Kiccha Sudeep: 2 ನಿಮಿಷಕ್ಕಿಂತ ಕೂಡ ಕಡಿಮೆ ಇದ್ದ ಬಾಹುಬಲಿ ಚಿತ್ರದ ಅಸ್ಲಾಂ ಖಾನ್ ಪಾತ್ರಕ್ಕೆ ಕಿಚ್ಚ ಪಡೆದ ಸಂಭಾವನೆ ಎಷ್ಟು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮೊದಲಿನಿಂದಲೂ ಕೂಡ ಪರಭಾಷೆಗಳಲ್ಲಿ ನಟಿಸಿಕೊಂಡು ಬಂದವರು. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಮಾಡಬಲ್ಲಂತಹ ಅಭಿನಯ ಸಾಮರ್ಥ್ಯ ಅವರಲ್ಲಿರುವ ಕಾರಣದಿಂದಾಗಿಯೇ ಅವರನ್ನು ಅಭಿನಯ ಚಕ್ರವರ್ತಿ ಎಂದು ಕರೆಯಲಾಗುತ್ತದೆ. ಇಂದಿಗೂ ಕೂಡ ಯಾವುದೇ ಪಾತ್ರದಲ್ಲಿ ಅವರು ಕಾಣಿಸಿಕೊಂಡರು ಆ ಪಾತ್ರ ಇನ್ನಷ್ಟು ಚೆನ್ನಾಗಿ ಕಾಣುತ್ತದೆ.

ಇನ್ನು ಕಿಚ್ಚ ಸುದೀಪ್ ಬರೋರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ಸಿನಿಮಾದಲ್ಲಿ ರಾಜ ಮೌಳಿ(Rajamouli) ಅವರ ನಿರ್ದೇಶನದಲ್ಲಿ ಕಾಣಿಸಿಕೊಂಡು ಇಡೀ ಜಗತ್ತೇ ಮೆಚ್ಚುವಂತಹ ನಟನೆಯನ್ನು ಮಾಡಿದ್ದರು. ರಾಜ ಮೌಳಿ ಅವರ ಈ ಸಿನಿಮಾದ ನಂತರ ಮತ್ತೆ ರಾಜಮೌಳಿಯವರೊಂದಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕಾಣಿಸಿಕೊಂಡಿದ್ದು ಬಾಹುಬಲಿ ಸಿನಿಮಾದ ಮೊದಲನೇ ಭಾಗದಲ್ಲಿ. ಹೌದು ಈ ಸಿನಿಮಾದಲ್ಲಿ ಅಸ್ಲಾಂ ಖಾನ್ ಎನ್ನುವ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರು.

ಬಾಹುಬಲಿ(Bahubali) ಸಿನಿಮಾದ ಮೊದಲ ಭಾಗದಲ್ಲಿ ಕಿಚ್ಚ ಸುದೀಪ್ ರವರು ಅಸ್ಲಾಂ ಖಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎರಡು ನಿಮಿಷ ಇರಬಹುದು ಆದರೆ ಆ ಎರಡು ನಿಮಿಷಗಳ ಪಾತ್ರ ಎನ್ನುವುದು ಇಡೀ ಸಿನಿಮಾದಲ್ಲಿ ದೊಡ್ಡ ಮಟ್ಟದ ಪ್ರಭಾವವನ್ನು ಸೃಷ್ಟಿಸಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಷ್ಟಕ್ಕೂ ಈ ಸಿನಿಮಾದ ಈ ಪಾತ್ರಕ್ಕಾಗಿ ಕಿಚ್ಚ ಸುದೀಪ್ ರವರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಈಗ ಸಿನಿಮಾದ ನಂತರ ರಾಜ ಮೌಳಿಯರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾಗಾಗಿ ಕಿಚ್ಚ ಸುದೀಪ್(Kiccba Sudeep) ರವರು ಯಾವುದೇ ಸಂಭಾವನೆಯನ್ನು ಪಡೆದುಕೊಂಡಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಕೇವಲ ರಾಜಮೌಳಿಯವರ ಸ್ನೇಹಕ್ಕಾಗಿ ಈ ಸಿನಿಮಾವನ್ನು ಮಾಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಸ್ನೇಹಕ್ಕಾಗಿ ಕಿಚ್ಚ ಸುದೀಪ್ ಯಾವುದೇ ರೀತಿಯ ಸಹಾಯವನ್ನು ಹಾಗೂ ಸಹಕಾರವನ್ನು ಕೂಡ ನೀಡಲು ಸಿದ್ದ ಎಂಬುದನ್ನು ಈ ಮೂಲಕ ಕಿಚ್ಚ ಸುದೀಪ್ ಸಾಬೀತು ಪಡಿಸಿ ತೋರಿಸಿದರು.

Leave a Comment

error: Content is protected !!