ರಾಜಕುಮಾರ್ ಅವರನ್ನು ಕಳುಹಿಸಿ ಪಾರ್ವತಮ್ಮ ರಾಜಕುಮಾರ್ ಒಬ್ಬರೇ ಮಾಲ್ಡೀವ್ಸ್ ಹೋಟೆಲ್ ನಲ್ಲಿ ತಂಗಿದ್ರು ಏಕೆ ಗೊತ್ತಾ

1953 ಜೂನ್ 25 ರಂದು ನಂಜನಗೂಡಿನಲ್ಲಿ ಎರಡು ಕುಟುಂಬಗಳು ಒಂದುಗೂಡಿ ನೇರವೇರಿಸಿದ ಕಾರ್ಯಕ್ರಮವು ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿತು. ರಾಜಕುಮಾರ ಅವರಿಗಾಗ 24 ವರ್ಷ. ಪಾರ್ವತಮ್ಮ ಅವರಿಗೆ 14 ವರ್ಷ. ಮದುವೆಯು ಚೆಂದದಿಂದ ನೇರವೇರಿತು.

ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ ಮೆರು ನಟ. ಸರಳತೆ, ನಡತೆ, ಗುಣಗಳಿಂದ ಮಾದರಿ ಮಾನವನೆಂದೆ ಕರೆಯಿಸಿಕೊಂಡಿದ್ದಾರೆ. ಅಪಾರ ಸಾಧನೆಗೈದ ಇವರ ಹಿಂದೆ ಸದಾ ಕಾಲ ನಿಂತು ಚಿತ್ರದಲ್ಲಿನ ಅಭಿನಯಕ್ಕೆ ಪ್ರೋತ್ಸಾಹಿಸುತ್ತಾ, ಕೆಲಸ ಕಾರ್ಯಗಳಲ್ಲಿ ನೆರವಾದವರು ಪಾರ್ವತಮ್ಮ. ಐದು ಮಕ್ಕಳ ತಾಯಿಯಾಗಿ ಅವರ ಪಾಲನೆ ಪೋಷಣೆಯೊಂದಿಗೆ ಡಾಕ್ಟರ್ ರಾಜಕುಮಾರ್ ಅವರಲ್ಲಿಯೂ ಕಾಳಜಿಯನ್ನು ತೋರಿಸುತ್ತಾ, ದೊಡ್ಮನೆ ಕುಟುಂಬದ ಹೆಸರು, ಗೌರವ ಉಳಿಸುವಲ್ಲಿ ಶ್ರಮವಹಿಸಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರದ್ದು ಮಗುವಿನಂತಹ ಮನಸ್ಸು. ಯಾರೊಂದಿಗೂ ಕಲಹ ಮನಸ್ತಾಪಗಳಿಲ್ಲದೆ, ನೃತ್ಯ ಗಾಯನ ಅಭಿನಯವೆನ್ನುತ್ತಾ, ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದರು. ಹಣಕಾಸು ವ್ಯವಹಾರಗಳಲ್ಲಿ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೆಣ್ಣು ಮಗಳಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಾ ಕುಟುಂಬವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದವರು ಪಾರ್ವತಮ್ಮ ರಾಜಕುಮಾರ್ ಅವರು.

ಅಪ್ಪನ ಸಾಧನೆಯಲ್ಲಿ ಅಮ್ಮ ನೆರವಾದದ್ದನ್ನು ಶಿವಣ್ಣ, ರಾಘಣ್ಣ, ಅಪ್ಪು ಅವರು ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದಾರೆ. ಚಿತ್ರ ನಿರ್ಮಾಣ ಕಾರ್ಯದಲ್ಲಿ ಹೆಜ್ಜೆ ಇಟ್ಟು ಪಾರ್ವತಮ್ಮ ಅವರು ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವುದು ಗಮನಾರ್ಹ.

ಚಿತ್ರತಂಡ ಸಮೇತವಾಗಿ ರಾಜಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮ ಅವರು ಮಾಲ್ಡೀವ್ಸ್ ಗೆ ತೆರಳಿದ್ದಾಗ ಹೋಟೆಲ್ವೊಂದರಲ್ಲಿ ತಂಗಿದ್ದರಂತೆ. ಇನ್ನೇನು ಶೂಟಿಂಗ್ ಮುಗಿಸಿ ಭಾರತಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ಹಣವೆಲ್ಲ ಖಾಲಿಯಾಗಿ ಹೋಗಿತ್ತಂತೆ.ಹೋಟೆಲ್ನವನಲ್ಲಿ ಎದುರಾದ ಕಷ್ಟವನ್ನು ಹೇಳಿಕೊಂಡು ಭಾರತಕ್ಕೆ ಮರಳಿದ ನಂತರ ಹಣವನ್ನು ನೀಡುವುದಾಗಿ ಹೇಳುತ್ತಾರಂತೆ. ಮೊದಲು ಒಪ್ಪಿಗೆ ಸೂಚಿಸಿದ ಆತ ನಂತರದಲ್ಲಿ ಹಣವನ್ನು ಪೂರ್ತಿಯಾಗಿ ನೀಡುವವರೆಗೂ, ಮರಳಿಸುವುದರ ಕುರಿತು ನಂಬಿಕೆಗಾಗಿ ಚಿತ್ರದ ನಾಯಕ ಡಾಕ್ಟರ್ ರಾಜಕುಮಾರ್ ಅವರನ್ನು ಅಲ್ಲಿಯೇ ಇರಿಸಿಕೊಳ್ಳುವುದಾಗಿ ಹೇಳಿದನಂತೆ.

ಆದರೆ ಗಟ್ಟಿಗಿತ್ತಿ ಪಾರ್ವತಮ್ಮ ಅವರು ಈ ವಿಚಾರವು ಎಲ್ಲೆಡೆ ಹರಡಿದರೆ ಏನಾಗಬಹುದೆಂದು ಯೋಚಿಸಿ, ತಾವೊಬ್ಬರೆ ಹೋಟೆಲ್ನಲ್ಲಿ ಇದ್ದು ಉಳಿದವರನ್ನು ಭಾರತಕ್ಕೆ ಮರಳಿ ಹೋಗಲು ಸೂಚಿಸುತ್ತಾರಂತೆ. ಈ ವಿಷಯ ತಿಳಿದ ಅಂಬರೀಶ್ ಅವರು ಪಾರ್ವತಮ್ಮ ಅವರಿಗೆ ಕರೆ ಮಾಡಿ ಸ್ವಲ್ಪ ರೇಗಿಸಿ, ನಂತರ ಸಹಾಯಕ್ಕೆ ಮುಂದಾಗುತ್ತಾರಂತೆ. ನಟ ಅಂಬರೀಶ್ ಅವರ ಮೂಲಕ ವ್ಯಕ್ತಿ ಒಬ್ಬರು ಹೋಟೆಲ್ಗೆ ಬಂದು ಹಣವನ್ನು ನೀಡುತ್ತಾರಂತೆ. ಈ ರೀತಿಯಾಗಿ ಬಂದ ಸಮಸ್ಯೆಯು ಬಗೆಹರಿಯಿತಂತೆ. ಈ ಘಟನೆಯನ್ನು ತಿಳಿದ ಮೇಲೆ ನಾವೆಲ್ಲರೂ ಮೆಚ್ಚಲೇಬೇಕಾದ ಅಂಶವೆಂದರೆ ಪಾರ್ವತಮ್ಮ ಅವರ ದಿಟ್ಟತನ.

Leave a Comment

error: Content is protected !!