Prabhudeva: ಪ್ರಭುದೇವ ಅವರ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಗೊತ್ತಾ?

Prabhudeva ಕನ್ನಡದ ಮೂಲ ಪ್ರತಿಭೆ ಆಗಿರುವಂತಹ ಪ್ರಭುದೇವ(Prabhudeva) ಅವರು ಈಗಾಗಲೇ ಭಾರತೀಯ ಚಿತ್ರರಂಗದಾದ್ಯಂತ ನಿರ್ದೇಶಕ ನಟ ಹಾಗೂ ನೃತ್ಯಗಾರನಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರತಿಯೊಂದು ಭಾಷೆಯ ಪ್ರೇಕ್ಷಕರು ಕೂಡ ಅವರನ್ನು ಭಾರತದ ಮೈಕಲ್ ಜಾಕ್ಸನ್(Michael Jackson) ಎಂಬುದಾಗಿ ಕರೆಯುತ್ತಾರೆ.

ಇನ್ನು ಇದೇ ಕನ್ನಡದ ಪ್ರತಿಭೆ ಈಗ ಕನ್ನಡದ ಅತ್ಯಂತ ಬಹು ನೆಚ್ಚಿನ ಟಿವಿ ಕಾರ್ಯಕ್ರಮ ಆಗಿರುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸುವ ಮೂಲಕ ತಮ್ಮ ಜೀವನದ ಸಾಧನೆಯ ಪುಟಗಳನ್ನು ಜನರ ಮುಂದೆ ಬಿಚ್ಚಿಟ್ಟಿದ್ದರು.

ಜೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರವಾದಂತಹ ಈ ಎರಡು ದಿನದ ಎಪಿಸೋಡ್ ಗಳನ್ನು ಇಡೀ ಕರ್ನಾಟಕದ ಜನತೆಯೇ ಸಂಜೆ ಆದನಂತರ ಟಿವಿಯ ಮುಂದೆ ಕುಂತು ನೋಡಿದ್ದರು. ಹಾಗಿದ್ದರೆ ಬನ್ನಿ ಈ ಕಾರ್ಯಕ್ರಮ ಎಷ್ಟು ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ.

ಈಗಾಗಲೇ ರೇಟಿಂಗ್ ಮಾಪನದ ಪ್ರಕಾರ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಪ್ರಭುದೇವ ಅವರ ಎಪಿಸೋಡ್ ಭರ್ಜರಿ 5.7 TVR ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದ್ದು ಜನರು ಈ ಕಾರ್ಯಕ್ರಮವನ್ನು ಇಷ್ಟಪಟ್ಟಿದ್ದಾರೆ ಎಂಬುದಾಗಿ ಈ ಮೂಲಕ ತಿಳಿದು ಬರುತ್ತದೆ. ಪ್ರಭುದೇವ(Prabhudeva) ಅವರ ಎಪಿಸೋಡ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!