Nayanthara: ಸಾಕಷ್ಟು ವರ್ಷಗಳಿಂದ ಮುಚ್ಚಿಟ್ಟುಕೊಂಡಿದ್ದ ಕರಾಳ ಸತ್ಯವನ್ನು ಬಹಿರಂಗಪಡಿಸಿದ ಲೇಡಿ ಸೂಪರ್ ಸ್ಟಾರ್ ನಯನತಾರಾ.

Nayanthara ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಯಾರು ಎಂಬುದಾಗಿ ಕೇಳಿದಾಗ ಪ್ರತಿಯೊಂದು ಭಾಷೆಯ ಪ್ರತಿಯೊಬ್ಬ ಪ್ರೇಕ್ಷಕನು ಹೇಳುವ ಒಂದೇ ಒಂದು ಉತ್ತರ ಎಂದರೆ ಅದು ನಯನತಾರ ಎನ್ನುವ ಹೆಸರು. ನಯನತಾರಾ(Nayanthara) ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಈಗಾಗಲೇ ತೆಲುಗು ತಮಿಳು ಚಿತ್ರರಂಗಗಳಲ್ಲಿ ಟಾಪ್ ನಾಯಕ ನಟಿಯಾಗಿರುವ ನಯನತಾರಾ ಮಲಯಾಳಂನಲ್ಲಿ ಕೂಡ ನಟಿಸಿದ್ದಾರೆ.

ಕನ್ನಡದಲ್ಲಿ ಕೂಡ ಇದಾಗಲೇ ರಿಯಲ್ ಸ್ಟಾರ್ ಉಪೇಂದ್ರ(Upendra) ನಟನೆಯ ಸೂಪರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾನು ಅತಿ ಶೀಘ್ರದಲ್ಲಿ ಶಾರುಖ್ ಖಾನ್(Shah Rukh Khan) ನಾಯಕ ನಟನಾಗಿ ನಟಿಸಿರುವ ಜವಾನ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಬಾಲಿವುಡ್ ಚಿತ್ರರಂಗವನ್ನು ಕೂಡ ಆಳಲು ನಯನತಾರ ಸಿದ್ದರಾಗಿ ನಿಂತಿದ್ದಾರೆ. ನಯನತಾರಾ ಅವರ ನಟನಾ ಪ್ರಬುದ್ಧತೆ ನಿಜಕ್ಕೂ ಕೂಡ ಬೇರೆ ನಟಿಯರಿಗಿಂತ ಸಾಕಷ್ಟು ವಿಭಿನ್ನವಾಗಿದೆ.

Nayanthara

ಸಂಭಾವನ ವಿಚಾರದಲ್ಲಿ ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವರನ್ನು ಸರಿಗಟ್ಟುವಂತಹ ಮತ್ತೊಬ್ಬ ನಟಿ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರ. ಸಾಕಷ್ಟು ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದಂತಹ ವಿಘ್ನೇಶ್ ಶಿವನ್(Vignesh Shivan) ಅವರನ್ನು ಇತ್ತೀಚಿಗಷ್ಟೇ ಮದುವೆಯಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಾಯಿ ಕೂಡ ಆಗಿದ್ದಾರೆ.

ಸಾಕಷ್ಟು ಹದಿನೈದು ವರ್ಷಗಳಿಗಿಂತಲೂ ಅಧಿಕಕಾಲ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ನಯನತಾರ ತಮ್ಮ ಸಿನಿಮಾ ಜೀವನದ ಕರಾಳ ಸತ್ಯವೊಂದನ್ನು ಹೊರಹಾಕಿದ್ದಾರೆ. ಚಿತ್ರರಂಗದ ಆರಂಭದಲ್ಲಿ ಅವರಿಗೂ ಕೂಡ ಕೆಲವು ನಿರ್ಮಾಪಕ ಹಾಗೂ ನಿರ್ದೇಶಕರು ಕಾಸ್ಟಿಂ’ಗ್ ಕೌಚ್ ಅಡ್ಜಸ್ಟ್ಮೆಂಟ್ ವಿಚಾರದಲ್ಲಿ ಆಹ್ವಾನ ನೀಡಿದ್ದರಂತೆ. ಆದರೆ ಆ ಸಂದರ್ಭದಲ್ಲಿಯೇ ನಯನತಾರ ಖಡಾ ಖಂಡಿತವಾಗಿ ನಾನು ಚಿತ್ರರಂಗದಲ್ಲಿ ನನ್ನ ಪ್ರತಿಭೆಯ ಮೂಲಕ ಯಶಸ್ಸನ್ನು ಸಾಧಿಸಲು ಬಂದಿದ್ದೇನೆ ಎಂಬುದಾಗಿ ನೇರವಾಗಿ ಹೇಳಿದ್ದರಂತೆ. ಇಂತಹ ಸ್ಟಾರ್ ನಟಿಯು ಕೂಡ ಆರಂಭದಲ್ಲಿ ಇಂತಹ ಸನ್ನಿವೇಶಕ್ಕೆ ಒಳಗಾಗಬೇಕಾಗಿತ್ತು ಎನ್ನುವುದು ನಿಜಕ್ಕೂ ವಿಪರ್ಯಾಸ.

Leave a Comment

error: Content is protected !!