ಆಶ್ರಮಕ್ಕೆ ಬಂದ ಚಂದ್ರಶೇಖರ್ ಗೆ ಹೊರಡುವಾಗ ವಿನಯ್ ಗುರೂಜಿ ಸಾವಿನ ಸುಳಿವನ್ನು ನೀಡಿದ ರೋಚಕ ಸತ್ಯ ಬಯಲು

ಗುರುಗಳೆಂದರೆ ಶಿಷ್ಯ ವರ್ಗದವರಿಗೆ ನಂಬಿಕೆ. ಆಗಾಗ ದರ್ಶನ ಪಡೆದು, ಆಶೀರ್ವಾದ ಪಡೆಯುವುದು ರೂಢಿ. ದೇವರಲ್ಲಿ ಮತ್ತು ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಗುರುವು ಭಕ್ತಿ, ನಿಷ್ಠೆ, ಆಚರಣೆ, ನಡತೆಗಳಿಂದ ಸಮಸ್ತ ಜನತೆಗೆ ಮಾದರಿಯಾಗಿರುತ್ತಾರೆ…ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಗೆ ‘ಅವಧೂತರ ಬಾಯಿಯಿಂದ ಸಾವಿನ ಮುನ್ಸೂಚನೆಯ ಭವಿಷ್ಯ ಕೇಳಿತ್ತಾ?’ ಎಂಬ ಪ್ರಶ್ನೆ ಕಾಡುತ್ತಿದೆ..

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಸಮೀಪದ ತುಂಗಾ ಕಾಲುವೆಯ ಬಳಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಚಂದ್ರಶೇಖರ್ ಅವರ ಸಾವಿನ ಸುತ್ತ ಹಲವಾರು ಸಂಶಯದ ಮಾತುಗಳು ಕೇಳಿಬರುತ್ತಿದೆ. ಶಾಸಕರಾದ ರೇಣುಕಾಚಾರ್ಯ ಅವರ ಸಹೋದರನ ಪುತ್ರ, ಚಂದ್ರಶೇಖರ್. ಚಿಕ್ಕಮಗಳೂರಿನ ಗೌರಿಗದ್ದೆಗೆ ಕಾರಿನಲ್ಲಿ ಹೋಗಿದ್ದ ಚಂದ್ರಶೇಖರ್, ವಿನಯ್ ಗುರೂಜಿ ಅವರ ಆಶ್ರಮಕ್ಕೆ ತೆರಳಿ ದರ್ಶನ ಪಡೆದು, ಶಿವಮೊಗ್ಗದಲ್ಲಿರುವ ತಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆದು ಹೊನ್ನಾಳಿಯ ಕಡೆಗೆ ಆಗಮಿಸುತ್ತಿದ್ದರಂತೆ. ನಂತರ ಏನಾಯ್ತು ಎಂಬುದು ಯಾರಿಗೂ ಖಚಿತವಾಗಿ ತಿಳಿದಿಲ್ಲ. ಕುಟುಂಬಸ್ಥರು ಹುಡುಕಾಡಿದಾಗ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದಾರೆ.

ಚಂದ್ರಶೇಖರ್ ಅವರು ವಿನಯ್ ಗುರೂಜಿಯವರ ಆಶ್ರಮಕ್ಕೆ ರಾತ್ರಿ ಸುಮಾರು 9 ಗಂಟೆಯ ನಂತರ ಭೇಟಿ ನೀಡಿದ್ದರಂತೆ. 9:40 ರ ವರೆಗೂ ಗುರೂಜಿಯೊಂದಿಗೆ ಮಾತನಾಡಲು ಕಾದು ಕುಳಿತಿದ್ದರಂತೆ. ಆಗಾಗ ಆಶ್ರಮಕ್ಕೆ ಬರುತ್ತಿದ್ದ ಚಂದ್ರಶೇಖರ್ ಅವರು ಗುರೂಜಿಯವರಿಗೆ ಚಿರಪರಿಚಿತರು. ‘ಇಷ್ಟು ಲೇಟಾಗಿ ಯಾಕೆ ಬಂದೆ? ಇದು ಬರುವ ಸಮಯವಾ?’ ಎಂದು ಗುರೂಜಿಯವರು ಚಂದ್ರಶೇಖರ್ ಕಂಡೊಡನೆಯೇ ಸಲುಗೆಯಿಂದ ಜೋರಾಗಿ ಕೇಳಿದ್ದರಂತೆ.

ಗುರೂಜಿಯೊಂದಿಗೆ ಮಾತನಾಡಿ ಹೊರಡಲು ಸಿದ್ದನಾದ ಚಂದ್ರಶೇಖರ್ ಅವರನ್ನು ಬಳಿಗೆ ಕರೆದು, ಗುರೂಜಿಯವರು ‘ಈಗಾಗಲೇ ತಡವಾಗಿದೆ; ರಾತ್ರಿಯ ಹೊತ್ತಾದ್ದರಿಂದ ಜಾಗ್ರತೆಯಿಂದ ಹೋಗಿ’ ಎಂಬ ಮಾತುಗಳನ್ನು ಆಡಿದ್ದರಂತೆ. ನಂತರ ಚಂದ್ರಶೇಖರ್, ಅವರ ಗೆಳೆಯ ಕಿರಣನೊಂದಿಗೆ ಆಶ್ರಮದಿಂದ ಹೊರಟರಂತೆ. ಈ ವಿಚಾರವಾಗಿ ಆಶ್ರಮದಲ್ಲಿರುವ ಚಂದ್ರಶೇಖರ್ ಅವರ ಆಪ್ತರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸುಮಾರು 10 ಗಂಟೆಯ ವೇಳೆಯಲ್ಲಿ ಇವರು ಹೊರಟ ಕಾರು ಕೊಪ್ಪ ಬಸ್ ನಿಲ್ದಾಣವನ್ನು ದಾಟಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಾವಿನ ಕುರಿತಾಗಿ ರೇಣುಕಾಚಾರ್ಯ ಅವರು ಕಣ್ಣೀರಿಡುತ್ತಾ ‘ನನ್ನ ಮೇಲಿನ ದ್ವೇಷಕ್ಕೆ ನನ್ನ ಮಗನನ್ನು ಬಲಿಪಡಿದಿದ್ದಾರೆ. ಬೇಕಂತಲೇ ಆತನನ್ನು ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಕುಟುಂಬಸ್ಥರಿಗೆ ಗೌರಿಗದ್ದೆಗೆ ಹೋಗಿ ಬರುತ್ತೇನೆ ಎಂದು ಹೇಳಿಯೇ ಹೋಗಿದ್ದ. ಆತನಿಗೆ ಯಾರು ಶತ್ರುಗಳಿರಲಿಲ್ಲ. ಮುಖ್ಯಮಂತ್ರಿಗಳು, ಗೃಹ ಸಚಿವರು ಈ ಸಾವಿನ ಕುರಿತು ತನಿಖೆ ನಡೆಸಲು ಆಜ್ಞೆ ಹೊರಡಿಸಬೇಕು’ ಎಂಬುದಾಗಿ ಹೇಳಿದ್ದಾರೆ.

Leave a Comment

error: Content is protected !!