Niveditha Gowda: ನಿವೇದಿತಾ ಗೌಡ ಅವರಿಗೆ ಸೀರಿಯಸ್ ಆಗಿ ವಾರ್ನಿಂಗ್ ನೀಡಿದ ವೈದ್ಯರು! ಕಾರಣ ಗೊತ್ತಾದ್ರೆ ನೀವು ಕೂಡ ಶಾ’ ಕ್ ಆಗ್ತೀರಾ!

Niveditha Gowda ನಿವೇದಿತಾ ಗೌಡ ಟಿಕ್ ಟಾಕ್(Tik Tok) ಮಾಡುವ ಮೂಲಕ ಮೊದಲಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಅದಾದ ನಂತರ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್(Biggboss) ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಮುನ್ನೆಲೆಗೆ ಬರುತ್ತಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗುತ್ತಾರೆ.

ಇದಾದ ನಂತರ ಬಿಗ್ ಬಾಸ್ ನಲ್ಲಿ ಪರಿಚಯಗೊಂಡಿದ್ದ ಚಂದನ್ ಶೆಟ್ಟಿ(Chandan Shetty) ಅವರನ್ನೇ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಈಗಾಗಲೇ ಮದುವೆಯಾಗಿ ಮೂರು ವರ್ಷಗಳೇ ಕಳೆದು ಹೋಗಿವೆ. ಇನ್ನು ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತಂತೆ ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ.

ಇನ್ನು ಕೂಡ ಅತ್ಯಂತ ಚಿಕ್ಕ ವಯಸ್ಸಿನವರಾಗಿರುವ ನಿವೇದಿತಾ ಗೌಡ ಅವರಿಗೆ ವೈದ್ಯರು ದೊಡ್ಡ ವಾರ್ನಿಂಗ್ ಅನ್ನೇ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅಷ್ಟಕ್ಕೂ ಆ ವಾರ್ನಿಂಗ್ ಏನು ಯಾಕಾಗಿ ಬಂದಿದೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ, ನಿವೇದಿತಾ ಗೌಡ(Niveditha Gowda) ಅವರು ಹೊರಗಿನ ಜಂಕ್ ಫುಡ್ ಹಾಗೂ ಐಸ್ ಕ್ರೀಮ್ ಸೇರಿದಂತೆ ಇನ್ನಿತರ ಆಹಾರ ವಸ್ತುಗಳನ್ನು ಹೆಚ್ಚಾಗಿ ತಿನ್ನುವಂತಹ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಹೊಟ್ಟೆಯಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತಿದ್ದು ಈಗಾಗಲೇ ವೈದ್ಯರು ಟ್ಯೂಬ್ ಹಾಕುವ ಕುರಿತಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರಂತೆ. ಈ ಬಗ್ಗೆ ಸ್ವತಃ ನಿವೇದಿತ ಗೌಡ ಅವರೇ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

Leave a Comment

error: Content is protected !!