ಸೀರೆ ಅಂಗಡಿಯಲ್ಲಿ ತಮ್ಮ ಪತ್ನಿ ಅಶ್ವಿನಿ ಅವರ ಕಾಲೆಳೆದ ಪುನೀತ್ ರಾಜಕುಮಾರ್; ವಿಡಿಯೋ ವೈರಲ್!

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅಣ್ಣಾವ್ರ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಿಕ್ಕ ವಯಸ್ಸಿನಿಂದಲೂ ಕೂಡ ಬಾಲ ನಟನಾಗಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸನ್ನು ಗೆದ್ದವರು. ಕೇವಲ 10ನೇ ವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿಯನ್ನು ಗೆದ್ದಂತಹ ಪ್ರತಿಭಾನ್ವಿತ ಎಂದರೆ ಅವರ ಸಾಮರ್ಥ್ಯ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜಿಸಿ.

ಅಷ್ಟರಮಟ್ಟಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನಪ್ರಿಯತೆ ಹಾಗೂ ಪ್ರತಿಭೆ ಎನ್ನುವುದು ಚಿಕ್ಕ ಮಗುವಿನಿಂದಲೇ ಇತ್ತು. ನಂತರ ಅಪ್ಪು ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಹೀರೋ ಗಿರಿಯನ್ನು ಸಂಪಾದಿಸುವ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಸಿಂಹಾಸನದಲ್ಲಿ ರಾಜರತ್ನನಾಗಿ ಮೆರೆಯುತ್ತಾರೆ. ಆದರೆ ಅವರನ್ನು ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ಕಳೆದುಕೊಳ್ಳುತ್ತೇವೆ ಎನ್ನುವ ಒಂದು ಚಿಕ್ಕ ಸುಳಿವು ಕೂಡ ನಮಗೆ ಇಲ್ಲದಾಗಿ ಹೋಯಿತು.

ಇನ್ನು ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಕೊನೆಯ ಸಿನಿಮಾ ಆಗಿರುವ ಗಂಧದಗುಡಿಯನ್ನು ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇದೇ ಅಕ್ಟೋಬರ್ 28ರಂದು ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಗಂಧದಗುಡಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಪುನೀತ್ ಪರ್ವ ಎನ್ನುವ ಹೆಸರಿನಲ್ಲಿ ಅದ್ದೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿಸಿದ್ದರು. ಈ ಕಾರ್ಯಕ್ರಮಕ್ಕೆ ಕೇವಲ ಕನ್ನಡ ಚಿತ್ರರಂಗದ ಗಣ್ಯರು ಮಾತ್ರವಲ್ಲದೆ ಬಹುಭಾಷಾ ತಾರಿಯರು ಕೂಡ ಆಗಮಿಸಿ, ಕಾರ್ಯಕ್ರಮವನ್ನು ಚಂದಗಾಣಿಸಿದ್ದರು.

ಇನ್ನು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಯಾವುದೋ ಒಂದು ಮಳಿಗೆಯ ಉದ್ಘಾಟನೆ ಸಮಾರಂಭಕ್ಕೆ ಹೋಗಿ ಅಲ್ಲಿ ತಮ್ಮ ಪತ್ನಿಯ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸೀರೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ತಮಾಷೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗುತ್ತಿದೆ. ಇದು ಈಗ ಅಭಿಮಾನಿಗಳ ಕಣ್ಣಿಗೂ ಕೂಡ ಬಿದ್ದಿದ್ದು ಎಲ್ಲರೂ ಕೂಡ ಈ ವಿಡಿಯೋ ನೋಡಿ ಎಮೋಷನಲ್ ಆಗಿದ್ದಾರೆ. ಮತ್ತೊಮ್ಮೆ ಕರುನಾಡಿನಲ್ಲಿಯೇ ಪವರ್ ಸ್ಟಾರ್ ಹುಟ್ಟಿ ಬರಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!