Kranti ಯೂಟ್ಯೂಬ್ ನಲ್ಲಿ ಲೈವ್ ಬಂದು ಕ್ರಾಂತಿ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ನೋಡಿ ಎಂದ ಡಿ ಬಾಸ್. ಶಾಕ್ ನಲ್ಲಿ ಅಭಿಮಾನಿಗಳು.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದ್ದಿದ್ದನ್ನು ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವ ಹೊಂದಿರುವವರು. ಇದೇ ಅವರಿಗೆ ಸಾಕಷ್ಟು ಬಾರಿ ಮುಳ್ಳಾಗಿ ಪರಿಣಮಿಸಿರುವುದು ಕೂಡ ಇತ್ತೀಚಿನ ದಿನಗಳಲ್ಲಿ ನಡೆದಿರುವಂತಹ ಘಟನೆಗಳನ್ನು ನೋಡಿದರೆ ಹಾಗೂ ಕೇಳಿದರೆ ನಿಮಗೆ ಗೊತ್ತಾಗಬಹುದು. ಹೇಗಿದ್ದರೂ ಕೂಡ ಅವರು ಪ್ರಪಂಚಕ್ಕೆ ಅಂಜಿ ಮುಂದೊಂದು ಹಿಂದೊಂದು ಮಾತನಾಡುವ ವ್ಯಕ್ತಿತ್ವ ಅವರದಲ್ಲ.

ಮಾಧ್ಯಮಗಳನ್ನು ಎದುರು ಹಾಕಿಕೊಂಡು ಕ್ರಾಂತಿ(Kranti) ಸಿನಿಮಾವನ್ನು ಇಡೀ ರಾಜ್ಯವೇ ಆಚರಿಸುವಂತೆ ಅಭಿಮಾನಿಗಳ ಮೂಲಕ ಪ್ರಚಾರ ಪಡೆದುಕೊಂಡ ಕನ್ನಡ ಚಿತ್ರರಂಗದ ಇತ್ತೀಚಿನ ವರ್ಷಗಳ ಏಕೈಕ ಸ್ಟಾರ್ ನಟ ಎಂದರೆ ತಪ್ಪಾಗಲಾರದು. ಎಲ್ಲಕ್ಕಿಂತ ಪ್ರಮುಖವಾಗಿ ಮಾಧ್ಯಮಗಳ ಪ್ರಚಾರ ಇಲ್ಲದೆ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ನಮ್ಮೆಲ್ಲರ ನೆಚ್ಚಿನ ಡಿ ಬಾಸ್(Dboss). ಇತ್ತೀಚಿಗಷ್ಟೇ ಇಡೀ ಕ್ರಾಂತಿ ಚಿತ್ರತಂಡ ಸಂತೋಷದಿಂದ ಸಂಭ್ರಮಾಚರಣೆಯನ್ನು ಮಾಡಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳನ್ನು ಕೂಡ ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದಾಗಿದೆ.

darshan thoogudeepa

ಇನ್ನು ನಾವು ಮಾತನಾಡಲು ಹೊರಟಿರುವುದು ಯೂಟ್ಯೂಬ್ ನಲ್ಲಿ ಓಡಾಡುತ್ತಿರುವ ಲೇಟೆಸ್ಟ್ ವಿಡಿಯೋ ದ ಬಗ್ಗೆ. ಅದರಲ್ಲಿ ದರ್ಶನ್ ತೂಗುದೀಪ್(Darshan Thoogudeepa) ಅವರು ಕ್ರಾಂತಿ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ನೋಡಿ ಹರಸಿ ಎಂಬುದಾಗಿ ಕೇಳಿಕೊಳ್ಳುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಎಲ್ಲರೂ ಕೂಡ ಇದೇನಪ್ಪಾ ಡಿ ಬಾಸ್ ಸ್ವತಹ ಅವರೇ ಕ್ರಾಂತಿ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ನೋಡಿ ಅಂತಿದಾರಲ್ಲ ಎನ್ನುವುದಾಗಿ ಆಶ್ಚರ್ಯ ಚಕಿತರಾಗಿದ್ದಾರೆ. ಆದರೆ ಸತ್ಯ ಬೇರೆನೇ ಇದೆ ನೀವು ಕೂಡ ಯಾಮಾರ್ಬೇಡಿ.

ಹೌದು ಗೆಳೆಯರೇ ಕ್ರಾಂತಿಯನ್ನು ಹೆಸರಿನಲ್ಲಿ ಕೆಲವು ಯುವ ಪ್ರತಿಭೆಗಳು ಕಿರು ಚಿತ್ರವನ್ನು ತಯಾರಿಸಿದ್ದು ಅದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ಆ ಕಿರು ಚಿತ್ರವನ್ನು ನೋಡಿ ಎಂಬುದಾಗಿ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಖಂಡಿತವಾಗಿ ನೀವು ಕೂಡ ಟೈಟಲ್ ನೋಡಿ ಆಶ್ಚರ್ಯ ಪಟ್ಟಿರಬಹುದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!