Top Actress: ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಯಾರು ಗೊತ್ತಾ?

Top South Actresses ನಮ್ಮ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟಿಯರು ಇದ್ದಾರೆ. ಸಿನಿಮಾಗಳ ಯಶಸ್ಸು ಹೆಚ್ಚಾಗುತ್ತದೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಇಂದಿನ ಲೇಖನಿಯಲ್ಲಿ ನಾವು ಯಾವೆಲ್ಲ ನಟಿಯರು ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಕೆಜಿಎಫ್ ಸಿನಿಮಾದಿಂದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಶ್ರೀನಿಧಿ ಶೆಟ್ಟಿ(Srinidhi Shetty) ಬರೋಬ್ಬರಿ ಒಂದರಿಂದ ಮೂರು ಕೋಟಿ ರೂಪಾಯಿವರೆಗೂ ಸಂಭಾವನೆಯನ್ನು ಪಡೆಯುತ್ತಾರೆ.

ಮತ್ತೊಬ್ಬ ನಟಿಯಾಗಿರುವ ಕೀರ್ತಿ ಸುರೇಶ್(Keerthy Suresh) ಒಂದು ಸಿನಿಮಾಗೆ ಒಂದರಿಂದ ಮೂರು ಕೋಟಿ ರೂಪಾಯಿವರೆಗೂ ಕೂಡ ಸಂಭಾವನೆ ರೂಪದಲ್ಲಿ ಪಡೆದುಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ಮೂಲಕ ಪಾದರ್ಪಣೆ ಮಾಡಿ ಇಂದು ಭಾರತದ ಎಲ್ಲ ಭಾಷೆಗಳಲ್ಲಿ ನಟಿಸುತ್ತಿರುವ ರಾಕುಲ್ ಪ್ರೀತ್ ಸಿಂಗ್(Rakul preet singh) 1.5 ಕೋಟಿಯಿಂದ 3.5 ಕೋಟಿ ರೂಪಾಯಿವರೆಗೆ ಪಡೆದುಕೊಳ್ಳುತ್ತಾರೆ. ತೆಲುಗು ಚಿತ್ರರಂಗದ ಖ್ಯಾತ ಬಹುಭಾಷಾ ನಟಿ ಕಾಜಲ್ ಅಗರ್ವಾಲ್(Kajal Aggerwal) 1.5 ಕೋಟಿಯಿಂದ 4 ಕೋಟಿ ರೂಪಾಯಿವರೆಗೂ ಪಡೆದುಕೊಳ್ಳುತ್ತಾರೆ.

ಮಿಲ್ಕಿ ಬ್ಯುಟಿ ನಟಿ ತಮನ್ನ(Tamanna Bhatia) ಒಂದು ಸಿನಿಮಾಗೆ 1.5 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗೂ ಪಡೆದುಕೊಳ್ಳುತ್ತಾರೆ. ಕನ್ನಡ ಮೂಲದ ಖ್ಯಾತ ಪ್ಯಾನ್ ಇಂಡಿಯನ್ ನಟಿ ರಶ್ಮಿಕ ಮಂದಣ್ಣ(Rashmika Mandanna) ಎರಡರಿಂದ 5 ಕೋಟಿ ರೂಪಾಯಿ ಸಂಭಾವನೆಯನ್ನು ಪ್ರತಿ ಸಿನಿಮಾಗೆ ಪಡೆದುಕೊಳ್ಳುತ್ತಾರೆ. ಕರಾವಳಿ ಮೂಲದ ಖ್ಯಾತ ಬಹುಭಾಷಾ ತಾರೆ ಆಗಿರುವ ಪೂಜಾ ಹೆಗ್ಡೆ(Pooja Hegde) ಸಾಕಷ್ಟು ಸೋಲಿನ ಸಿನಿಮಾಗಳಲ್ಲಿ ಕಳೆದ ವರ್ಷ ನಟಿಸಿದ್ದರು ಕೂಡ ಈಗಲೂ ಪ್ರತಿ ಸಿನಿಮಾಗೆ 2.5 ಕೋಟಿ ರೂಪಾಯಿಯಿಂದ 7 ಕೋಟಿ ರೂಪಾಯಿವರೆಗೂ ಸಂಭಾವನೆಯನ್ನು ಪಡೆಯುತ್ತಾರೆ.

ಸದ್ಯದ ಮಟ್ಟಿಗೆ ಲೇಟೆಸ್ಟ್ ಲೇಡಿ ಸೂಪರ್ ಸ್ಟಾರ್ ಆಗಿರುವ ಸಮಂತ(Samantha) ಎಲ್ಲ ಭಾಷೆಗಳಲ್ಲಿ ಬಹು ಬೇಡಿಕೆ ನಟಿಯಾಗಿದ್ದು ಮೂರರಿಂದ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಮತ್ತೊಬ್ಬ ಕರಾವಳಿ ಮೂಲದ ನಟಿ ಅನುಷ್ಕಾ ಶೆಟ್ಟಿ(Anushka Shetty) ಆರು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ಕೊನೆಯದಾಗಿ ಎಲ್ಲರಿಗಿಂತ ಹೆಚ್ಚು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರಾ(Nayanthara) ರವರು ಪ್ರತಿ ಸಿನಿಮಾಗೆ 5 ರಿಂದ 10 ಕೋಟಿ ರೂಪಾಯಿವರೆಗೂ ಪಡೆದುಕೊಳ್ಳುತ್ತಾರೆ. ಇವರೇ ಗೆಳೆಯರೇ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರು.

Leave a Comment

error: Content is protected !!