Megha Shetty: ಆಡಿನ ಮರಿಯ ಜೊತೆಗೆ ಮೇಘ ಶೆಟ್ಟಿ ಆಟ. ವೈರಲ್ ಆಯ್ತು ಫೋಟೋಗಳು.

Megha Shetty ಕನ್ನಡ ಕಿರುತೆರಿಯ ಸಾಕಷ್ಟು ಕಿರುತೆರೆಯ ನಟಿಯರಲ್ಲಿ ನಟಿ ಮೇಘ ಶೆಟ್ಟಿ(Megha Shetty) ಕೂಡ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆ ಕ್ಷೇತ್ರದಲ್ಲಿ ಎಲ್ಲರಿಗೂ ಪರಿಚಿತರಾದ ಮೇಘ ಶೆಟ್ಟಿ ಇಂದು ಎಲ್ಲರಿಗೂ ಕೂಡ ಇಷ್ಟವಾಗುವಂತಹ ನಟಿಯರ ಸ್ಥಾನದಲ್ಲಿದ್ದಾರೆ.

ಮೇಘ ಶೆಟ್ಟಿ ಅವರು ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ತ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ನಾಯಕನಟಿಯಾಗಿ ಸಿನಿಮಾದಲ್ಲಿ ಕೂಡ ಮಿಂಚಿದ್ದು ಇನ್ನೂ ಹಲವಾರು ಸಿನಿಮಾಗಳು ಅವರ ಕೈಯಲ್ಲಿವೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರು ಯಾರಿಗೂ ಕಡಿಮೆ ಇಲ್ಲದಂತೆ ಜನಪ್ರಿಯತೆಯನ್ನು ಹೊಂದಿದ್ದಾರೆ.

ಮಿಲಿಯನ್ಗಟ್ಟಲೆ ಹಿಂಬಾಲಕರನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಂದಿರುವ ಮೇಘ ಶೆಟ್ಟಿ ಆಗಾಗ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕೆಲವೊಂದು ಫೋಟೋ ಹಾಗು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಹಂಚಿಕೊಂಡಿರುವ ಅವರ ಫೋಟೋ ನೆಟ್ಟಿಗರ ಚರ್ಚೆಗೆ ಒಳಗಾಗಿದ್ದು ಅದರ ಕುರಿತಂತೆ ತಿಳಿಯೋಣ ಬನ್ನಿ.

ಹೌದು ಮಿತ್ರರೇ ಮೇಘ ಶೆಟ್ಟಿ(Megha Shetty) ಅವರು ತಮ್ಮ ಹಳ್ಳಿಯಲ್ಲಿ ಪ್ರಕೃತಿಯ ಮಡಿಲಿನಲ್ಲಿ ಇರುವಂತಹ ಫೋಟೋವನ್ನು ಹಂಚಿಕೊಂಡಿದ್ದು ಆ ಸಂದರ್ಭದಲ್ಲಿ ಅವರು ಆಡಿನ ಮರಿಯ ಜೊತೆಗೆ ಆಡಿರುವಂತಹ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದು ಈ ಫೋಟೋವನ್ನು ನೋಡಿರುವ ನೆಟ್ಟಿಗರು ಕ್ಯೂಟ್ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!