Parvathamma Rajkumar: ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಾಣ ಮಾಡಿರುವ ಮೊದಲ ಸಿನಿಮಾ ಇದೇ ನೋಡಿ.

Parvathamma Rajkumar ಕನ್ನಡ ಚಿತ್ರರಂಗದಲ್ಲಿ ನಿಮಗೆ ಖ್ಯಾತನಾಮ ನಿರ್ಮಾಪಕರು ಸಾಕಷ್ಟು ಜನ ಸಿಗಬಹುದು ಆದರೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಹಿಳೆಯಾಗಿ ನಿರ್ಮಾಪಕೀಯಾಗಿ ಕಾಣಿಸಿಕೊಂಡಂತಹ ಧೀಮಂತ ಮಹಿಳೆ ಎಂದರೆ ಅದು ಪಾರ್ವತಮ್ಮ ರಾಜಕುಮಾರ್(Parvathamma Rajkumar). ನಿಜಕ್ಕೂ ಕೂಡ ಸ್ವಾವಲಂಬಿ ಮಹಿಳೆಯ ಹೆಗ್ಗುರುತಾಗಿದ್ದಾರೆ.

ರಾಜಕುಮಾರ್ ಅವರ ಸೋದರ ಸಂಬಂಧಿಯ ಮಗಳಾಗಿದ್ದ ಪಾರ್ವತಮ್ಮ ರಾಜಕುಮಾರ್ ಅವರನ್ನೇ ರಾಜಕುಮಾರ್ ಅವರು ಮದುವೆಯಾಗಿ ನಂತರ ನಾಟಕ ಕಂಪನಿಗಳ ಜೊತೆಗೆ ಊರೂರು ತಿರುಗುತ್ತಾರೆ. ನಂತರ ರಾಜಕುಮಾರ್(Rajkumar) ಅವರಿಗೆ ಬೇಡರ ಕಣ್ಣಪ್ಪ ಎನ್ನುವ ಮೊದಲ ಸಿನಿಮಾ ಸಿಗುತ್ತದೆ. ಈ ಸಂದರ್ಭದಲ್ಲಿ ಇಡೀ ಕುಟುಂಬವನ್ನು ಸಂಭಾಳಿಸಿದ್ದು ಪಾರ್ವತಮ್ಮ ರಾಜಕುಮಾರ್.

ರಾಜಕುಮಾರ್(Rajkumar) ಸೇರಿದಂತೆ ಮನೆಯ ಪ್ರತಿಯೊಬ್ಬ ಮಗ ಮಗಳು ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಎಲ್ಲರ ಬೆಂಬಲವಾಗಿ ನಿಂತಿದ್ದು ಪಾರ್ವತಮ್ಮ ರಾಜಕುಮಾರ್. ಇನ್ನು ವಜ್ರೇಶ್ವರಿ ಕಂಬೈನ್ಡ್ಸ್ ಸಂಸ್ಥೆಯ ಮೂಲಕ ನಿರ್ಮಾಪಕೀಯಾಗಿ ಕೂಡ ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ರಾಜಕುಮಾರ್ ಅವರು ಪರಿಚಯಿತರಾಗುತ್ತಾರೆ.

ಮೊದಲ ಸಿನಿಮಾದಲ್ಲಿ ರಾಜಕುಮಾರ್ ನಟನೆಯ ಶ್ರೀನಿವಾಸ ಕಲ್ಯಾಣ ಸಿನಿಮಾ ವನ್ನು ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಪರಿಚಿತರಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ಹಾಗೂ ಸಾಕಷ್ಟು ಪ್ರತಿಭೆಗಳನ್ನು ಅವರು ತಮ್ಮ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಕೆಲಸವನ್ನು ಮಾಡುತ್ತಾರೆ. ಇಂದಿಗೂ ಕೂಡ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವುದಾಗಿ ಮಹಿಳೆ ಯೋಚಿಸುತ್ತಾಳೆ ಎಂದರೆ ಅದಕ್ಕೆ ಸ್ಪೂರ್ತಿ ಪಾರ್ವತಮ್ಮ ರಾಜಕುಮಾರ್(Parvathamma Rajkumar) ಎಂದರೆ ತಪ್ಪಾಗಲಾರದು

Leave a Comment

error: Content is protected !!