ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಯೂರಿ ಗೆ ಸಿಕ್ಕ ಒಟ್ಟೂ ಸಂಭಾವನೆ ಎಷ್ಟು ಗೊತ್ತಾ?

9 ಹೊಸ ಮಂದಿ, 9 ಹಳೆ ಮಂದಿಯಿಂದ ಕೂಡಿದ ಬಿಗ್ ಬಾಸ್ ನ 9ನೇ ಸೀಸನ್ ಜೋರಾಗಿ ಸದ್ದು ಮಾಡುತ್ತಿದೆ. ಎಲ್ಲಾ ಸೀಸನ್ಗಳಂತೆ ಈ ಬಾರಿಯು ಹೊಸ ಹೊಸ ಟಾಸ್ಕ್ ಗಳನ್ನು ಸ್ಪರ್ಧಿಗಳಿಗಾಗಿ ಏರ್ಪಡಿಸಿ, ನೋಡುಗರ ಚಿತ್ತ ಅತ್ತ ಸರಿಯದಂತೆ ಬಿಗ್ ಬಾಸ್ ನ ಕಾರ್ಯ ನಡೆಯುತ್ತಿದೆ. ಸುಂದರ ಗೀತೆಯೊಂದಿಗೆ ಪ್ರಾರಂಭವಾಗುವ ಬೆಳಗಿನಜಾವವು ದಿನ ಕಳೆಯುತ್ತಾ ರಂಪಾಟಗಳ ಸುರಾಗಬಹುದು; ಇಲ್ಲವೇ ಮನರಂಜನೆಯಿಂದ ಕೂಡಿರಬಹುದು ಅಥವಾ ಸ್ಪರ್ಧಿಗಳ ಮರೆಯಲಾರದ ಘಟನೆಗಳ ನೆನಪಿಸುವ ಭಾವುಕ ಕ್ಷಣಗಳಿಂದ ತುಂಬಿರಬಹುದು.

ಬಿಗ್ ಬಾಸ್ ಮನೆಗೆ ‘ನಾನು ಅಷ್ಟಾಗಿ ಎಲ್ಲರೊಂದಿಗೆ ಬೆರೆಯುವುದಿಲ್ಲ’ ಎನ್ನುತ್ತಲೆ ಎಂಟ್ರಿ ಕೊಟ್ಟ ಮುದ್ದು ಮೊಗದ ತಾರೆ, ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿಯವರು ಬಿಗ್ ಬಾಸ್ ಮನೆಯ ಸದಸ್ಯರ ಪ್ರೀತಿ, ಸ್ನೇಹವನ್ನು ಗಳಿಸಿಯಾಗಿತ್ತು. ತನ್ನ ಒಂದುವರೆ ವರ್ಷದ ಮುದ್ದು ಕಂದಮ್ಮನನ್ನು ನೆನೆದು, ಟಾಸ್ಕ್ಗಳಲ್ಲಿ ಉಳಿದವರಷ್ಟು ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ಮಗುವನ್ನು ಕಾಣದೆ, ಅವನನ್ನು ನೋಡಲು ಆಸೆಯಾಗುತ್ತಿದೆ ಎಂದು ಆಗಾಗ ಅಳುತ್ತಿದ್ದರು.

ಈ ಬಾರಿಯ ಎಲಿಮಿನೇಷನ್ನಲ್ಲಿ ಕೊನೆಯದಾಗಿ ಉಳಿದವರು ಮಯೂರಿ ಮತ್ತು ನೇಹಾ. ಎರಡು ಬೈಕ್ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿತ್ತು. ಸ್ಪರ್ಧಿಗಳೆಲ್ಲ ಬಾಯ ಮೇಲೆ ಕೈ ಇಟ್ಟು ನೋಡುತ್ತಿದ್ದರು. ಒಂದು ಬೈಕಲ್ಲಿ ನೇಹಾ ಮತ್ತು ಇನ್ನೊಂದು ಬೈಕ್ ನಲ್ಲಿ ಮಯೂರಿಯವರು ಕುಳಿತರು. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯದಾಗಿ ಸೇಫ್ ಆದವರು ನೇಹಾ. ಸವಾರನೊಂದಿಗೆ ಬೈಕ್ ನಲ್ಲಿ ಕೂತು ಮಯೂರಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದರು.

ಕೆಲವೇ ಕೆಲವು ವಾರಗಳಲ್ಲಿ ನಟಿ ಮಯೂರಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ. ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದ ನಟಿ ಮಯೂರಿ ಬಿಗ್ ಬಾಸ್ ಮನೆಯಲ್ಲಿ ಸೋಲು ಅನುಭವಿಸಿದರು. ಬಿಗ್ ಬಾಸ್ ಮನೆಯಲ್ಲಿ ಹೊರ ಬಂದಿದ್ದರೂ ಕೂಡ ಮಯೂರಿ ಅವರು ಸಂಭಾವನೆ ವಿಚಾರದಲ್ಲಿ ಗೆಲುವ ಸಾಧಿಸಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆದ ಟಾಪ್ ಸ್ಪರ್ಧಿ ಗಳ ಪಟ್ಟಿಯಲ್ಲಿ ಮಯೂರಿ ಅವರು ಹೆಸರು ಕೂಡ ವರದಿ ಆಗಿದೆ. ಪ್ರತಿ ವಾರಕ್ಕೆ ಮಯೂರಿ ಅವರಿಗೆ ಎರಡರಿಂದ ಮೂರು ಲಕ್ಷ ರೂಪಾಯಿ ಸಂಭಾವನೆ ನೀಡಿರುವ ಮಾಹಿತಿ ಇದೆ. ಬಿಗ್ ಬಾಸ್ ಇತಿಹಾಸ ದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆದ ಕಿರುತೆರೆ ನಟಿಯರ ಲಿಸ್ಟ್ ನಲ್ಲಿ ಮಯೂರಿ ಅವರ ಹೆಸರು ಕೂಡ ಇದೆ ಎಂಬುದು ಖುಷಿಯ ವಿಚಾರ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದು ಈಗ ಮಯೂರಿ ತನ್ನ ಪುಟ್ಟ ಮಗನ ಜೋತೆ ಸಂತಸ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇಷ್ಟು ದಿವಸ ತನ್ನ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಜೀವನ ಕಳೆದಿದ್ದ ಮಯೂರಿ ಗೆ ಬಿಗ್ ಬಾಸ್ ಮನೆಯಲ್ಲಿ ಆಟ ಆಡಲು ಕಂಟಕ ಆಗಿದ್ದು ತನ್ನ ಪುಟ್ಟ ಮಗನ ನೆನಪುಗಳೇ..

Leave a Comment

error: Content is protected !!