Pavitra Naresh: ದಿಢೀರನೆ ಮದುವೆ ಆಗಿರುವ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ವಯಸ್ಸಿನ ಅಂತರ ಎಷ್ಟು ಗೊತ್ತಾ? ಕೇಳಿದ್ರೆ ಅಪ್ಪ ಮಗಳು ಅಂತೀರಾ.

Pavitra Lokesh ಸಾಕಷ್ಟು ಸಮಯಗಳ ಹಿಂದೆಯಷ್ಟೇ ನಟಿ ಪವಿತ್ರ ಲೋಕೇಶ್ ಅವರ ವಿಚಾರದಲ್ಲಿ ಸಾಕಷ್ಟು ವಿಚಾರಗಳನ್ನು ಕೇಳಿಬಂದಿದ್ದವು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇವರು ಖ್ಯಾತ ಹಿರಿಯ ನಟರಾಗಿದ್ದ ಮೈಸೂರು ಲೋಕೇಶ್(Mysore Lokesh) ಅವರ ಮಗಳಾಗಿದ್ದರು. ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಆಧಾರದ ಮೇಲೆ ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಹೋದರೆ ನಟಿ ಪವಿತ್ರ ಲೋಕೇಶ್(Pavitra Lokesh) ಅವರ ಹೆಸರು ತೆಲುಗಿನ ಖ್ಯಾತ ನಟ ಆಗಿರುವ ನರೇಶ್ ಅವರ ಜೊತೆ ಕೇಳಿ ಬಂದಿತ್ತು. ನರೇಶ್(Naresh) ತಮ್ಮ 3ನೇ ಪತ್ನಿಯಾಗಿರುವ ರಮ್ಯಾ ರಘುಪತಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರು ಕೂಡ ಬೇಡದ ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿ ಕೂಡ ಸುದ್ದಿಯಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರೂ ಕೂಡ ಮೈಸೂರಿನ ಹೋಟೆಲ್ ರೂಮ್ನಲ್ಲಿ ಸಿಕ್ಕಿಬಿದ್ದಿದ್ದರು.

ಈ ವರ್ಷದ ಆರಂಭದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ವಿಶೇಷವಾಗಿ ಪೋಸ್ಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದ ನಟ ನರೇಶ್ ಆ ವಿಡಿಯೋದಲ್ಲಿ ನಟಿ ಪವಿತ್ರ ಲೋಕೇಶ್(Pavithra Lokesh) ಅವರಿಗೆ ಕಿ’ ಸ್ ಮಾಡುತ್ತಿರುವುದು ಕಂಡುಬಂದಿತ್ತು. ಆದರೆ ಈಗ ಅನಿರೀಕ್ಷಿತ ಎನ್ನುವಂತೆ ಇಬ್ಬರೂ ಕೂಡ ಮದುವೆಯಾಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರ ಕೇಳಿದರೆ ಖಂಡಿತವಾಗಿ ನೀವು ಕೂಡ ಇವರಿಬ್ಬರು ಅಪ್ಪ ಮಗಳ ವಯಸ್ಸಿನವರು ಎಂದು ಹೇಳೋದ್ರಲ್ಲಿ ಅನುಮಾನವೇ ಇಲ್ಲ. ಹೌದು ಗೆಳೆಯರೇ ನರೇಶ್(Naresh Telugu Actress) ರವರು 63 ವರ್ಷ ವಯಸ್ಸಿನವರಾದರೆ ನಟಿ ಪವಿತ್ರ ಲೋಕೇಶ್ ಅವರು 44 ವರ್ಷ ವಯಸ್ಸಿನವರಾಗಿದ್ದಾರೆ. ಅಂದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಭರ್ಜರಿ 19 ವರ್ಷ ಆಗಿದೆ. ಅದಕ್ಕೆ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವ ಬ್ರೇಕಿಂಗ್ ನ್ಯೂಸ್ ಇವರ ಮದುವೆಯೇ ಆಗಿದೆ.

Leave a Comment

error: Content is protected !!