Megha Shetty: ಡಿಬಾಸ್ ಪತ್ನಿ ವಾರ್ನಿಂಗ್ ಗೆ ಮೇಘಾ ಶೆಟ್ಟಿ ಪ್ರತಿಕ್ರಿಯೆ ಏನು ಗೊತ್ತಾ? ಆಶ್ಚರ್ಯ ಪಡ್ತೀರಾ.

Darshan Thoogudeepa ಇತ್ತೀಚಿನ ದಿನಗಳಲ್ಲಿ ಒಂದು ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹೆಸರು ಒಂದಲ್ಲ ಒಂದು ರೀತಿಯಲ್ಲಿ ಬಂದು ಹೋಗುತ್ತದೆ. ಇನ್ನು ಈ ವಿಚಾರದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನೇರ ಹಾಗೂ ಪ್ರತ್ಯಕ್ಷವಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಹೌದು ನಾವು ಮಾತನಾಡುತ್ತಿರುವುದು ಸದ್ಯಕ್ಕೆ ಓಡಾಡ್ತಿರೋ ಮೇಘ ಶೆಟ್ಟಿ(Megha Shetty) ವೈರಲ್ ವಿಡಿಯೋ ದ ಬಗ್ಗೆ.

ಫೆಬ್ರವರಿ 16ರಂದು ಅಭಿಮಾನಿಗಳ ಜೊತೆಗೆ ಬರ್ತಡೆಯನ್ನು ಆಚರಿಸಿಕೊಂಡ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮೇಘ ಶೆಟ್ಟಿ ಸೋನಾಲಿಯ ಮಂಟೈರೋ ಸೇರಿದಂತೆ ಹಲವಾರು ನಟ ನಟಿಯರ ಜೊತೆಗೆ ಬರ್ತಡೆಯನ್ನು ಆಚರಿಸಿಕೊಂಡಿದ್ದರು. ಇದೊಂದು ಖಾಸಗಿ ಪಾರ್ಟಿ ಆಗಿತ್ತು ಹೀಗಾಗಿ ಇದರಲ್ಲಿ ಕೇವಲ ಆಪ್ತರಷ್ಟೇ ಇದ್ದರು. ಆದರೆ ನಟಿ ಮೇಘ ಶೆಟ್ಟಿ ಈ ಬರ್ತಡೇ ಸೆಲೆಬ್ರೇಶನ್ ವಿಡಿಯೋ ಪೂರ್ತಿಯಾಗಿ ಚಿತ್ರಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇಲ್ಲಿಂದಲೇ ಸಮಸ್ಯೆ ಪ್ರಾರಂಭವಾಗುತ್ತದೆ.

Vijayalakshmi darshan vs megha shetty

ಹೌದು ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪತ್ನಿ ಆಗಿರುವ ವಿಜಯಲಕ್ಷ್ಮಿ ದರ್ಶನ್(Vijayalakshmi Darshan) ಅವರು ಈ ಕೆಲಸವನ್ನು ಖಂಡಿಸಿದ್ದು ಮೇಘ ಶೆಟ್ಟಿ ಅವರಿಗೆ ನೇರ ನೇರ ವಾರ್ನಿಂಗ್ ನೀಡಿ ದೊಡ್ಡ ಮಟ್ಟದ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಮೇಘ ಶೆಟ್ಟಿ ಅವರಿಂದ ಯಾವುದಾದರು ಪ್ರತಿಕ್ರಿಯೆ ಬರುತ್ತದೆ ಎಂಬುದಾಗಿ ಅಭಿಮಾನಿಗಳು ಕಾಯ್ದಿದ್ದರು. ಆದರೆ ಮೇಘ ಶೆಟ್ಟಿ ಅವರ ಪ್ರತಿಕ್ರಿಯೆ ಸಾಕಷ್ಟು ವಿಚಿತ್ರವಾಗಿತ್ತು.

ಹೌದು ಗೆಳೆಯರೇ, ಕೂಡಲೇ ಮೇಘ ಶೆಟ್ಟಿ ಅವರು ತಾವು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಹಾಗೂ ಫೋಟೋಗಳನ್ನು ಡಿಲೀಟ್ ಮಾಡಿದ್ದು ವಿಜಯಲಕ್ಷ್ಮಿ ದರ್ಶನ್ ಅವರ ವಾರ್ನಿಂಗ್ ನಿಂದ ಮೇಘ ಶೆಟ್ಟಿ ಅವರು ಬೆಚ್ಚಿಬಿದ್ದಿದ್ದಾರೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಇದೊಂದು ಕನ್ನಡ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಯ ಖಾಸಗಿ ಜೀವನದ ವಿಚಾರವಾಗಿದ್ದು ಯಾವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ತಿರುವುಗಳನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!