ಕಿರುತೆರೆಯ ಸ್ಟಾರ್ ಕಲಾವಿದ ರಕ್ಷ್ ಖರೀದಿಸಿದ ದುಬಾರಿ ಕಾರಿನ ಬೆಲೆ ಎಷ್ಟು ಗೊತ್ತಾ?

ಸಾಮಾನ್ಯವಾಗಿ ದುಬಾರಿಕಾರನ್ನು ಖರೀದಿಸುವ ವಿಚಾರದಲ್ಲಿ ನಾವು ಮೊದಲಿಗೆ ಗಮನಿಸುವುದು ಚಿತ್ರರಂಗದ ಸ್ಟಾರ್ ಕಲಾವಿದರನ್ನು. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ದುಬಾರಿ ಕಾರುಗಳ ಒಡೆಯ ಎಂಬುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಾವು ಕರೆಯುತ್ತೇವೆ. ಆದರೆ ಇಂದು ನಾವು ದುಬಾರಿ ಕಾರಿನ ವಿಚಾರಕ್ಕಾಗಿ ಮಾತನಾಡುತ್ತಿರುವುದು ಕಿರುತೆರೆಯ ಕಲಾವಿದ ಆಗಿರುವ ರಕ್ಷ್ ಅವರ ಬಗ್ಗೆ.

ಪುಟ್ಟಗೌರಿ ಮದುವೆಯ ಮಹೇಶ ಪಾತ್ರದಲ್ಲಿ ಎಲ್ಲಾ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತರಾದ ನಟ ರಕ್ಷ್ ನಿಜಕ್ಕೂ ಕೂಡ ಸದ್ಯದ ಮಟ್ಟಿಗೆ ಕಿರುತೆರೆಯ ಸ್ಟಾರ್ ಕಲಾವಿದರಲ್ಲಿ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗಲಾರದು. ಪುಟ್ಟಗೌರಿ ಮದುವೆ ಎನ್ನುವುದು ಅವರ ಕಿರುತೆರೆಯ ಜೀವನದಲ್ಲಿ ಒಂದು ದೊಡ್ಡ ಮಟ್ಟದ ಜನ ಮನ್ನಣೆಯನ್ನು ನೀಡಿದ ಧಾರವಾಹಿ ಎಂದರೆ ತಪ್ಪಾಗಲಾರದು. ಈ ಧಾರವಾಹಿಯ ಪಾತ್ರ ಎನ್ನುವುದು ಅವರಿಗೆ ಕಿರುತೆರೆಯ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡಿದೆ.

ಇನ್ನು ಸದ್ಯಕ್ಕೆ ಇವರು ಅತ್ಯಂತ ಯಶಸ್ವಿ ಧಾರವಾಹಿ ಆಗಿರುವ ಗಟ್ಟಿಮೇಳ ಧಾರವಾಹಿಯಲ್ಲಿ ವೇದಾಂತ್ ಪಾತ್ರದ ಮೂಲಕವೂ ಕೂಡ ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಈ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ಧಾರವಾಹಿ ಕರಿಯರ್ ಬಗ್ಗೆ ಅಲ್ಲ. ಬದಲಾಗಿ ಅವರು ಹೊಸದಾಗಿ ಖರೀದಿಸಿರುವ ಐಷಾರಾಮಿ ಕಾರಿನ ಬೆಲೆಯ ಬಗ್ಗೆ.

ಹೌದು ಮಿತ್ರರೇ ನಟ ರಕ್ಷ್ ಅವರು ಇತ್ತೀಚಿಗಷ್ಟೇ ದುಬಾರಿ ಬೆಲೆಯ ವೋಲ್ವೋ ಎಕ್ಸ್ ಸಿ 90 ಅನ್ನು ಖರೀದಿಸಿದ್ದಾರೆ. ಇನ್ನು ಇದರ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆಗಿದೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಕನ್ನಡ ಕಿರುತೆರೆಯ ಲೋಕವೂ ಕೂಡ ದಿನೇದಿನೇ ಬೆಳವಣಿಗೆ ಹೊಂದುತ್ತಿದೆ ಎನ್ನುವುದಕ್ಕೆ ಇವರು ಖರೀದಿಸಿರುವ ದುಬಾರಿ ಬೆಲೆಯ ಕಾರಿನ ಬೆಲೆಯೇ ಒಂದು ಜೀವಂತ ಸಾಕ್ಷಿ ಎಂದರೆ ತಪ್ಪಾಗಲಾರದು. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಹಾಗೂ ಕಾಮೆಂಟ್ನಲ್ಲಿ ರಕ್ಷ್ ಅವರಿಗೆ ಹೊಸ ಕಾರಿನ ಅಭಿನಂದನೆಗಳನ್ನು ಕೂಡ ತಿಳಿಸಬಹುದಾಗಿದೆ.

Leave a Comment

error: Content is protected !!