Sapthami Gowda: ಕಾಂತಾರದಲ್ಲಿ ಹಳ್ಳಿ ಹುಡುಗಿಯ ಹಾಗಿದ್ದ ಸಪ್ತಮಿ ಗೌಡ ನಿಜ ಜೀವನದಲ್ಲಿ ಎಷ್ಟು ಗ್ಲಾಮರಸ್ ಆಗಿದ್ದಾರೆ ನೀವೆ ನೋಡಿ.

Sapthami Gowda ಕಾಂತಾರ(Kantara) ಸಿನಿಮಾ ಬಂದ ನಂತರ ಕನ್ನಡ ಚಿತ್ರರಂಗವನ್ನು ಬೇರೆ ಸಿನಿಮಾರಂಗಗಳು ನೋಡುವ ರೀತಿಯೇ ಬದಲಾಗಿಬಿಟ್ಟಿದೆ. ಕಾಂತಾರ ಸಿನಿಮಾದಲ್ಲಿ ಬಂದಿರುವಂತಹ ಎಲ್ಲಾ ಪಾತ್ರಗಳು ಕೂಡ ಚಿರಸ್ಮರಣೀಯವಾಗಿರುವ ರೀತಿಯಲ್ಲಿ ಮೂಡಿಬಂದಿದೆ. ಪ್ರತಿಯೊಬ್ಬರೂ ಕೂಡ ಸಿನಿಮಾದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ‌. 19 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಂತಹ ಈ ಸಿನಿಮಾ 450 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ಇನ್ನು ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ(Rishab Shetty) ಅವರ ಶಿವ ಪಾತ್ರದಷ್ಟೇ ಸಪ್ತಮಿ ಗೌಡ(Sapthami Gowda) ಅವರ ಲೀಲಾ ಪಾತ್ರವೂ ಕೂಡ ಪ್ರಾಮುಖ್ಯತೆಯನ್ನು ಮೆರೆದಿದೆ. ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದರು ಕಾಂತಾರ ಸಿನಿಮಾದಲ್ಲಿ ಇರುವಂತಹ ಅವರ ಪಾತ್ರ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲ ಬಾರಿ ಕನ್ನಡ ಪ್ರೇಕ್ಷಕರು ಸೇರಿದಂತೆ ಪರಭಾಷಿಗರು ಕೂಡ ಅವರನ್ನು ಗುರುತು ಹಿಡಿದಿದ್ದಾರೆ.

Sapthami Gowda Kantara actress

ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ(Sapthami Gowda) ಅವರ ಲೀಲಾ ಪಾತ್ರವನ್ನು ನೋಡಿದರೆ ನೀವು ಅದರಲ್ಲಿ ಅವರು ಹಳ್ಳಿಯ ಹುಡುಗಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ. ಇದನ್ನು ನೋಡಿ ನಿಜ ಜೀವನದಲ್ಲಿ ಕೂಡ ಅದೇ ರೀತಿ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದಾರೆ ಆದರೆ ಅದು ಸಂಪೂರ್ಣವಾಗಿ ನಿಜವಲ್ಲ. ಹೌದು ಗೆಳೆಯರೇ ನೀವು ಇತ್ತೀಚಿಗಷ್ಟೇ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೋವನ್ನು ನೋಡಿದರೆ ತಿಳಿದು ಬರುತ್ತದೆ.

ಮಾಡರ್ನ್ ಹಾಗೂ ಟ್ರೆಡಿಶನಲ್ ಕಾಂಬಿನೇಷನ್ ನಲ್ಲಿ ಇರುವಂತಹ ಬಟ್ಟೆಯಲ್ಲಿ ಸಪ್ತಮಿ ಗೌಡ ಫೋಟೋ ಶೂಟ್ ಮಾಡಿಸಿಕೊಂಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು ಎಲ್ಲರಿಂದಲೂ ಮೆಚ್ಚುಗೆ ಒಳಗಾಗಿದೆ. ಕಾಂತಾರ ಸಿನಿಮಾಗು ಮುಂಚೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದರು ಆದರೆ ಅದು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಕಾಂತಾರ ಸಿನಿಮಾ ನಟಿಯಾಗಿ ಸಪ್ತಮಿ ಗೌಡ ಅವರಿಗೆ ಒಂದು ಒಳ್ಳೆ ಅವಕಾಶವನ್ನು ನೀಡಿದೆ ಎಂದರು ತಪ್ಪಾಗಲಾರದು.

Leave a Comment

error: Content is protected !!