Salman Khan: ಪೂಜಾ ಹೆಗಡೆ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೆಷ್ಟು?

Pooja Hegde ಕರಾವಳಿ ಬೆಡಗಿ ಆಗಿರುವಂತಹ ಪೂಜಾ ಹೆಗಡೆ ನಾಯಕನಟಿಯಾಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್(Salman Khan) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಿಸಿ ಕ ಭಾಯ್ ಕಿಸಿ ಕ ಜಾನ್(Kisi Ka Bhai Kisi Ki Jaan) ಸಿನಿಮಾ ಇತ್ತೀಚಿಗಷ್ಟೇ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು.

ಈ ಸಿನಿಮಾದ ಬಿಡುಗಡೆಗು ಮುನ್ನ ಇಬ್ಬರು ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಅತಿ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವಂತಹ ಗಾಳಿ ಸುದ್ದಿಗಳು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಾಲಿವುಡ್ ಅಂಗಳದಲ್ಲಿ ಓಡಾಡಿದ್ದವು. ಅದಾದ ನಂತರವೇ ಈ ಸಿನಿಮಾ ಬಿಡುಗಡೆಯಾಗಿದ್ದು.

ಸಾಕಷ್ಟು ದೊಡ್ಡ ಮಟ್ಟದ ತಾರಾ ಬಳಗ ಇದ್ದರೂ ಕೂಡ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ನೀರಿಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ ಬಿದ್ದಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಸಲ್ಮಾನ್ ಖಾನ್(Salman Khan) ಫಿಲಂ ಎಂದರೆ ನೋಡೋದಕ್ಕೆ ಚೆನ್ನಾಗಿ ಇರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಜೋರಾಗಿ ಸದ್ದು ಮಾಡುತ್ತೇ.

ಇನ್ನು ಬಾಕ್ಸ್ ಆಫೀಸ್ ಮೂಲಗಳು ಹೇಳಿರುವ ಪ್ರಕಾರ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗಡೆ(Pooja Hegde) ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಈಗಾಗಲೇ ಸದ್ಯಕ್ಕೆ 90 ಕೋಟಿ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಕಲೆಕ್ಷನ್ ಕೂಡ ಮಂಕಾಗಿದೆ. ಮುಂದಿನ ದಿನಗಳಲ್ಲಿ ಒಟ್ಟಾರೆಯಾಗಿ ಇದು ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!