Pavithra Lokesh: ಪವಿತ್ರ ಲೋಕೇಶ್ ರವರು ಧರಿಸಿರುವ ಡೈಮಂಡ್ ನೆಕ್ಲೇಸ್ ಬೆಲೆ ಎಷ್ಟು ಗೊತ್ತಾ?

Pavithra Lokesh ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವಂತಹ ಪವಿತ್ರ ಲೋಕೇಶ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಖ್ಯಾತ ಕಲಾವಿದ ಆಗಿರುವಂತಹ ನರೇಶ್(Naresh) ಅವರನ್ನು ಮದುವೆ ಆಗಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಇವರಿಬ್ಬರ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

ಪವಿತ್ರ ಲೋಕೇಶ್(Pavithra Lokesh) ಅವರಿಗೆ ಇದು ಮೂರನೇ ಮದುವೆಯಾಗಿದ್ದಾರೆ ನರೇಶ್ ಅವರಿಗೆ ಇದು ನಾಲ್ಕನೇ ಮದುವೆಯಾಗಿತ್ತು. ಸದ್ಯಕ್ಕೆ ಇಬ್ಬರು ಕೂಡ ಮಾಧ್ಯಮಗಳ ಮುಂದೆ ಆಗಾಗ ಓಡಾಡುತ್ತಿದ್ದು ಇವರ ಮದುವೆಯ ಬಗ್ಗೆ ಪರ ಹಾಗು ವಿರೋಧ ಚರ್ಚೆಗಳು ಕೂಡ ಆಗಾಗ ನಡೆಯುತ್ತಲೇ ಇರುತ್ತವೆ.

ಇನ್ನು ಇವರಿಬ್ಬರ ಕಾಂಬಿನೇಷನ್ನಲ್ಲಿ ಈಗ ಮತ್ತೆ ಮದುವೆ ಎನ್ನುವ ಸಿನಿಮಾ ಮೂಡಿ ಬರುತ್ತಿದ್ದು ಇದು ಅವರ ಜೀವನಕ್ಕೆ ಸಂಬಂಧಿಸಿದ ನಿಜ ಘಟನೆಗಳನ್ನು ಸಾರುವಂಥ ಸಿನಿಮಾವೇ ಆಗಿದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಈಗ ಪವಿತ್ರ ಲೋಕೇಶ್ ರವರ ಲೇಟೆಸ್ಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅದರಲ್ಲಿ ಅವರು ಧರಿಸಿರುವ ಡೈಮಂಡ್ ನೆಕ್ಲೆಸ್ ಎಲ್ಲರ ಗಮನ ಸೆಳೆಯುತ್ತದೆ.

ಹೌದು ಮಿತ್ರರೇ, ಈ ಫೋಟೋದಲ್ಲಿ ಪವಿತ್ರ ಲೋಕೇಶ್ ರವರು ಧರಿಸಿರುವ ಡೈಮಂಡ್ ನೆಕ್ಲೇಸ್ ನರೇಶ್ ಅವರ ತಾಯಿಯವರದ್ದಾಗಿದ್ದು ಇದು ಭರ್ಜರಿ ಒಂದು ಕೋಟಿ ರೂಪಾಯಿಯ ಆಸು ಪಾಸಿನಲ್ಲಿದೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!