Naresh Pavithra: ನರೇಶ್ ಹಾಗೂ ಪವಿತ್ರ ಲೋಕೇಶ್ ಇವರಿಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು ಗೊತ್ತಾ?

Naresh Pavithra ನಟ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್(Pavithra Lokesh) ಇಬ್ಬರು ಕೂಡ ಈಗಾಗಲೇ ಮದುವೆಯಾಗಿದ್ದು ಅವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಮತ್ತೆ ಮದುವೆ ಸಿನಿಮಾ ಕೂಡ ದೇಶಾದ್ಯಂತ ಸಿನಿಮಾ ಥಿಯೇಟರ್ ಗಳಲ್ಲಿ ಅದ್ದೂರಿಯಾಗಿ ತೆರೆ ಕಂಡಿದೆ.

ಇನ್ನು ಈ ಸಿನಿಮಾದ ಪ್ರಸಾರದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಮೊದಲು ಪ್ರಪೋಸ್ ಮಾಡಿದ್ದು ಯಾರು ಎಂಬ ಬಗ್ಗೆ ಸ್ವತಹ ನಟ ನರೇಶ್(Naresh) ಅವರೇ ಬಹಿರಂಗವಾಗಿ ಹೇಳಿದ್ದು ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯುವ ಪ್ರಯತ್ನವನ್ನು ಮಾಡೋಣ ಬನ್ನಿ.

ಹೌದು ಮೊದಲಿಗೆ ಮತ್ತೆ ಮದುವೆ ಸಿನಿಮಾದ ಚಿತ್ರೀಕರಣದ ಸೆಟ್ನಲ್ಲಿ ಪವಿತ್ರ ಲೋಕೇಶ್ ರವರ ಪರಿಚಯವಾಗಿ ಅಲ್ಲಿಂದಲೇ ನರೇಶ್ ರವರು ಮೊದಲ ಬಾರಿಗೆ ಪವಿತ್ರ ಲೋಕೇಶ್ ರವರಿಗೆ ಪ್ರಪೋಸ್ ಮಾಡಿ ಡಿನ್ನರ್ ಗೆ ಕರೆದುಕೊಂಡು ಹೋಗುತ್ತಾರೆ. ಡಿನ್ನರ್ ನಲ್ಲಿಯೇ ಈ ವಿಚಾರವನ್ನು ಹೇಳುತ್ತಾರೆ ಆದರೆ ಅವರು ಅಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ.

ನಂತರ ಕಾರಿನಿಂದ ಮನೆಗೆ ಬಂದಾಗ ಕಾರಿನಿಂದ ಇಳಿದು ಹೋಗುವಾಗ ಪವಿತ್ರ ಲೋಕೇಶ್ ರವರು ಸಮ್ಮತಿಯನ್ನು ಸೂಚಿಸುತ್ತಾರೆ ಎಂಬುದಾಗಿ ನರೇಶ್ ಹೇಳುತ್ತಾರೆ. ಕುಟುಂಬಸ್ಥರೆಲ್ಲರೂ ಕೂಡ ನಮ್ಮಿಬ್ಬರ ಜೋಡಿಯನ್ನು ಇಷ್ಟಪಟ್ಟಿದ್ದು ಪವಿತ್ರ ಲೋಕೇಶ್ ಅವರನ್ನು ಕೂಡ ಮಹೇಶ್ ಬಾಬು(Mahesh Babu) ಅವರಿಂದ ಹಿಡಿದು ಕುಟುಂಬದ ಎಲ್ಲ ಸದಸ್ಯರು ಒಪ್ಪಿದ್ದಾರೆ ಎಂಬುದಾಗಿ ನರೇಶ್ ಹೇಳಿದ್ದಾರೆ. ಸದ್ಯಕ್ಕೆ ಮತ್ತೆ ಮದುವೆ ಸಿನಿಮಾ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ ಎಂಬುದಾಗಿ ಕೇಳಿ ಬರುತ್ತಿದೆ.

Leave A Reply

Your email address will not be published.

error: Content is protected !!