ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಜವಳಿ ಮಕ್ಕಳಿಗೆ ತಾಯಿಯಾದ ನಯನತಾರ. ಇದರ ಹಿಂದಿನ ಅಸಲಿ ಸತ್ಯ ಬೇರೆನೇ ಇದೆ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಟಿ ನಯನತಾರಾ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಹಲವಾರು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದ ನಂತರ ಇಬ್ಬರೂ ಕೂಡ ಅದ್ದೂರಿಯಾಗಿ ಭಾರತೀಯ ಚಿತ್ರರಂಗದ ಹಲವಾರು ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು.

ಮದುವೆಯಾದ ನಂತರ ದೇವಸ್ಥಾನಗಳಿಗೆ ಹಾಗೂ ವಿದೇಶಕ್ಕೆ ಹನಿಮೂನ್ಗಾಗಿ ಹೋಗಿದ್ದ ಸಂದರ್ಭದಲ್ಲಿ ಕೂಡ ಇಬ್ಬರು ಫೋಟೋ ಹಾಗೂ ವಿಡಿಯೋಗಳ ಮುಖಾಂತರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನಲ್ ಸುದ್ದಿ ಆಗಿದ್ದರು. ಇದಾದ ನಂತರ ನಟಿ ನಯನತಾರಾ ಅವರು ಶಾರುಖ್ ಖಾನ್ ರವರ ಜೊತೆಗಿನ ಜವಾನ್ ಸಿನಿಮಾದ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದರು.

ಇನ್ನು ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ನಟಿ ನಯನತಾರ ಹಾಗೂ ವಿಘ್ನೇಶ್ ಶಿವನ್ ದಂಪತಿಗಳು ಈಗ ತಮ್ಮ ಅಭಿಮಾನಿಗಳಿಗೆ ಹಾಗೂ ಜನರಿಗೆ ಸರ್ಪ್ರೈಸ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ದಂಪತಿಗಳಿಬ್ಬರೂ ಕೂಡ ಅವಳಿ ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದನ್ನು ಸ್ವತಹ ವಿಘ್ನೇಶ್ ಶಿವನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಧಿಕೃತವಾಗಿ ತಿಳಿಸುವ ಮೂಲಕ ಸುದ್ದಿ ನಿಜ ಎಂಬುದಾಗಿ ಖಾತ್ರಿಪಡಿಸಿದ್ದಾರೆ.

ನಯನತಾರ ಎಲ್ಲೂ ಕೂಡ ಗರ್ಭಿಣಿ ಆದಂತೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಎಲ್ಲರೂ ಕೂಡ ಇದು ಬಾಡಿಗೆ ತಾಯ್ತನದ ಮೂಲಕ ಪಡೆದುಕೊಂಡಿರುವ ಮಕ್ಕಳು ಎಂಬುದಾಗಿ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಅದೇನೇ ಇರಲಿ ಮಕ್ಕಳನ್ನು ಪಡೆದು ತಂದೆ-ತಾಯಿ ಆಗುವುದು ಪ್ರತಿಯೊಬ್ಬ ದಂಪತಿಗಳಿಗೂ ಕೂಡ ಅತ್ಯಂತ ಸಂತೋಷದ ಕ್ಷಣವಾಗಿರುತ್ತದೆ. ಹೀಗಾಗಿ ಇಬ್ಬರು ದಂಪತಿಗಳಿಗೆ ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಅಭಿನಂದನೆಗಳನ್ನು ತಿಳಿಸುವ ಕಾಮೆಂಟ್ಗಳನ್ನು ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!