Niveditha Gowda: ನಿವೇದಿತಾ ಗೌಡ ಸವಿದಿರುವ 24 ಕ್ಯಾರೆಟ್ ಬಂಗಾರದ ಐಸ್ ಕ್ರೀಮ್ ಬೆಲೆ ಎಷ್ಟು ಗೊತ್ತಾ?

Niveditha Gowda ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಮಟ್ಟದ ರಿಯಾಲಿಟಿ ಶೋ ಕಾರ್ಯಕ್ರಮ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿರೂಪಕರಾಗಿ ಕಾಣಿಸಿಕೊಂಡಿರುವಂತಹ ಬಿಗ್ ಬಾಸ್(Biggboss) ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರಿಗೂ ಪರಿಚಿತರಾಗಿರುವ ನಿವೇದಿತ ಗೌಡ(Niveditha Gowda) ಅವರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕನಾಗಿರುವ ಚಂದನ್ ಶೆಟ್ಟಿ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ನಿಮಗೆಲ್ಲ ತಿಳಿದಿದೆ.

ಚಂದನ್ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ ಮದುವೆಯಾಗಿ ಈಗಾಗಲೇ ಮೂರು ವರ್ಷಗಳೆ ಕಳೆದಿವೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರ ದೊಡ್ಡದಿದ್ದರೂ ಕೂಡ ಇವರಿಬ್ಬರ ನಡುವಿನ ಪ್ರೀತಿಗೆ ವಯಸ್ಸಿನ ಅಂತರ ಎನ್ನುವುದು ಅಡ್ಡಿ ಬಂದಿಲ್ಲ ಎನ್ನುವುದನ್ನು ಅವರ ಸುಂದರ ಸಂಸಾರವನ್ನು ನೋಡಿದರೆ ಹೇಳಬಹುದಾಗಿದೆ. ಚಂದನ್ ಶೆಟ್ಟಿ ಅವರ ಹಲವಾರು ಮ್ಯೂಸಿಕ್ ಆಲ್ಬಮ್ಗಳಲ್ಲಿ(Music Album) ಕೂಡ ನಿವೇದಿತಾ ಗೌಡ ಕಾಣಿಸಿಕೊಂಡಿದ್ದಾರೆ.

ಇನ್ನು ನಿವೇದಿತ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ಗಟ್ಟಲೆ ಹಿಂಬಾಲಕರನ್ನು ಹೊಂದಿದ್ದು ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇನ್ನು ಐಸ್ ಕ್ರೀಮ್ ತಿನ್ನೋದು ಅಂದ್ರೆ ನಿವೇದಿತ ಗೌಡ ಅಂದ್ರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ವಿಶೇಷ ಸ್ಥಳಕ್ಕೆ ಹೋಗಿ ಐಸ್ ಕ್ರೀಮ್ ತಿಂದಿದ್ದು ಇದು 24 ಕ್ಯಾರೆಟ್(24 Carrot Gold Ice cream) ಚಿನ್ನದ ಲೇಪನವನ್ನು ಹೊಂದಿದೆ ಎಂಬುದಾಗಿ ತಿಳಿದುಬಂದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಂಸ್ಥೆಯ ಐಸ್ ಕ್ರೀಮ್ ಶಾಪ್ಗಳು ಇರೋದೇ ಭಾರತದಲ್ಲಿ ಕೆಲವೇ ಕೆಲವು ಪ್ರದೇಶಗಳಲ್ಲಿ ಅವುಗಳಲ್ಲಿ ಬೆಂಗಳೂರಿನಲ್ಲಿ ಕೂಡ ಒಂದು ಶಾಪ್ ಇದೆ.

ಎಂಟು ಫ್ಲೇವರ್ ಗಳ ಜೊತೆಗೆ ದ್ರಾಕ್ಷಿ ಗೋಡಂಬಿ ಬಾದಾಮಿ ಜೊತೆಗೆ 24 ಕ್ಯಾರೆಟ್ ಗೋಲ್ಡ್ ಲೇಪನವನ್ನು ಹೊಂದಿರುವ ಈ ಐಸ್ ಕ್ರೀಮ್ ಮೇಲೆ 1650 ರೂಪಾಯಿ ಎಂಬುದಾಗಿ ತಿಳಿದು ಬಂದಿದೆ. ಇದರ ಬಗ್ಗೆ ನಿವೇದಿತಾ ಗೌಡ(Niveditha Gowda) ಯಾವುದೇ ಅಧಿಕೃತವಾಗಿ ಬೆಲೆಯನ್ನು ಹೇಳಿಲ್ಲ ಆದರೆ ಕಾಮೆಂಟ್ ನಲ್ಲಿ ಇದರ ಬೆಲೆಯನ್ನು ನೆಟ್ಟಿಗರೆ ತಿಳಿಸಿದ್ದಾರೆ. ಇಷ್ಟೊಂದು ದುಬಾರಿ ಬೇರೆ ಐಸ್ ಕ್ರೀಮ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!