Jr NTR: ಮತ್ತೆ ಪದೇಪದೇ ಆ ಪ್ರಶ್ನೆ ಕೇಳಿದ್ರೆ ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ ಎಂದು ಧಮ್ಕಿ ಹಾಕಿದ ಜೂನಿಯರ್ ಎನ್ಟಿಆರ್!

Jr NTR ಈಗಾಗಲೇ ರಾಜಮೌಳಿ(Rajamouli) ನಿರ್ದೇಶನದಲ್ಲಿ ಹಾಗೂ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಆರ್ ಆರ್ ಆರ್(RRR) ಸಿನಿಮಾದ ನಾಟು ನಾಟು ಹಾಡು ಇಡೀ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಆಗಿರುವ ಆಸ್ಕರ್ ಪ್ರಶಸ್ತಿಯನ್ನು(Oscar Award) ಗೆದ್ದಿರುವುದು ನಿಜಕ್ಕೂ ಕೂಡ ಭಾರತೀಯರಾದ ನಮಗೆಲ್ಲರಿಗೂ ಕೂಡ ಹೆಮ್ಮೆ ಇದೆ. ಅದರಲ್ಲೂ ನಮ್ಮ ದಕ್ಷಿಣ ಭಾರತದ ಚಿತ್ರವೊಂದು ಈ ರೀತಿ ಸಾಧನೆ ಮಾಡಿರುವುದು ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳಲೇಬೇಕು.

ಇನ್ನು ಜೂನಿಯರ್ ಎನ್ಟಿಆರ್(Jr NTR) ಎಷ್ಟೊಂದು ಸಂತೋಷವನ್ನು ಆನಂದಿಸಿದ ನಂತರವೂ ಕೂಡ ಈಗ ಅಭಿಮಾನಿಗಳಿಂದ ಕಿರಿಕಿರಿಗೆ ಒಳಗಾಗುತ್ತಿರುವುದು ಕೇಳಿ ಬಂದಿದೆ. ಹೌದು ಅಮೆರಿಕ ಪ್ರವಾಸವನ್ನು ಮುಗಿಸಿ ಬಂದ ನಂತರ ಭಾರತಕ್ಕೆ ಮರಳಿ ಬಂದಿರುವ ಜೂನಿಯರ್ ಎನ್ಟಿಆರ್ ಅವರಿಗೆ ಒಂದೇ ಸಮನೆ ಅದೊಂದು ಪ್ರಶ್ನೆಯನ್ನು ಕೇಳಿ ಅವರ ಅಭಿಮಾನಿಗಳು ಹಾಗೂ ಮೀಡಿಯಾದವರು ತಲೆ ತಿನ್ನುತ್ತಿದ್ದಾರೆ. ಇದಕ್ಕೆ ಇತ್ತೀಚಿಗಷ್ಟೇ ಅವರು ಗರಂ ಆಗಿಯೇ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಹೌದು ಮಿತ್ರರೇ ಜೂನಿಯರ್ ಎನ್ಟಿಆರ್ ಅವರು ಇತ್ತೀಚಿಗಷ್ಟೇ ತೆಲುಗು ಸಿನಿಮಾ ಒಂದರ ಕಾರ್ಯಕ್ರಮದಲ್ಲಿ ಕೂಡ ಹೋದಾಗ ಅದೇ ಪ್ರಶ್ನೆಯನ್ನು ಕೇಳಿದ್ದರು ಅದಕ್ಕೆ ಗರಂ ಆಗಿಯೇ ತಾರಕ್(Tarak) ಪ್ರತಿಕ್ರಿಯೆ ನೀಡಿದ್ದಾರೆ. ಆ ಪ್ರಶ್ನೆ ಯಾವುದೆಂದರೆ ಜೂನಿಯರ್ ಎನ್ಟಿಆರ್ ಅವರ ಮುಂದೇನೆ ಸಿನಿಮಾ ಅಂದರೆ ಜೂನಿಯರ್ ಎನ್ಟಿಆರ್ 30(NTR 30) ಸಿನಿಮಾದ ಬಗ್ಗೆ ಅಪ್ಡೇಟ್. ಇದಕ್ಕೆ ಅವರು ಗರಂ ಆಗಿಯೇ ಉತ್ತರ ನೀಡಿದ್ದಾರೆ.

ಈ ಪ್ರಶ್ನೆ ಕೇಳುತ್ತಿದ್ದಂತೆ ಜೂನಿಯರ್ ಎನ್ಟಿಆರ್(JrNTR) ರವರು ನೀವು ಇದರ ಬಗ್ಗೆ ಪದೇ ಪದೇ ಕೇಳುತ್ತಿದ್ದರೆ ಆ ಸಿನಿಮಾವನ್ನೇ ನಿಲ್ಲಿಸುತ್ತೇನೆ ಮತ್ತು ನೀವು ಕೇಳಿದರೆ ನಾನು ಸಿನಿಮಾ ಮಾಡುವುದನ್ನು ಬಿಟ್ಟು ಬಿಡುತ್ತೇನೆ ಎಂಬುದಾಗಿ ಹಾಸ್ಯಸ್ಪದವಾಗಿ ಉತ್ತರ ನೀಡಿದ್ದಾರೆ. ಅವರು ಹಾಸ್ಯಾಸ್ಪದವಾಗಿ ಉತ್ತರ ನೀಡಿರಬಹುದು ಆದರೆ ಈ ಪ್ರಶ್ನೆ ಅವರನ್ನು ಪದೇಪದೇ ತಲೆ ತಿನ್ನುತ್ತಿರುವುದು ಅವರಲ್ಲಿ ಕೂಡ ಅಸಹನೆಯನ್ನು ಮೂಡಿಸಿದೆ.

Leave a Comment

error: Content is protected !!