Meghana Raj ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಮಗನಿಗಾಗಿ ಚಿತ್ರರಂಗದಲ್ಲಿ ಕಷ್ಟಪಡುತ್ತಿರುವ ಮೇಘನಾ ರಾಜ್ ಅವರ ವಯಸ್ಸೆಷ್ಟು ಗೊತ್ತಾ?

Meghana Raj ಮೇಘನಾ ರಾಜ್ ಅವರು ಮೊದಲಿನಿಂದಲೂ ಕೂಡ ಚಿತ್ರರಂಗಕ್ಕೆ ಸಂಬಂಧಿಸಿದ ಕುಟುಂಬದ ಹಿನ್ನೆಲೆಯಿಂದ ಬಂದವರು. ಹೀಗಾಗಿ ಚಿಕ್ಕ ವಯಸ್ಸಿನಿಂದಲೂ ಕೂಡ ಅವರಿಗೆ ಚಿತ್ರರಂಗ ಹೊಸದಾಗಿರಲಿಲ್ಲ. ಇನ್ನು ಅವರು ನಾಯಕನಟಿಯಾಗಿ ಮೊದಲು ಕಾಣಿಸಿಕೊಂಡಿದ್ದು ಮಲಯಾಳಂ ಚಿತ್ರರಂಗದಲ್ಲಿ. ಮಲಯಾಳಂ ಚಿತ್ರರಂಗದಲ್ಲಿ ಇಂದಿನವರೆಗೂ ಕೂಡ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ ಹಾಗೂ ಅಲ್ಲಿ ಸೆಲೆಬ್ರಿಟಿಗಳಲ್ಲಿ ಕೂಡ ಹಲವಾರು ಜನರು ಸ್ನೇಹಿತರಿದ್ದಾರೆ.

ಅಲ್ಲಿಂದ ಕನ್ನಡಕ್ಕೆ ಹಾರಿದ ಮೇಘನಾ ರಾಜ್ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ನೀಡಿದ್ದು ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ನಟಿಸಿರುವ ರಾಜಹುಲಿ ಸಿನಿಮಾ. ಅದಾದ ನಂತರ ಮತ್ತೆ ಮೇಘನಾ ರಾಜ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ನಟ ಚಿರು ಸರ್ಜಾ ಅವರನ್ನು ಪ್ರೀತಿಸಿ ಎರಡು ಧರ್ಮಗಳ ಪ್ರಕಾರ ಸಂಪ್ರದಾಯಬದ್ಧವಾಗಿ ಮದುವೆಯಾಗುತ್ತಾರೆ. ಆದರೆ ಆ ಮದುವೆ ಸಂತೋಷ ಎನ್ನುವುದು ಹೆಚ್ಚು ವರ್ಷಗಳ ಕಾಲ ಉಳಿಯುವುದಿಲ್ಲ.

Meghana Raj

ಹೌದು ಮಿತ್ರರೇ, ಮದುವೆಯಾದ ಎರಡು ವರ್ಷದ ಒಳಗೆ ಚಿರು ಸರ್ಜಾ ಅವರನ್ನು ಕಳೆದುಕೊಂಡು ಮೇಘನಾ ರಾಜ್ ಒಬ್ಬಂಟಿಯಾಗಿ ಬಿಡುತ್ತಾರೆ. ಎಲ್ಲವನ್ನು ಕಳೆದುಕೊಂಡು ಜೀವನದಲ್ಲಿ ಯಾವುದೇ ಉತ್ಸಾಹ ಇಲ್ಲದೆ ಬದುಕುತ್ತಿದ್ದ ಮೇಘನಾ ರಾಜ್ ಅವರ ಬದುಕಿಗೆ ಬೆಳಕಾಗಿ ಬಂದಿದ್ದು ಅವರ ಮಗ ಜೂನಿಯರ್ ಚಿರು ಸರ್ಜಾ ರಾಯನ್. ಇಂದು ನಟಿಯಾಗಿ ರಿಯಾಲಿಟಿ ಶೋ ಕಾರ್ಯಕ್ರಮಗಳ ತೀರ್ಪುಗಾರರಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೇಘನ ರಾಜ್ ಅವರು ತಮ್ಮ ದುಡಿಮೆಯನ್ನು ಪ್ರಮುಖವಾಗಿ ತಮ್ಮ ಮಗನ ಉತ್ತಮ ಜೀವನಕ್ಕಾಗಿಯೇ ಮಾಡುತ್ತಿದ್ದಾರೆ ಎನ್ನಬಹುದು.

ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಮೇಘನಾ ರಾಜ್ ಅವರ ವಯಸ್ಸು ಎಷ್ಟು ಎನ್ನುವುದು ಹಲವರ ಗೊಂದಲ. ಸಾಕಷ್ಟು ಜನ ಅವರ ವಯಸ್ಸು ಹೆಚ್ಚಿನ ಬಹುದು ಎಂಬುದಾಗಿ ಯೋಚಿಸುತ್ತಾರೆ ಆದರೆ ಅವರ ವಯಸ್ಸು ಕೇವಲ 32 ವರ್ಷ ವಯಸ್ಸಾಗಿದೆ. ಚಿತ್ರರಂಗದಲ್ಲಿ ಇನ್ನಷ್ಟು ವರ್ಷಗಳ ಕಾಲ ಮೇಘನಾ ರಾಜ್ ಅವರು ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!