Puneeth Rajkumar: ರಾಜಕೀಯದ ಬಗ್ಗೆ ಪುನೀತ್ ರಾಜಕುಮಾರ್ ಯಾವ ಹೇಳಿಕೆಯನ್ನು ನೀಡಿದ್ರು ಗೊತ್ತಾ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Puneeth Rajkumar ಕನ್ನಡ ಚಿತ್ರರಂಗದ ಅಜಾತಶತ್ರು ನಟ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ರೀತಿಯ ಸಿನಿಮಾ ಅಥವಾ ಸಿನಿಮಾ ಹೊರತುಪಡಿಸಿ ದಂತಹ ವಿಚಾರಗಳಿಗೆ ಕೆಟ್ಟ ರೀತಿಯಲ್ಲಿ ಬಿಂಬಿತವಾದವರಲ್ಲ. ಅದಕ್ಕಾಗಿ ಅವರನ್ನು ಬೆಟ್ಟದ ಹೂವು ಎಂಬುದಾಗಿ ವಿಶೇಷವಾಗಿ ಕರೆಯಲಾಗುತ್ತಿತ್ತು.

ಕನ್ನಡ ಚಿತ್ರರಂಗದ ಧೀಮಂತ ನಟನ ಮಗ ಎನ್ನುವ ಕಾರಣಕ್ಕಾಗಿ ಯಾವತ್ತೂ ಕೂಡ ಬೇರೆಯವರ ಎದುರುಗಡೆ ಅಹಂಕಾರವನ್ನು ತೋರಿಸಿದವರಲ್ಲ. ಎಲ್ಲರನ್ನೂ ಕೂಡ ತಮ್ಮ ಸಮಾನ ತಮಗಿಂತ ಹೆಚ್ಚಾಗಿ ಕಾಣುತ್ತಿದ್ದರು ಪುನೀತ್ ರಾಜಕುಮಾರ್(Puneeth Rajkumar). ಅದಕ್ಕಾಗಿ ಅವರನ್ನು ಎಲ್ಲರೂ ಇಷ್ಟಪಡುತ್ತಿದ್ದರು.

ರಾಜಕಾರಣದಲ್ಲಿ ಕೂಡ ಅವರ ಹೆಸರು ಸಾಕಷ್ಟು ಬಾರಿ ಕೇಳಿ ಬಂದಿದ್ದರು ಕೂಡ ಅವರು ಯಾವತ್ತೂ ಕೂಡ ರಾಜಕೀಯಕ್ಕೆ ಅಥವಾ ರಾಜಕೀಯ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕೆ ಹೋಗಲಿಲ್ಲ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ಅವರು ನೀಡಿದ್ದ ಒಂದು ಹೇಳಿಕೆ ಈಗ ವೈರಲ್ ಆಗುತ್ತಿದ್ದು ಅದರಲ್ಲಿ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಪುನೀತ್ ರಾಜಕುಮಾರ್, ರವರು ನಾನೊಬ್ಬ ಕಲಾವಿದನಾಗಿ ಸಿನಿಮಾದಲ್ಲಿ ಗುರುತಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತೇನೆಯೇ ಹೊರತು ರಾಜಕಾರಣದಲ್ಲಲ್ಲ. ನಾನು ಪ್ರತಿ ಬಾರಿ ಕೂಡ ಜವಾಬ್ದಾರಿಯುತ ಮತದಾರರಾಗಿ ನಿಮ್ಮ ಮತವನ್ನು ಚಲಾಯಿಸಿ ಎಂಬುದಾಗಿ ಕೇಳಿದ್ದೇನೆ ವಿನಹ ಯಾವುದೇ ಪಕ್ಷ ಅಥವಾ ರಾಜಕೀಯ ವ್ಯಕ್ತಿಯ ಬಗ್ಗೆ ಪ್ರಚಾರವನ್ನು ನೀಡಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ರೀತಿ ಪಾರದರ್ಶಕ ವ್ಯಕ್ತಿತ್ವವನ್ನು ಹೊಂದಿರುವ ಕಾರಣಕ್ಕಾಗಿಯೇ ಅಪ್ಪು(Appu) ಎಲ್ಲರಿಗೂ ಇಷ್ಟ ಆಗಿದ್ದು.

Leave a Comment

error: Content is protected !!