ಪವಿತ್ರ ಲೋಕೇಶ್ ಮದುವೆ ಆಗಲು ಹೊರಟಿರುವ 64 ವರ್ಷ ವಯಸ್ಸಿನ ತೆಲುಗು ನಟನ ಒಟ್ಟೂ ಆಸ್ತಿ ಎಷ್ಟು ಗೊತ್ತಾ ನಿಜಕ್ಕೂ ದಂಗಾಗುತ್ತೀರಿ

ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪವಿತ್ರ ಲೋಕೇಶ್; ಅವರು ಮದುವೆಯಾಗಲು ಹೊರಟ ವ್ಯಕ್ತಿಯ ಆಸ್ತಿ ಎಷ್ಟಿದೆ ಗೊತ್ತಾ! ಇತ್ತೀಚಿಗೆ ಟಾಲಿವುಡ್ ತುಂಬಾ ಇದೇ ಮಾತು. ತೆಲುಗುವಿನ ಆಗರ್ಭ ಶ್ರೀಮಂತರಾಗಿರುವ ನರೇಶ್ ಅವರು 4ನೇ ವಿವಾಹಕ್ಕೆ ಮುಂದಾಗಿದ್ದಾರೆ ಅದು ಕನ್ನಡತಿಯ ಒಬ್ಬರ ಜೊತೆ ಎನ್ನುವುದು ವಿಶೇಷ. ಯಾರು ಯಾರ ಜೊತೆ ಮದುವೆಯಾಗುತ್ತಿದ್ದಾರೆ? ಸಿನಿಮಾರಂಗದಲ್ಲಿ ಇದೆಂತ ಘಟನೆ ನಡೆಯುತ್ತಿದೆ ಎಂಬುದನ್ನು ಹೇಳ್ತೀವಿ ಮುಂದೆ ಓದಿ.

ಕನ್ನಡ ಕಿರುತೆರೆಯಾಗಿರಲಿ ಅಥವಾ ಹಿರಿತೆರೆಯಾಗಿರಲಿ ಪವಿತ್ರಾ ಲೋಕೇಶ್ ಎನ್ನುವ ಹೆಸರು ಅತ್ಯಂತ ಫೇಮಸ್. ಹೌದು ಇದುವರೆಗೆ ಸುಮಾರು 150ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಪವಿತ್ರ ಲೋಕೇಶ್. ಚಂದನವನದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪವಿತ್ರ ಲೋಕೇಶ್ ತಮ್ಮ ’ನಾಯಿ ನೆರಳು’ ಚಿತ್ರದ ಅದ್ಭುತ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಪವಿತ್ರ ಲೋಕೇಶ್ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡವರು. 2007ರಲ್ಲಿ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಪವಿತ್ರ ಲೋಕೇಶ್. ಇದೀಗ ಇವರ ಸಾಂಸಾರಿಕ ಜೀವನದ ಬಗ್ಗೆ ಸ್ಯಾಂಡಲ್ ವುಡ್ ಬಿಡಿ, ಟಾಲಿವುಡ್ ಕೂಡ ಮಾತನಾಡಿಕೊಳ್ಳುತ್ತಿದೆ.

ಪವಿತ್ರ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಅವರು ವಿವಾಹವಾಗಿ ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಹಾಗಾಗಿ ಇವರು ಜೀವನ ತುಂಬಾ ಸುಂದರವಾಗಿ ಇರಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಇದೀಗ ಪವಿತ್ರ ಲೋಕೇಶ್ ತೆಲುಗು ನಟ ನರೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಅನ್ನುವ ಸುದ್ದಿ ಎಲ್ಲರಿಗೂ ಶಾಕಿಂಗ್ ಆಗಿದೆ. ನಟಿ ಪವಿತ್ರ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಅವರ ಜೀವನದಲ್ಲಿ ಬಿರುಕು ಮೂಡಿದ್ದು ಅವರು ಯಾವ ಕಾರಣಕ್ಕೆ ದೂರಾಗುತ್ತಿದ್ದಾರೆ ಎನ್ನುವುದು ಅಧಿಕೃತವಾಗಿ ಯಾರಿಗೂ ತಿಳಿದಿಲ್ಲ. ಆದರೆ ಪವಿತ್ರ ಲೋಕೇಶ್ ಹಾಗೂ ನರೇಶ್ ಈಗಾಗಲೇ ಗುರೂಜಿಯ ಆಶೀರ್ವಾದವನ್ನು ಪಡೆದು ಮದುವೆಯಾಗುತ್ತಿದ್ದಾರೆ ಎನ್ನುವ ವಿಷಯ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ.

ಪವಿತ್ರ ಲೋಕೇಶ್ ಮದುವೆಯಾಗುವುದಕ್ಕೆ ನರೇಶ್ ಅವರನ್ನು ಹೇಗೆ ಆಯ್ಕೆ ಮಾಡಿಕೊಂಡರು ಎನ್ನುವುದು ಎಲ್ಲರಿಗೂ ಆಶ್ಚರ್ಯವಾದ ವಿಷಯ. ಇತ್ತೀಚಿಗೆ ಪವಿತ್ರ ಲೋಕೇಶ್ ಟಾಲಿವುಡ್ ನಲ್ಲೂ ಸಹ ಸಕ್ರಿಯರಾಗಿದ್ದಾರೆ. ಹಾಗಾಗಿ ನಟನೆಯ ಸಮಯದಲ್ಲಿಯೇ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಭೇಟಿಯಾಗಿರಬಹುದು ಎನ್ನುವುದು ಹಲವರ ಅಂಬೋಣ. ನರೇಶ್ ಅವರು ಟಾಲಿವುಡ್ ನ ಸೂಪರ್ ಸ್ಟಾರ್ ಎನಿಸಿದ್ದ ಕೃಷ್ಣ ಅವರ ಎರಡನೆಯ ಹೆಂಡತಿ ವಿಜಯ ನಿರ್ಮಲಅವರ ಮಗ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು ಆಳಿದ ನಟ ಕೃಷ್ಣ ಅದು ಸಾಕಷ್ಟು ಹೆಸರು ಹಾಗೂ ಹಣವನ್ನು ಗಳಿಸಿದವರು. ನರೇಶ್ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸಹೋದರ ಕೂಡ. ನರೇಶ್ ಹುಟ್ಟಿದ್ದು ಬಹಳ ದೊಡ್ಡ ಕುಟುಂಬದಲ್ಲಿ ಹಾಗಾಗಿ ಅವರು ಸಾಕಷ್ಟು ಸ್ಥಿತಿವಂತರು ಕೂಡ ಹೌದು.

ನರೇಶ್ ಅವರ ಒಟ್ಟು ಆಸ್ತಿ ಬರೋಬ್ಬರಿ ಆರು ಸಾವಿರ ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು 64 ವರ್ಷದ ನರೇಶ್ ಅವರು 43 ವರ್ಷದ ಪವಿತ್ರ ಲೋಕೇಶ್ ಅವರನ್ನು ಮದುವೆ ಆದರೆ ಇದು ಅವರ ನಾಲ್ಕನೆಯ ವಿವಾಹವಂತೆ. ಇದುವರೆಗೆ ಪವಿತ್ರ ಲೋಕೇಶ್ ಅವರಾಗಲಿ ನರೇಶ್ ಅವರಾಗಲಿ ಅಥವಾ ಸುಚೇಂದ್ರ ಪ್ರಸಾದ್ ಆಗಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಾಗಿ ಈಗ ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡುತ್ತಿರುವ ಪವಿತ್ರ ಲೋಕೇಶ್ ಅವರ ವಿವಾಹದ ಸಂಗತಿ ಸತ್ಯವೋ ಸುಳ್ಳೋ ಗೊತ್ತಿಲ್ಲ. ಇದನ್ನು ಅವರೇ ಸ್ಪಷ್ಟಪಡಿಸಬೇಕು ಅಷ್ಟೇ.

Leave a Comment

error: Content is protected !!