Kantara 2: ಯುಗಾದಿ ದಿನಾನೆ ಮತ್ತೊಂದು ಶಾಕಿ’ಂಗ್ ಸರ್ಪ್ರೈಸ್ ನೀಡಿದ ರಿಷಭ್ ಶೆಟ್ಟಿ ಆಂಡ್ ಟೀಮ್!

Rishab Shetty ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹಾಗೂ ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಾಂತಾರ(Kantara) ಸಿನಿಮಾ ಈಗಾಗಲೇ ಇಡೀ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕನ್ನಡ ನಾಡಿನ ಕರಾವಳಿ(Karavali) ಮಣ್ಣಿನ ಸಂಸ್ಕೃತಿಯ ಕುರಿತಂತೆ ಇಡೀ ಜಗತ್ತೇ ಎಂದು ತಿಳಿದಿದೆ ಎಂದರೆ ಅದಕ್ಕೆ ಕಾಂತಾರ ಸಿನಿಮಾ ಮೂಲಕ ಕಾರಣ ಎನ್ನಬಹುದು. ಅಷ್ಟರ ಮಟ್ಟಿಗೆ ಕಾಂತಾರ ಸಿನಿಮಾ ಎಲ್ಲಾ ಕಡೆ ಪಸರಿಸಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಕಾಂತಾರ ಸಿನಿಮಾ 19 ಕೋಟಿಗಿಂತಲೂ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿ 450 ಕೋಟಿ ಅಧಿಕ ಕಲೆಕ್ಷನ್ ಮಾಡಿದ್ದು ಅಷ್ಟೊಂದು ಸಣ್ಣ ಮಾತಲ್ಲ. ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಅವಾರ್ಡ್ ಗೌರವಗಳು ಕೂಡ ರಿಷಬ್ ಶೆಟ್ಟಿ(Rishab Shetty) ಹಾಗೂ ಕಾಂತಾರ ಚಿತ್ರತಂಡವನ್ನು ಹುಡುಕಿಕೊಂಡು ಬಂದಿವೆ. ಪ್ರತಿಯೊಬ್ಬರಿಗೂ ಕೂಡ ಕಾಂತಾರ(Kantara) ಸಿನಿಮಾದ ಎರಡನೇ ಭಾಗದ ಕುರಿತಂತೆ ಸಾಕಷ್ಟು ಕುತೂಹಲ ಇತ್ತು. ಈ ಬಗ್ಗೆ ಕೂಡ ಈಗಾಗಲೇ ರಿಷಬ್ ಶೆಟ್ಟಿ ಸಿನಿಮಾದ 100ನೇ ದಿನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ಕಾಂತಾರ 2(Kantara 2 ) ಸಿನಿಮಾದ ಕಥೆ ಈಗ ಬಂದಿರುವಂತಹ ಕಥೆಗೂ ಹಿನ್ನೆಲೆಯನ್ನು ಹುಡುಕಿಕೊಂಡು ಹೋಗುವಂತಹ ಕಥೆಯಾಗಿದೆ ಎಂಬುದಾಗಿ ಶೆಟ್ಟಿ ಅವರು ಇದರ ಕುರಿತಂತೆ ಸುಳಿವನ್ನು ಬಿಚ್ಚಿ ಕೊಟ್ಟಿದ್ದಾರೆ. ಆದರೆ ಇಂದು ಯುಗಾದಿಯ ಶುಭದಿನದಂದು ಮತ್ತೊಂದು ಸರ್ಪ್ರೈಸ್ ನೀಡುವ ಮೂಲಕ ಸಿನಿಮಾ ಪ್ರೇಮಿಗಳಲ್ಲಿ ಕಾತುರತೆಯನ್ನು ಇನ್ನು ಹೆಚ್ಚಿಸಿದ್ದಾರೆ.

ಹೌದು ಗೆಳೆಯರೆ ಚಿತ್ರತಂಡವೇ ಅಧಿಕೃತವಾಗಿ ತಿಳಿಸಿರುವಂತೆ ರಿಶಬ್ ಶೆಟ್ಟಿ(Rishab Shetty ಅವರು ಕಾಂತರಾ 2(Kantara 2) ಸಿನಿಮಾಗೆ ಈಗಾಗಲೇ ಯುಗಾದಿಯ ಈ ಶುಭದಿನದಂದೇ ಕಥೆಯನ್ನು ಬರೆಯಲು ಪ್ರಾರಂಭಿಸಿದ್ದು ಆದಷ್ಟು ಶೀಘ್ರದಲ್ಲಿಯೇ ಚಿತ್ರೀಕರಣವನ್ನು ಪ್ರಾರಂಭಿಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಒಟ್ಟಾರೆಯಾಗಿ ಕಾಂತಾರ ಸಿನಿಮಾದ ಫ್ರಾಂಚೈಸಿ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!