MsDhoni: ಎಂಎಸ್ ಧೋನಿಗಿಂತ ಇವರೇ ಬೆಸ್ಟ್ ಫಿನಿಷರ್ ಎಂದ ಮಾಜಿ ಸಿಎಸ್‌ಕೆ ಆಟಗಾರ ಇಮ್ರಾನ್ ತಾಹಿರ್!

Imran Tahir ಸದ್ಯಕ್ಕೆ ಐಪಿಎಲ್(IPL) ಭರದಿಂದ ಸಾಗುತ್ತಿದ್ದು ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಪಂದ್ಯಗಳನ್ನು ತಪ್ಪದೇ ವೀಕ್ಷಿಸುತ್ತಿದ್ದು ಪ್ರತಿಯೊಂದು ಐಪಿಎಲ್ ಪಂದ್ಯಗಳು ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚಕ ಅನುಭವವನ್ನು ನೀಡುತ್ತಿವೆ. ದಿನೇ ದಿನೇ ಐಪಿಎಲ್ ಪಂದ್ಯಗಳು ಸಿನಿಮಾ ಸ್ಟೋರಿಗಳಿಗಿಂತ ಹೆಚ್ಚು ಟ್ವಿಸ್ಟ್ ಅನ್ನು ನೀಡುತ್ತಿವೆ.

ಅದರಲ್ಲೂ ವಿಶೇಷವಾಗಿ ಈ ಬಾರಿಯ ಐಪಿಎಲ್ ಪಂದ್ಯ ಎನ್ನುವುದು ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ಅಭಿಮಾನಿಗಳಿಗೆ ಸಾಕಷ್ಟು ಬಾವುಕ ಕ್ಷಣಗಳನ್ನು ನೀಡುವಂತಹ ಸೀಸನ್ ಆಗಿದ್ದು ದೊಡ್ಡ ಮಟ್ಟದ ಧೋನಿ ಅಭಿಮಾನಿಗಳು ಕೂಡ ಪಂದ್ಯಗಳು ಕ್ರೀಡಾಂಗಣದಲ್ಲಿ ಬಂದು ವೀಕ್ಷಿಸುವ ಮೂಲಕ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.

ಅದರಲ್ಲೂ 42ನೇ ವಯಸ್ಸಿನಲ್ಲಿ ಕೂಡ ಯುವ ಕ್ರಿಕೆಟಿಗರು ಕೂಡ ನಾಚುವಂತೆ ಸಿಕ್ಸರ್ ಗಳನ್ನು ಬಾರಿಸುತ್ತಿರುವ ಧೋನಿ(Dhoni) ಪ್ರತಿಯೊಬ್ಬರ ಮನ ಗೆಲ್ಲುತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಚೆನ್ನೈ ತಂಡದ ಮಾಜಿ ಆಟಗಾರ ಆಗಿರುವ ಇಮ್ರಾನ್ ತಾಹಿರ್(Imran Tahir) ಧೋನಿಗಿಂತ ಮತ್ತೊಬ್ಬ ಆಟಗಾರನೇ ಬೆಸ್ಟ್ ಫಿನಿಶರ್ ಎಂಬುದಾಗಿ ಉತ್ತರ ನೀಡಿದ್ದಾರೆ‌.

ಸೌತ್ ಆಫ್ರಿಕಾ ಮೂಲದ ಆಟಗಾರ ಆಗಿರುವ ಇಮ್ರಾನ್ ತಹೀರ್ ದೋನಿ ಅವರಿಗಿಂತ ಎಬಿಡಿ ವಿಲಿಯರ್ಸ್(Ab devilleirs) ಅವರೇ ಅತ್ಯುತ್ತಮ ಫಿನಿಶ್ವರ್ ಯಾಕೆಂದರೆ ಅವರನ್ನು ನಾನು ಹತ್ತಿರದಿಂದ ಬಲ್ಲವನಾಗಿದ್ದು ಅವರ ರೀತಿಯಲ್ಲಿ ಆಡುವ ಮತ್ತೊಬ್ಬ ಕ್ರಿಕೆಟಗ ಎಂಬುದಾಗಿ ಎಬಿಡಿ(Abd) ಬಗ್ಗೆ ಗುಣಗಾನವನ್ನು ಮಾಡಿದ್ದಾರೆ.

Leave a Comment

error: Content is protected !!