ಕೂಡ ಕಷ್ಟದಲ್ಲಿರುವವರಿಗೆ ಹೆಗಲಾಗಿದ್ದಾರೆ. ಒಂದು ಮಠ, ಅರವತ್ತು ಅನಾಥಾಶ್ರಮಗಳ ಅಗತ್ಯ ವಸ್ತು, ದವಸ ಧಾನ್ಯಗಳ ಪೂರೈಕೆಯ ಜವಾಬ್ದಾರಿಯನ್ನು ದರ್ಶನ ಅವರು ಹೊತ್ತಿದ್ದಾರೆ. ತಮ್ಮ ಅಭಿಮಾನಿಗಳನ್ನು ಒಳ್ಳೆಯ ಕಾರ್ಯಕ್ಕಾಗಿ ಪ್ರೋತ್ಸಾಹಿಸಿ, ಕ್ಯಾನ್ಸರ್ ಪೇಡಿತ ಹಲವಾರು ಪುಟ್ಟ ಮಕ್ಕಳಿಗಾಗಿ ರಕ್ತದಾನವನ್ನು ಮಾಡಿಸಿದ್ದಾರೆ. ಪ್ರಾಣಿ ಪ್ರಿಯರಾದ ಇವರು ಗೋಶಾಲೆಗೆ ಮೇವನ್ನು ಒದಗಿಸಿಕೊಡುತ್ತಾರೆ. 20ಕ್ಕೂ ಹೆಚ್ಚು ಅಂಗವಿಕಲರಿಗೆ ವೀಲ್ ಚೇರ್ ದಾನ ಮಾಡಿದ್ದಾರೆ. ಬಡವರು ಹಸಿವಿನಿಂದ ತೊಳಲಾಡಿ ನಿಂತಾಗ ಅನ್ನದಾನವನ್ನು ಮಾಡಿದ್ದಾರೆ. ಇವರ ಸಾಲು ಸಾಲು ಸಹಾಯಗಳು ಅಭಿಮಾನಿಗಳ ಬಾಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತವೆ.

ಕೆಜಿಎಫ್ ಚಿತ್ರದಲ್ಲಿ ಕುರುಡನ ಪಾತ್ರ ನಿರ್ವಹಿಸಿದ ತಾತನ ಹೆಸರು ಕೃಷ್ಣಪ್ಪ. ಇವರು ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದು, ತೂಗುದೀಪ ಶ್ರೀನಿವಾಸ್ ಅವರ ರಾಮ ಪರಶುರಾಮ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ನಟ ದರ್ಶನ್ ತಂದೆ ಶ್ರೀನಿವಾಸ್ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ..

‘ಚಿತ್ರದಲ್ಲಿ ಭುಜದ ಮೇಲೆ ಶ್ರೀನಿವಾಸ ಅವರು ಪಕ್ಷಿಯೊಂದನ್ನು ಇರಿಸಿಕೊಳ್ಳುವ ದೃಶ್ಯವಿತ್ತು. ಯಾವ ಬಳ್ಳಿಯ ಸಹಾಯವಿಲ್ಲದೆ ಶ್ರೀನಿವಾಸ್ ಅವರು ಪಕ್ಷಿಯನ್ನು ತನ್ನ ಭುಜದ ಮೇಲೆ ಇರಿಸಿಕೊಂಡಿದ್ದರು. ತುಂಬಾ ಸಲುಗೆಯಿಂದ ನೋಡುತ್ತಿದ್ದ ಅವರ ಭುಜದ ಮೇಲೆ ಪಕ್ಷಿಯು ಯಾವುದೇ ಸಂಕೋಚವಿಲ್ಲದೆ ಕುಳಿತಿತ್ತು. ಅವರಿಗೆ ಸಹಾಯ ಮಾಡುವ ಮನೋಭಾವನೆ ಇತ್ತು. ಆತಿಥ್ಯದಲ್ಲಿ ಮೇಲಿದ್ದ ಅವರು ಪರಿಚಿತರನ್ನು ತಮ್ಮ ಮನೆಗೆ ಊಟಕ್ಕಾಗಿ ಕರೆಯುತ್ತಿದ್ದರು. ಚಿತ್ರೀಕರಣ ಮುಗಿಯುತ್ತಿದ್ದಂತೆ ಎಲ್ಲರನ್ನೂ ಮನೆಗೆ ಕಳುಹಿಸಿಕೊಡುವ ಕಾರ್ಯ ಕೂಡ ತೂಗುದೀಪ ಅವರದೇ ಆಗಿತ್ತು. ದರ್ಶನ್ ಅವರು ಸಹಾಯ ಮಾಡುವುದನ್ನು ಕಂಡಾಗ ಅವರ ತಂದೆಯೇ ನೆನಪಿಗೆ ಬರುತ್ತಾರೆ’ ಎಂದಿದ್ದಾರೆ. ಸಂದರ್ಶನದ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!