ಸಹೋದರ ಜಗ್ಗೇಶ್ ಅವರ ಆ ಒಂದು ಮಾತಿಗೆ ಮಣಿದು ಕಳೆದ ಐದು ವರ್ಷಗಳಿಂದ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ ಕೋಮಲ್. ಜಗ್ಗೇಶ್ ಹೇಳಿದ ಆ ಮಾತು ಏನು

ಕೋಮಲ್ ಅವರು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಕಾಲಿಟ್ಟು, ನಂತರದಲ್ಲಿ ನಾಯಕನಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೋಮಲ್ ಎಂದೊಡನೆ ಒಂದಿಷ್ಟು ಹಾಸ್ಯ ದೃಶ್ಯಗಳು ಕಣ್ಣೆದುರಿಗೆ ಹಾದು ಹೋಗುತ್ತವೆ. ವಾರೆ ವಾ ಚಿತ್ರದಲ್ಲಿ ಮಹಿಳೆಯರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳುವ ವಿಶೇಷ ಶಕ್ತಿಯನ್ನು ಹೊಂದಿದ ಪತಿಯಾಗಿ ಅಭಿನಯಿಸಿದ್ದು, ಅಭಿಮಾನಿಗಳೆಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗೋವಿಂದಾಯ ನಮಃ ಚಿತ್ರಕ್ಕಾಗಿ ಬೆಸ್ಟ್ ಕಾಮಿಡಿಯನ್ ಪ್ರಶಸ್ತಿಗಳಿಸಿದ್ದಾರೆ.

ನೀವು ಗಮನಿಸಿರಬಹುದು; ಕಳೆದ ಐದು ವರ್ಷಗಳಿಂದ ಕೋಮಲ್ ಅವರು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆಕ್ಷನ್ ಚಿತ್ರವೊಂದರಲ್ಲಿ ಅಭಿನಯಿಸಿದ ಬಳಿಕ ಅಣ್ಣನಾದ ನವರಸ ನಾಯಕ ಜಗ್ಗೇಶ್ ಅವರ ಆ ಒಂದು ಮಾತಿಗೆ ಬೆಲೆಕೊಟ್ಟು ಮತ್ತಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಅದೊಂದೇ ಮಾತಿಗೆ, ನಟನೆಯಿಂದ ತಮ್ಮನ್ನು ಸ್ವಲ್ಪ ದೂರವಿರಿಸಿಕೊಂಡಿದ್ದರು.

ಕೋಮಲ್ ಅವರಿಗೆ ಅವರ ಸಹೋದರ ಜಗ್ಗೇಶ್ ಅವರು, ಕೇತುದೆಸೆ ಇರುವ ಕಾರಣ ಐದು ವರ್ಷಗಳ ಕಾಲ ಯಾವುದೇ ಚಿತ್ರವನ್ನು ಮಾಡಬೇಡ ಎಂದಿದ್ದರಂತೆ. ಈ ಕುರಿತಾಗಿ ಮಾಧ್ಯಮಗಳ ಎದುರು ಮಾತನಾಡಿರುವ ಕೋಮಲ್ ಅವರು ‘ನನಗೆ ಕೇತುದೆಸೆ ಇರುವ ಕಾರಣ ಕಳೆದ ಐದು ವರ್ಷಗಳಿಂದ ಯಾವುದೇ ಚಿತ್ರವನ್ನು ನಾನು ಒಪ್ಪಿಕೊಂಡಿಲ್ಲ. ಕೇತುದೆಸೆಯ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಯಾವುದೇ ದೊಡ್ಡ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬಾರದು. ಅದೇ ಕಾರಣಕ್ಕಾಗಿ ನಾನು ಯಾವುದೇ ಚಿತ್ರ ಮಾಡದೆ ಮನೆಯಲ್ಲಿಯೇ ಇದ್ದೆ’ ಎಂದಿದ್ದಾರೆ.

ಸಮಯ ಸರಿ ಇರಲಿಲ್ಲ ಎಂದು ಮನೆಯಲ್ಲಿ ಕುಳಿತಿದ್ದ ಕೋಮಲ್ ಅವರು ಇದೀಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪರದೆಯ ಮೇಲೆ ಕಾಣಲು ಸಿದ್ಧಗೊಳ್ಳುತ್ತಿರುವ ಇವರ ಚಿತ್ರ, ‘ಕಾಲಾಯ ನಮಃ’. ಈ ಚಿತ್ರಕ್ಕಾಗಿ ಕೆಲವು ಸಲಹೆ ಸೂಚನೆಗಳನ್ನು ಕೊಡುವುದರ ಮೂಲಕ ನಟ ಜಗ್ಗೇಶ್ ಅವರು ಸಹಾಯ ಮಾಡಿದ್ದಾರಂತೆ. ಅಲ್ಲದೆ ಈ ಚಿತ್ರವು ಕೋಮಲ್ ಅವರ ಪತ್ನಿಯಿಂದಲೇ ಪ್ರೊಡ್ಯೂಸ್ ಆಗಲಿದೆಯಂತೆ. ಈ ವಿಷಯವು ಅಭಿಮಾನಿಗಳ ಕಿವಿ ಮುಟ್ಟಿದ್ದು, ಸಂತಸ ವ್ಯಕ್ತಪಡಿಸಿದ್ದಾರಂತೆ.

Leave a Comment

error: Content is protected !!